»   » ಕಿರುತೆರೆ ನಟಿ ಪ್ರತ್ಯೂಷ ಸಾವಿನ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು?

ಕಿರುತೆರೆ ನಟಿ ಪ್ರತ್ಯೂಷ ಸಾವಿನ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು?

Posted By: ಸೋನು ಗೌಡ
Subscribe to Filmibeat Kannada

ಹಿಂದಿ ಧಾರಾವಾಹಿ 'ಬಾಲಿಕ ವಧು' ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ನಿನ್ನೆ (ಏಪ್ರಿಲ್ 1) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಇವರ ಸಾವಿನ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ. 'ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆಗಿನ ಪ್ರೀತಿ ಬಗ್ಗೆ ಸಖತ್ ತಲೆಕೆಡಿಸಿಕೊಂಡಿದ್ದಳು ಎಂದು ಪ್ರತ್ಯೂಷ ಅವರ ಆತ್ಮೀಯ ಗೆಳತಿ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ತಿಳಿಸಿದ್ದಾರೆ.['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]

Actress Pratyusha tensed about her relationship says Rakhi Sawant

ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಖಿ ಸಾವಂತ್ ಅವರು, 'ಪ್ರತ್ಯೂಷ ಸಾವನ್ನಪ್ಪಿದ್ದಾಳೆ ಎಂದು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಪ್ರತ್ಯೂಷ ತನ್ನ ಜೀವನದಲ್ಲಿ ತುಂಬಾನೇ ಉತ್ಸಾಹಭರಿತಳಾಗಿದ್ದಳು. ಬಹಳ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದಳು, ಕೆಲವು ದಿನಗಳ ಹಿಂದೆಯಷ್ಟೇ ಆಕೆಯನ್ನು ಭೇಟಿಯಾಗಿದ್ದೆ' ಎಂದು ರಾಖಿ ಹೇಳಿದ್ದಾರೆ.

'ನಟಿ ಪ್ರತ್ಯೂಷ ಅವರನ್ನು ನಾನು ಭೇಟಿ ಮಾಡಿದ ಸಂದರ್ಭದಲ್ಲಿ ಅವಳು ತನ್ನ ಗೆಳೆಯ ರಾಹುಲ್ ಅವರ ಮಾಜಿ ಗೆಳತಿ ಸಲೋನಿ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದರು. ಪ್ರತ್ಯೂಷ ತುಂಬಾ ಭಾವನಾತ್ಮಕ ಹುಡುಗಿಯಾಗಿದ್ದಳು. ಆಕೆಯ ದುಃಖದ ಬಗ್ಗೆ ಕೇಳಿದ ತಕ್ಷಣ ಆಕೆಯ ಕಣ್ಣಲ್ಲಿ ನೀರು ಬರುತ್ತಿತ್ತು'.[ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಆತ್ಮಹತ್ಯೆ ಎಂಬ ಭೂತ!]

'ಪ್ರತ್ಯೂಷ ಎಂದಿಗೂ ತನ್ನ ಕೆಲಸದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಆಕೆ ತುಂಬಾ ತಲೆಕೆಡಿಸಿಕೊಳ್ಳಲು ಕಾರಣವಾಗಿದ್ದು ಆಕೆಯ ಹುಚ್ಚು ಪ್ರೀತಿ. ರಾಹುಲ್ ನನ್ನು ಪ್ರತ್ಯೂಷ ಬಹಳ ಪ್ರೀತಿಸುತ್ತಿದ್ದಳು. ಆತನನ್ನು ಬಿಟ್ಟು ಇರುತ್ತಿರಲಿಲ್ಲ. ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸತ್ಯ ಹೊರ ಬೀಳಲಿದೆ ಎಂದು ನಟಿ ಕಮ್ ಐಟಂ ಡ್ಯಾನ್ಸರ್ ರಾಖಿ ಸಾವಂತ್ ತಿಳಿಸಿದ್ದಾರೆ.[ಜಿಯಾಖಾನ್ ಸಾವಿನ ಪ್ರಕರಣ ಎಫ್ ಬಿಐ ತನಿಖೆಗೆ?]

ಕಲರ್ಸ್ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಸೀರಿಯಲ್ 'ಬಾಲಿಕಾ ವಧು'ವಿನಲ್ಲಿ ಪ್ರತ್ಯೂಷ 'ಆನಂದಿ' ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇವರ ಸಾವಿಗೆ ಇಡೀ ಹಿಂದಿ ಕಿರುತೆರೆ ಕ್ಷೇತ್ರ ಕಂಬನಿ ಮಿಡಿದಿದೆ. ಪ್ರತ್ಯೂಷಾ ಮತ್ತು ರಾಖಿ ಅವರ ಫೊಟೋ ಗ್ಯಾಲರಿ ನೋಡಿ ಸ್ಲೈಡುಗಳಲ್ಲಿ...

-
-
-
-
-
-
English summary
Bollywood actress-item dancer Rakhi Sawant, a close friend of TV actress Pratyusha Banerjee who allegedly committed suicide on Friday (April 1), says the "Balika Vadhu" star was "tensed" about her relationship with her boyfriend Rahul Raj Singh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada