For Quick Alerts
  ALLOW NOTIFICATIONS  
  For Daily Alerts

  ನಟಿ ಪೂಜಾಗಾಂಧಿ ಡೈರೆಕ್ಟರ್ಸ್ 'ಸ್ಪೆಷಲ್' ಚಿತ್ರಗಳು

  By Rajendra
  |

  ಇದೇ ಮೇ 31ಕ್ಕೆ ಕಿಕ್ ಕೊಡಲು ಬರುತ್ತಿದೆ ಡೈರೆಕ್ಟರ್ಸ್ ಸ್ಪೆಷಲ್. ಚಿತ್ರದ ಹೆಸರಲ್ಲೇ ಒಳ್ಳೆ ಬ್ರ್ಯಾಂಡ್ ನೇಮ್ ಇರುವ ಕಾರಣ ಕಿಕ್ ಕೊಟ್ಟೇ ಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. ಜೊತೆಗೆ ಮತ್ತೇರಿಸಲು ನಟಿ ಪೂಜಾಗಾಂಧಿ ಸಹ ಚಿತ್ರದಲ್ಲಿ ಸೊಂಟ ಕುಣಿಸಿದ್ದಾರೆ.

  ನಗ್ಸೋದೆ ನಮ್ ಬ್ಯುಸಿನೆಸ್ಸು...ಎಂಬ ಭರವಸೆಯನ್ನು ಗುರುಪ್ರಸಾದ್ ನೀಡಿದ್ದಾರೆ. ಗಾಂಧಿನಗರದ ಸಂಬಂಧಗಳ ಸುತ್ತ ಸುತ್ತುವ ಕಥೆಯಾದ ಕಾರಣ ಕುತೂಹಲ ಮೂಡಿಸಿದೆ. ನಟಿ ಪೂಜಾಗಾಂಧಿ ಅವರ ಸ್ಪೆಷಲ್ ಡಾನ್ಸ್ ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

  ಸತತ ಮೂರು ವರ್ಷಗಳ ಸುದೀರ್ಘ ಸಮಯವನ್ನು ಈ ಚಿತ್ರಕ್ಕಾಗಿ ಗುರುಪ್ರಸಾದ್ ಧಾರೆ ಎರೆದಿದ್ದಾರೆ. ಅವರು ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದೇ ಚಿತ್ರ ವಿಳಂಬವಾಗಲು ಕಾರಣ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಸಹ ಅವರದೇ. ಅವರ ಮೆಚ್ಚಿನ ತಾಂತ್ರಿಕ ಬಳಗವಾದ ಅನೂಪಿ ಸೀಳಿನ್ (ಸಂಗೀತ), ಮಹೇಂದ್ರ ಸಿಂಹ (ಛಾಯಾಗ್ರಹಣ) ಜೊತೆಗಿದೆ.

  ತಾಂತ್ರಿಕ ಬಳಗದಲ್ಲಿ ಯಾರ್‍ಯಾರು ಇದ್ದಾರೆ

  ತಾಂತ್ರಿಕ ಬಳಗದಲ್ಲಿ ಯಾರ್‍ಯಾರು ಇದ್ದಾರೆ

  ಅಜೇಯ ಪಿಕ್ಚರ್ಸ್ ಹಾಗೂ ಗುರುಪ್ರಸಾದ್ ಇಂಕ್ ಲಾಂಛನದಲ್ಲಿ ಎಂ.ಗೋವಿಂದ ನಿರ್ಮಿಸಿರುವ ಚಿತ್ರ ಇದಾಗಿದೆ. ಬಿ.ಎಸ್.ಕೆಂಪರಾಜ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.

  ಬಿ.ಆರ್.ಲಕ್ಷ್ಮಣರಾವ್ ಹಾಡುಗಳು

  ಬಿ.ಆರ್.ಲಕ್ಷ್ಮಣರಾವ್ ಹಾಡುಗಳು

  ಬಿ.ಆರ್.ಲಕ್ಷ್ಮಣರಾವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಗುರುಪ್ರಸಾದ್ ಅವರೇ ಕಲಾ ನಿರ್ದೇಶನ ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ರಂಗಾಯಣರಘು, ಪೂಜಾಗಾಂಧಿ, ರಾಮ್ ಮುಂತಾದವರಿದ್ದಾರೆ.

  ಇಷ್ಟಕ್ಕೂ ರಂಗಾಯಣ ರಘು ಪಾತ್ರ ಏನೆಂದರೆ

  ಇಷ್ಟಕ್ಕೂ ರಂಗಾಯಣ ರಘು ಪಾತ್ರ ಏನೆಂದರೆ

  ಇಷ್ಟಕ್ಕೂ ರಂಗಾಯಣ ರಘು ಅವರದು ಏನು ಪಾತ್ರ ಎಂದರೆ ಸ್ಪೆಷಲ್ ಎಂದಷ್ಟೇ ಹೇಳುತ್ತಾರೆ ಗುರು. ಇದುವರೆಗೂ ಕಥೆಯ ಗುಟ್ಟನ್ನು ಮಾತ್ರ ಗುರು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಇದೇನು ಕಥೆ ಎಂಬ ಕುತೂಹಲ ಇದ್ದೇ ಇದೆ.

  ಎರಡು ಜನ್ಮಕ್ಕೆ ಆಗುವಷ್ಟು ಕುಡಿದಿದ್ದೇನೆ

  ಎರಡು ಜನ್ಮಕ್ಕೆ ಆಗುವಷ್ಟು ಕುಡಿದಿದ್ದೇನೆ

  ಇತ್ತೀಚೆಗೆ ಮದ್ಯಪಾನಕ್ಕೆ ಗುಡ್ ಬೈ ಹೇಳಿರುವ ಅವರು ಶೀಘ್ರದಲ್ಲೇ ಧೂಮಪಾನಕ್ಕೂ ಗುಡ್ ಬೈ ಹೇಳುವ ಶಪಥ ಮಾಡಿದ್ದಾರೆ. ಇದುವರೆಗೂ ಎರಡು ಜನ್ಮಕ್ಕೆ ಆಗುವಷ್ಟು ಕುಡಿದಿದ್ದೀನಿ. ಇನ್ನು ಸಾಕು ಅನ್ನಿಸಿತು. ಹಾಗಾಗಿ ಬಿಟ್ಟುಬಿಟ್ಟೆ ಎಂದಿದ್ದಾರೆ.

  ನಿರ್ದೇಶನಕನೊಬ್ಬನ ಒದ್ದಾಟಗಳೇ ಚಿತ್ರದ ಕಥಾವಸ್ತು

  ನಿರ್ದೇಶನಕನೊಬ್ಬನ ಒದ್ದಾಟಗಳೇ ಚಿತ್ರದ ಕಥಾವಸ್ತು

  ಚಲನಚಿತ್ರ ನಿರ್ದೇಶನಕನೊಬ್ಬನ ಒದ್ದಾಟಗಳೇ ಈ ಚಿತ್ರದ ಕಥಾವಸ್ತು. ಆರಂಭದಲ್ಲಿ ಕೋಮಲ್ ಅವರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂಪೂರ್ಣ ಕಥೆ ಕೇಳಿದ ಬಳಿಕ ಅವರು ಕೈಎತ್ತಿದ್ದು ಗೊತ್ತೇ ಇದೆ.

  English summary
  Actress Pooja Gandhi special photos from the film Directors Special, which will be slated for release on 31st May. The film has a story of a filmy background directed by Guruprasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X