»   » ಸೆನ್ಸಾರ್ ನಲ್ಲಿ ನಿಟ್ಟುಸಿರುಬಿಟ್ಟ ಅಭಿನೇತ್ರಿ ಪೂಜಾಗಾಂಧಿ

ಸೆನ್ಸಾರ್ ನಲ್ಲಿ ನಿಟ್ಟುಸಿರುಬಿಟ್ಟ ಅಭಿನೇತ್ರಿ ಪೂಜಾಗಾಂಧಿ

Posted By:
Subscribe to Filmibeat Kannada

ಪೂಜಾಗಾಂಧಿ ಅಭಿನಯದ ಈ ಚಿತ್ರ ಸಾಕಷ್ಟು ವಾದ ವಿವಾದಗಳಿಗೆ ಕಾರಣವಾಗಿದ್ದು ಗೊತ್ತೇ ಇದೆ. ಚಿತ್ರಕ್ಕೆ ಬಿಟ್ಟಿ ಪ್ರಚಾರ ಸಿಕ್ಕಿ ಅದೂ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಅನ್ನಿ. ಆದರೆ ಚಿತ್ರದಲ್ಲಿನ ಕೆಲವು ಹಾಟ್ ದೃಶ್ಯಗಳು, ಪೂಜಾಗಾಂಧಿ ಅವರ 70-80ರ ದಶಕದ ಗೆಟಪ್ ಕುತೂಹಲ ಮೂಡಿಸುತ್ತಿದೆ.

ಇವೆಲ್ಲಾ ಕಾರಣಗಳಿಗಾಗಿ ಅಭಿಮಾನಿಗಳು, ಚಿತ್ರಪ್ರೇಮಿಗಳು 'ಅಭಿನೇತ್ರಿ' ಚಿತ್ರವನ್ನು ನಿರೀಕ್ಷಿಸುವಂತಾಗಿದೆ. ಇದೀಗ ಪೂಜಾಗಾಂಧಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮ್ಮ ಚಿತ್ರಕ್ಕೆ ಸೆನ್ಸಾರ್ ನಲ್ಲಿ ಯಾವ ಸರ್ಟಿಫಿಕೇಟ್ ಸಿಗುತ್ತದೋ ಎಂದು ಅವರು ಕಂಗಾಲಾಗಿದ್ದರು. [ಬೆತ್ತಲೆ ಬೆನ್ನು ತೋರಿದ 'ಅಭಿನೇತ್ರಿ' ಪೂಜಾಗಾಂಧಿ]

Abhinetri movie still

ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಪೂಜಾ ಪ್ರೊಡಕ್ಷನ್ಸ್ ಲಾಂಛನಲ್ಲಿ ಅವರ ತಾಯಿ ಜ್ಯೋತಿ ಗಾಂಧಿ ಜೊತೆಗೂಡಿ ನಿರ್ಮಿಸಿರುವ ಚೊಚ್ಚಲ ಚಿತ್ರ ಇದು. ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ಭಾರಿ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಪೂಜಾಗಾಂಧಿ.

ಈಗಾಗಲೆ ಚಿತ್ರದ ಟಿವಿ ಪ್ರಸಾರ ಹಕ್ಕುಗಳು ಜೀ ಕನ್ನಡ ಪಾಲಾಗಿವೆ. ಸರಿಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪೂಜಾಗಾಂಧಿ ಮುಂದಾಗಿದ್ದಾರೆ. ಪೂಜಾಗಾಂಧಿ ಅವರ ವೃತ್ತಿ ಬದುಕಿನಲ್ಲಿ ಈ ಚಿತ್ರ ಮತ್ತೊಂದು ತಿರುವು ನೀಡಲಿದೆಯಾ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಬೇಕು.

ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕನಿಂದ ನಿರ್ದೇಶಕರಾಗಿ ಬದಲಾಗುತ್ತಿದ್ದಾರೆ ಸತೀಶ್ ಪ್ರಧಾನ್. ಚಿತ್ರದಲ್ಲಿ ಮಕರಂದ್ ದೇಶಪಾಂಡೆ ಗಮನಾರ್ಹ ಪಾತ್ರ ಪೋಷಿಸಿದ್ದು, ಅತುಲ್ ಕುಲಕರ್ಣಿ, ಶ್ರೀನಗರ ಕಿಟ್ಟಿ ಸಹ ಇದ್ದಾರೆ. ಮನೋಮೂರ್ತಿ ಅವರ ಸಂಗೀತ, ಕೆಸಿ ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಫಿಲ್ಮಿಬೀಟ್ ಕನ್ನಡ)

English summary
Actress Pooja Gandhi finally relaxed over her upcoming movie Abhinetri. Because the movie clears censor formalities and got U/A certificate. Already Zee Kannada has acquired the sattellite rights of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada