»   » ರಿಯಲ್ ಸ್ಟಾರ್ ಉಪ್ಪಿ 2 ಚಿತ್ರದಲ್ಲಿ ಪರುಲ್ ಯಾದವ್

ರಿಯಲ್ ಸ್ಟಾರ್ ಉಪ್ಪಿ 2 ಚಿತ್ರದಲ್ಲಿ ಪರುಲ್ ಯಾದವ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಉಪ್ಪಿ 2'. ಈ ಚಿತ್ರಕ್ಕೆ ನಾಯಕಿಯಾಗಿ ರಷ್ಯಾದ ಬೆಡಗಿ ಹಾಗೂ ರೂಪದರ್ಶಿ ಕ್ರಿಸ್ಟಿನಾ ಅಖೀವಾ ಅವರನ್ನು ಆಯ್ಕೆ ಮಾಡಿಯಾಗಿದೆ. ಇದೀಗ ಹೊಸ ಬೆಡಗಿಯೂ 'ಉಪ್ಪಿಟ್ಟು' ಸವಿಯಲು ಬರುತ್ತಿದ್ದಾರೆ.

ಯೋಗರಾಜ್ ಭಟ್ ಅವರ 'ಪರಪಂಚ' ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಪರುಲ್ ಯಾದವ್, ಇದೀಗ ಉಪ್ಪಿ 2 ಟೀಂ ಸೇರಲಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಿಂದ ವಾಪಸ್ ಆಗಿರುವ ಅವರು ಉಪ್ಪಿ 2 ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಅಲ್ಲಿಗೆ ಉಪ್ಪಿ 2 ಚಿತ್ರದ ಇಬ್ಬರು ನಾಯಕಿಯರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. [ರಿಯಲ್ ಸ್ಟಾರ್ 'ಉಪ್ಪಿ 2' ಜತೆ ರಷ್ಯನ್ ಕೇಸರಿಬಾತ್]


ಇನ್ನು ಉಪೇಂದ್ರ ಕೂಡ ಹಳೆ ಕಮಿಟ್ ಮೆಂಟ್ ಗಳನ್ನು ಬಹುತೇಕ ಮುಗಿಸಿಕೊಂಡಿದ್ದಾರೆ. ಜುಲೈನಲ್ಲಿ ಉಪ್ಪಿ 2 ಚಿತ್ರ ಸೆಟ್ಟೇರಲಿದ್ದು ಪರುಲ್ ಸಹ ಉಪ್ಪಿ 2 ತಂಡ ಸೇರಲಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕಿ ಪ್ರಿಯಾಂಕಾ ಉಪೇಂದ್ರ ಅವರು ಮಾತನಾಡುತ್ತಾ, ಚಿತ್ರದಲ್ಲಿ ಪರುಲ್ ಅವರದು ಪ್ರಮುಖ ಪಾತ್ರ. ತೀರಾ ಇತ್ತೀಚೆಗಷ್ಟೇ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಗುರುಕಿರಣ ಸಂಗೀತ ಸಂಯೋಜನೆ ಮಾಡಿರುವ ಚಿತ್ರದ ಹಾಡುಗಳನ್ನು ಈಗಾಗಲೆ ರೆಕಾರ್ಡ್ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2015ರ ವೇಳೆಗೆ ಉಪ್ಪಿ 2 ಚಿತ್ರ ಪ್ರೇಕ್ಷಕರ ಕಣ್ಮುಂದೆ ಬರಲಿದೆ.

ಇನ್ನು ಕ್ರಿಸ್ಟಿನಾ ಅವರದು ಉಪ್ಪಿ 2 ಚಿತ್ರದಲ್ಲಿ ಮೂರು ಶೇಡ್ ಗಳುಳ್ಳ ಪಾತ್ರವಂತೆ. ಅದು ಏನು ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯ ತನಕ ಕಾಯಲೇಬೇಕು. ಈಗ ಚಿತ್ರಕ್ಕೆ ಇನ್ನೊಬ್ಬ ನಾಯಕಿ ಪರುಲ್ ಸಿಕ್ಕಿದ್ದು ಅವರ ಪಾತ್ರ ಏನು ಎತ್ತ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್)

English summary
According to sources, Actress Parul Yadav is playing one of the main lead role in upcoming movie Uppi 2, directed and acted by Real Star Upendra. The movie, which is all set to go on floors in July 2014, produced by Priyanka Upendra. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada