»   » ಓಲಾ ಕ್ಯಾಬ್ ನಲ್ಲಿ ಕನ್ನಡದ ನಟಿ ಪಾರ್ವತಿ ನಾಯರ್ ಗೆ ಕಿರುಕುಳ!

ಓಲಾ ಕ್ಯಾಬ್ ನಲ್ಲಿ ಕನ್ನಡದ ನಟಿ ಪಾರ್ವತಿ ನಾಯರ್ ಗೆ ಕಿರುಕುಳ!

Posted By:
Subscribe to Filmibeat Kannada
ಓಲಾ ಕ್ಯಾಬ್ಸ್ ಮಹಿಳೆಯರಿಗೆ ಸುರಕ್ಷಿತವಲ್ಲ, ನಟಿ ಪಾರ್ವತಿ ನಾಯರ್ ಟ್ವೀಟ್ | ಕಾರಣ? | Filmibeat Kannada

ಸ್ಯಾಂಡಲ್ ವುಡ್ ನಟಿಯರ ಮೇಲೆ ಆಗಿರುವ ಕಿರುಕುಳ ಪ್ರಕರಣಗಳು ಪದೇ ಪದೇ ಕೇಳಿ ಬರುತ್ತಿದೆ. ಇತ್ತೀಚಿಗಷ್ಟೆ ನಟಿ ಶೃತಿ ಹರಿಹರನ್ ಕೂಡ ಈ ಬಗ್ಗೆ ಮಾತನಾಡಿದ್ದರು. ಈಗ ಕನ್ನಡದ ಇನ್ನೊಬ್ಬ ನಟಿ ತನ್ನ ಮೇಲೆ ಆಗಿರುವ ಕಿರುಕುಳವನ್ನು ಬಹಿರಂಗ ಪಡಿಸಿದ್ದಾರೆ.

ನಟಿ ಪಾರ್ವತಿ ನಾಯರ್ ಅವರಿಗೆ ಓಲಾ ಕ್ಯಾಬ್ ನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆಯಂತೆ. ಈ ವಿಷಯವನ್ನು ಸ್ವತಃ ಅವರೇ ಅವರ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ಮಹಿಳಾ ದಿನಾಚರಣೆ ಇರುವ ಕಾರಣ ತಮ್ಮ ಮೇಲೆ ಈ ಹಿಂದೆ ನಡೆದಿರುವ ದೌರ್ಜನ್ಯವನ್ನು ಹೊರ ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ಪಾರ್ವತಿ ''ಓಲಾ ಕ್ಯಾಬ್ ನಲ್ಲಿ ಪ್ರಯಾಣ ಮಾಡುವುದು ಅಸುರಕ್ಷಿತ, ಓಲಾ ಕ್ಯಾಬ್ ಸೇವೆ ಥರ್ಡ್ ಗ್ರೇಡ್'' ಎಂದು ಓಲಾ ಕ್ಯಾಬ್ ಚಾಲಕನಿಂದ ಆಗಿರುವ ಕಿರುಕುಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ದಂಗಲ್' ಖ್ಯಾತಿಯ ನಟಿ ಜೈರಾ ವಾಸೀಮ್ ಗೆ ಲೈಂಗಿಕ ಕಿರುಕುಳ!

ತಮ್ಮ ಮೇಲೆ ಈ ರೀತಿಯ ಘಟನೆ ನಡೆದ ನಂತರ ಓಲಾ ಕಂಪನಿಯ ಕಸ್ಟಮರ್ ಕೇರ್ ಕೂಡ ಕರೆ ಮಾಡಿದೆ ಆದರೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಪಾರ್ವತಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಮಹಿಳಾ ದಿನಾಚರಣೆಯನ್ನು ಎಲ್ಲರೂ ಆಚರಿಸುತ್ತಿದ್ದಾರೆ ಆದರೆ ನಿಜಕ್ಕೂ ಇಂದು ಇರುವ ಮಹಿಳೆಯರ ವಾಸ್ತವ ಸ್ಥಿತಿಯನ್ನು ಪಾರ್ವತಿ ಬಿಚ್ಚಿಟ್ಟಿದ್ದಾರೆ.

ಅಂದಹಾಗೆ, ಪಾರ್ವತಿ ನಾಯರ್ ನಟ ಕಿಶೋರ್ ಅವರ 'ವಾಸ್ಕೋಡಿಗಾಮ' ಸಿನಿಮಾದಲ್ಲಿ ನಟಿಸಿದ್ದಾರೆ. 'ಸ್ಟೋರಿಕಥೆ' ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರ್ವತಿ ಪ್ರವೇಶ ಮಾಡಿದ್ದರು. ಉಳಿದಂತೆ, ಮಲೆಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ. ಕಮಲ್ ಹಾಸನ್ ನಟನೆ ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್' ಸಿನಿಮಾದಲ್ಲಿ ಸಹ ಪಾರ್ವತಿ ಕಾಣಿಸಿಕೊಂಡಿದ್ದರು.

ಲೈಂಗಿಕ ಕಿರುಕುಳದ ಬಗ್ಗೆ ಖಾರವಾಗಿ ಮಾತನಾಡಿದ ಕಿಂಗ್ ಖಾನ್

English summary
Kannada actress Parvathy Nair molested on Ola cab. Parvathy Nair has taken her twitter account to raise her voice against sexual harassment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada