For Quick Alerts
  ALLOW NOTIFICATIONS  
  For Daily Alerts

  ಮದುವೆ ಆಗ್ತೀರಂತೆ ಹೌದಾ ಅಂತ ಕೇಳಿದ್ರೆ ಹೀಗಂದ್ರು ಪೂಜಾ ಗಾಂಧಿ.!

  By Pavithra
  |

  ಅದ್ಯಾಕೋ ಏನೋ... ಕಳೆದ ಮೂರು ನಾಲ್ಕು ದಿನಗಳಿಂದ ಗಾಂಧಿನಗರದ ಮಂದಿ ಮೇಲೆ ಬರೀ ಗಾಳಿ ಸುದ್ದಿ ಹರಿದಾಡ್ತಿವೆ. ಸದ್ಯ ಈಗ ಅದೇ ರೀತಿಯ ಗುಸು ಗುಸುಉ ಸುದ್ದಿಯೊಂದು ಹರಿದಾಡ್ತಿದ್ದು, ಮಳೆ ಹುಡುಗಿ ಪೂಜಾ ಗಾಂಧಿ ಮದುವೆ ಫಿಕ್ಸ್ ಆಯ್ತಂತೆ ಅಂತ ಎಲ್ಲೆಡೆ ಹಬ್ಬಿದೆ.

  ಅದಕ್ಕೆಲ್ಲಾ ತೆರೆ ಎಳೆದಿರುವ ನಟಿ ಪೂಜಾಗಾಂಧಿ ಮದುವೆ ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿದ್ದಾರೆ. ಸದ್ದಿಲ್ಲದೆ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು ಮುಂದೆ ತೆರೆಗೆ ಬರಲಿರೋ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸ್ತಿದ್ದಾರಂತೆ. ಮೂರು ಸಿನಿಮಾಗಳ ಬಗ್ಗೆ ಪೂಜಾ ಅಭಿಪ್ರಾಯವೇನು ಸಿನಿಮಾ ಯಾವ ಹಂತದಲ್ಲಿದೆ ಎಲ್ಲದರ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ....

  ಗಾಸಿಪ್ ಬೇಡ ಅಂತಿದ್ದಾರೆ ಪೂಜಾ

  ಗಾಸಿಪ್ ಬೇಡ ಅಂತಿದ್ದಾರೆ ಪೂಜಾ

  ನಟಿ ಪೂಜಾಗಾಂಧಿ ಮದುವೆ ಆಗೋದಕ್ಕೆ ಸಿದ್ದವಾಗಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. ಆದರೆ ಈ ಸುದ್ದಿಯನ್ನ ಶುದ್ದ ಸುಳ್ಳು ಎಂದಿದ್ದಾರೆ ಪೂಜಾ. ಮದುವೆ ಬಗ್ಗೆ ಗಾಸಿಪ್ ಮಾಡೋದು ಬೇಡ, ಫಿಕ್ಸ್ ಆದಾಗ ನಾನೇ ತಿಳಿಸುತ್ತೇನೆ ಎಂದಿದ್ದಾರೆ.

  ಯಾಕೆ ಹೀಗಾಯ್ತು ಗೊತ್ತಿಲ್ಲ

  ಯಾಕೆ ಹೀಗಾಯ್ತು ಗೊತ್ತಿಲ್ಲ

  ಪೂಜಾಗಾಂಧಿ ಅವರ ವಾಟ್ಸ್ ಅಪ್ ಸ್ಟೇಟಸ್ ನೋಡಿ ಈ ರೀತಿಯ ಗೊಂದಲ ಶುರುವಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ವಾಟ್ಸ್ ಆಪ್ ನಲ್ಲಿ "ಲವ್ ಯು ಜಾನು" ಅನ್ನೋ ಸ್ಟೇಟಸ್ ಹಾಕಿದ್ರು. ಇದನ್ನ ನೋಡಿರೋ ಜನರು ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ.

  ತೆರೆಗೆ ಬರಲು ಸಿದ್ದವಾಯ್ತು ದಂಡುಪಾಳ್ಯ

  ತೆರೆಗೆ ಬರಲು ಸಿದ್ದವಾಯ್ತು ದಂಡುಪಾಳ್ಯ

  ಸದ್ಯ ಪೂಜಾಗಾಂಧಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ದಂಡುಪಾಳ್ಯ 3 ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು ತೆಲುಗು ಹಾಗೂ ಕನ್ನಡದಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನೂ ಪೂಜಾ ಅಭಿನಯದ ಜೆ ಡಿ ಚಕ್ರವರ್ತಿ ನಿರ್ದೇಶನದ ಉತಾಹಿ ಸಿನಿಮಾದ ಚಿತ್ರೀಕರಣ ಶೇಕಡ 70ರಷ್ಟು ಮುಗಿದಿದೆ.

  ಇನ್ನೆರೆಡು ಸಿನಿಮಾ ಯಾವಾಗ

  ಇನ್ನೆರೆಡು ಸಿನಿಮಾ ಯಾವಾಗ

  ಪೂಜಾಗಾಂಧಿ ಒಟ್ಟಿಗೆ ಮೂರು ಸಿನಿಮಾಗಳನ್ನ ನಿರ್ಮಾಣ ಮಾಡುವುದಾಗಿ ಅದ್ದೂರಿ ಮುಹೂರ್ತವನ್ನ ಮಾಡಿದ್ರು. ಮೂರು ಚಿತ್ರಗಳಲ್ಲಿ ಉತಾಹಿ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಕನ್ನಡ, ತಮಿಳು, ತೆಲುಗು, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಗೆ ಬರ್ತಿದೆ. ಉತಾಹಿ ಚಿತ್ರೀಕರಣ ಮುಗಿದ ನಂತರ ಮಿಕ್ಕ ಎರಡು ಸಿನಿಮಾಗಳ ಶೂಟಿಂಗ್ ಶುರುವಾಗಲಿದೆ.

  English summary
  Kannada Actress Pooja Gandhi spoke about her Marriage Gossip.
  Monday, December 4, 2017, 18:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X