»   » ಕತ್ರಿಗುಪ್ಪೆ ನಿವಾಸದಲ್ಲಿ ನಟಿ ಪೂಜಾಗಾಂಧಿ ನಿಶ್ಚಿತಾರ್ಥ

ಕತ್ರಿಗುಪ್ಪೆ ನಿವಾಸದಲ್ಲಿ ನಟಿ ಪೂಜಾಗಾಂಧಿ ನಿಶ್ಚಿತಾರ್ಥ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಜೆಡಿಎಸ್ ಕಾರ್ಯಕರ್ತೆ ಪೂಜಾಗಾಂಧಿ ಅವರ ನಿಶ್ಚಿತಾರ್ಥ ಕತ್ರಿಗುಪ್ಪೆಯಲ್ಲಿನ ಅವರ ನಿವಾಸದಲ್ಲಿ ಗುರುವಾರ (ನ.15) ನೆರವೇರಿತು. ಇಂದು ಬೆಳಗ್ಗೆ 10.30ಕ್ಕೆ ಆರಂಭವಾದ ನಿಶ್ಚಿತಾರ್ಥ ಕಾರ್ಯಕ್ರಮ 11.30ಕ್ಕೆ ಮುಗಿಯಿತು.

ವಿಧಿವತ್ತಾಗಿ ನಡೆದ ಈ ನಿಶ್ಚಿತಾರ್ಥ ಕಾರ್ಯಕ್ರಮ ಕೇವಲ ಆಪ್ತರು ಹಾಗೂ ಕುಟುಂಬಿಕರು ಸಮ್ಮುಖದಲ್ಲಿ ನಡೆಯಿತು. ತಮ್ಮ ಬಹುಕಾಲದ ಮಿತ್ರ ಹಾಗೂ ಬಿಜಿನೆಸ್ ಮ್ಯಾನ್, ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರ ಜೊತೆ ಪೂಜಾಗಾಂಧಿ ವೀಳೆಯ ಶಾಸ್ತ್ರ ಕಾರ್ಯಕ್ರಮ ತಾಂಬೂಲ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಯವಾಯಿತು.

ಇವರಿಬ್ಬರ ಮದುವೆ ದಿನಾಂಕ ಇನ್ನೂ ನಿಗದಿಯಾಗದಿದ್ದರೂ 2013ರ ಏಪ್ರಿಲ್ ನಲ್ಲಿ ನೆರವೇರಲಿದೆ ಎನ್ನುತ್ತವೆ ಮೂಲಗಳು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಆಪ್ತ ಮಿತ್ರರು, ಹುಡುಗನ ಕಡೆಯವರಿಗಷ್ಟೆ ಆಮಂತ್ರಣ ನೀಡಲಾಗಿತ್ತು. ಮಾಧ್ಯಮದವರಿಗೂ ಆಹ್ವಾನವಿರಲಿಲ್ಲ. ಗ್ಯಾಲರಿಯಲ್ಲಿ ನೋಡಿ ನಿಶ್ಚಿತಾರ್ಥದ ಫೋಟೋಗಳು.


ಈ ಸಂದರ್ಭದಲ್ಲಿ ಕೊಂಚ ಮಾತಿಗೂ ಸಿಕ್ಕಿದ ಮದುಮಗಳು ಪೂಜಾಗಾಂಧಿ, ಸದ್ಯಕ್ಕೆ ಈ ಕ್ಷಣವನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ ಎಂದರು. ಆನಂದ್ ನಿಮಗೆ ಯಾವಾಗಿನಿಂದ ಪರಿಚಯ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗೇನು ಹೇಳಲಿಕ್ಕಾಗಲ್ಲ ಎಂದರು.

ಹೋಗಲಿ ಮದುವೆ ಯಾವಾಗ? ಎಂದು ಕೇಳಿದ್ದಕ್ಕೆ, ಶೀಘ್ರದಲ್ಲೇ ಎಲ್ಲವನ್ನೂ ಹೇಳುವುದಾಗಿ ಹೇಳಿ ಮಾಧ್ಯಮಗಳಿಂದ ಕಳಚಿಕೊಂಡರು. "ಎಲ್ಲಾ ಹುಡುಗಿಯರ ತರಹ ನಾನು ಮದುವೆಯಾಗುತ್ತಿದ್ದೇನೆ. ಮುಂದೆಯೂ ಚಿತ್ರಗಳಲ್ಲಿ ಅಭಿನಯಿಸುತ್ತೇನೆ. ತಮ್ಮ ಅಭಿಮಾನಿಗಳು ನನ್ನನು ಮುಂದೆಯೂ ಇದೇ ರೀತಿ ಆದರಿಸುತ್ತಾರೆ" ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಈ ನಿಶ್ಚಿತಾರ್ಥಕ್ಕೆ ಚಿತ್ರರಂಗದ ಗಣ್ಯರನ್ನೂ ಪೂಜಾಗಾಂಧಿ ಆಹ್ವಾನಿಸದೇ ಇದ್ದದ್ದು ಕೆಲವರಿಗೆ ಅಚ್ಚರಿ ಮೂಡಿಸಿತು. ಆದರೆ ಚಿತ್ರರಂಗದ ಗಣ್ಯರಿಗೆಂದೇ ಹೋಟೆಲ್ ಒಂದರಲ್ಲಿ ಔತಣಕೂಟವನ್ನೂ ಪೂಜಾಗಾಂಧಿ  ಏರ್ಪಡಿಸಿದ್ದಾರಂತೆ ಎಂಬ ಮಾಹಿತಿಯೂ ಇದೆ.

ಕೆಲದಿನಗಳ ಹಿಂದಷ್ಟೇ ಪೂಜಾಗಾಂಧಿ ಕೊಳ್ಳೆಗಾಲದಲ್ಲಿ ಹೆಸರಾಂತ ಅರ್ಚಕ ರಾಘವನ್‌ ನೇತೃತ್ವದಲ್ಲಿ ವಿಶೇಷ ಪೂಜೆ ಹೋಮ ಮಾಡಿಸಿದ್ದರು. ಆಗಲೇ ಪೂಜಾಗಾಂಧಿ ನಿಶ್ಚಿತಾರ್ಥ ಬಗ್ಗೆ ಸುದ್ದಿ ಲೀಕ್ ಆಗಿದ್ದು. ['ಮುಂಗಾರು ಮಳೆ' ಹುಡುಗಿಗೆ ಕೂಡಿಬಂದ ಕಂಕಣ]

'ಮುಂಗಾರು ಮಳೆ' ಮೂಲಕ ಆರಂಭವಾದ ಪೂಜಾಗಾಂಧಿ ಸಿನಿ ಪಯಣ 'ದಂಡುಪಾಳ್ಯ' ಹೊತ್ತಿಗೆ ಬಹಳಷ್ಟು ಬದಲಾಗಿತ್ತು. ಇದೀಗ 'ಮಠ' ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲೂ ಐಟಂ ಡಾನ್ಸ್ ಮಾಡುತ್ತಿದ್ದು ಕನ್ನಡಕ್ಕೆ ಹೊಸ ಐಟಂ ಹುಡುಗಿಯೂ ಸಿಕ್ಕಂತಾಗಿದೆ. (ಒನ್ಇಂಡಿಯಾ ಕನ್ನಡ)

English summary
Kannada actress Pooja Gandhi engagement held on 15th November Thursday with industrialist Anand Gowda in her Kathriguppe residence (Bangalore) at 10.30 am. At the helm of her career Pooja Gandhi is getting engaged in life. The wedding ring according to sources said to be the costliest diamond ring it is noted.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada