For Quick Alerts
  ALLOW NOTIFICATIONS  
  For Daily Alerts

  ಚಂದನದ ಗೊಂಬೆ ಪೂಜಾ ಉಮಾಶಂಕರ್ ಮದ್ವೆ

  By ಜೇಮ್ಸ್ ಮಾರ್ಟಿನ್
  |

  ಕರ್ನಾಟಕ ಮೂಲದ ಶ್ರೀಲಂಕಾದ ನಟಿ ಪೂಜಾ ಗೌತಮಿ ಉಮಾಶಂಕರ್ ಮದುವೆಯಾಗಿದ್ದಾರೆ. ಶ್ರೀಲಂಕಾದ ಉದ್ಯಮಿ ಪ್ರಸನ್ ಡೇವಿಡ್ ವೆಧಾಕನ್ ಅವರನ್ನು ಇತ್ತೀಚೆಗೆ ವರಿಸಿದ್ದು, ಕುಟುಂಬಸ್ಥರು, ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.[ಚೆಂದದ ಗೊಂಬೆ ಪೂಜಾ ಮದುವೆ ಸಂಭ್ರಮ]

  ಕಳೆದ ಎರಡು ವರ್ಷಗಳ ಹಿಂದೆ ರೂಪದರ್ಶಿ ದೀಪಕ್ ಷಣ್ಮುಗನಾಥನ್ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪೂಜಾ ಅವರು ನಂತರ ಸಂಬಂಧ ಕಡಿದುಕೊಂಡಿದ್ದರು. ಈಗ ಕಳೆದ ಭಾನುವಾರದಂದು ಕೊಲಂಬೋದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಪ್ರಸನ್ ಡೇವಿಡ್ ಜತೆ ಮದುವೆಯಾಗಿದ್ದಾರೆ. [ಕನ್ನಡದ ಗೊಂಬೆ ಪೂಜಾ ಸಿನಿ ಪುರಾಣ]

  2003ರಲ್ಲಿ ಮಾಧವನ್ ಜತೆ ಜೇ ಜೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪೂಜಾ 12 ತಮಿಳು ಐದಾರು ಸಿಂಹಳ ಚಿತ್ರ, ಒಂದೆರಡು ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಆಫರ್ ಗಾಗಿ ಕಾದಿದ್ದಾರೆ. [ಹಾಯ್ ಬೆಂಗ್ಳೂರ್ ವರದಿ ಬಂಡಲ್: ನಟಿ ಪೂಜಾ]

  ಪೂಜಾ ಅವರ ತಂದೆ ಎಚ್ ಆರ್ ಉಮಾಶಂಕರ್ ಅವರು ಕರ್ನಾಟಕದ ಶೃಂಗೇರಿ ಮೂಲದವರಾಗಿದ್ದು, ಪೂಜಾ ಅವರು ಆಲ್ದೂರು ಹಾಗೂ ಬೆಂಗಳೂರಿನಲ್ಲಿ ಶಾಲೆ, ಕಾಲೇಜು ಶಿಕ್ಷಣ ಮುಗಿಸಿ ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅಜಿತ್, ಪ್ರಶಾಂತ್, ಜೀವಾ ಸೇರಿದಂತೆ ಟಾಪ್ ನಟರ ಜತೆ ನಟಿಸಿರುವ ಪೂಜಾ ಅವರ ನಟನೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಹೆಮ್ಮೆ ಪಡುತ್ತಾರೆ.

  English summary
  Actress Pooja Umashankar, who hails from Shringeri in Karnataka, tied the knot with her beau Prasan David Vedhakan on Sunday, December 18 in Colombo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X