»   » ಬಿಬಿಎಂಪಿ ಚುನಾವಣಾ ಕಣಕ್ಕೆ ನಟಿ ಪ್ರೇಮಾ

ಬಿಬಿಎಂಪಿ ಚುನಾವಣಾ ಕಣಕ್ಕೆ ನಟಿ ಪ್ರೇಮಾ

Posted By:
Subscribe to Filmibeat Kannada

ಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಒಂಥರಾ ಬಿಡಿಸಲಾಗದ ನಂಟು. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಜಿಗಿದು ಹೆಸರು ಮಾಡಿದ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ರೆಬೆಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ರಾಜಕೀಯ ರಂಗದಲ್ಲಿ ಜನಪ್ರಿಯವಾಗಿದ್ದಾರೆ.

ಇದೇ ಸಾಲಿಗೆ ಈಗ ಲೇಟೆಸ್ಟ್ ಎಂಟ್ರಿ ಕೊಡುವುದಕ್ಕೆ ನಟಿ ಪ್ರೇಮಾ ಸಿದ್ಧತೆ ನಡೆಸುತ್ತಿದ್ದಾರೆ. ಹಾಗನ್ನುತ್ತಿವೆ ಪ್ರೇಮಾ ಆಪ್ತ ವಲಯ. ಇತ್ತೀಚೆಗಷ್ಟೇ ರೂಪದರ್ಶಿಯಾಗಿ ಮಾಡೆಲಿಂಗ್ ರಂಗಕ್ಕೆ ಕಾಲಿಟ್ಟ ಪ್ರೇಮಾ, ಇದೀಗ ಸಮಾಜ ಸೇವೆ ಮಾಡುವುದಕ್ಕೆ ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿದ್ದಾರಂತೆ. [ನಟಿ ಪ್ರೇಮಾ ಮೇಲೆ ಹಾರಾಡಿದ ಗಾಸಿಪ್ ಗೂಬೆ]

Actress Prema to contest in BBMP elections

ಬರುವ ಬಿ.ಬಿ.ಎಂ.ಪಿ ಚುನಾವಣೆನಲ್ಲಿ, ವಾರ್ಡ್ ಒಂದರಿಂದ ಅಖಾಡಕ್ಕಿಳಿಯಲು ನಟಿ ಪ್ರೇಮಾ ಮನಸ್ಸು ಮಾಡಿದ್ದಾರಂತೆ. ಯಾವ ವಾರ್ಡ್ ಮೂಲಕ ಅನ್ನುವ ಮಾಹಿತಿ ಬಹಿರಂಗವಾಗಿಲ್ಲ. ಬಿ.ಬಿ.ಎಂ.ಪಿ ಎಲೆಕ್ಷನ್ ದಿನಾಂಕ ಕೂಡ ನಿಗದಿಯಾಗಿಲ್ಲ. ಆದ್ರೆ, ಪ್ರೇಮಾ ಮಾತ್ರ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ ಅನ್ನುತ್ತಿದ್ದಾರೆ ಪ್ರೇಮಾ ಹತ್ತಿರದಿಂದ ಬಲ್ಲವರು. [ಮಾಡೆಲಿಂಗ್ ಕ್ಷೇತ್ರಕ್ಕೆ ಬಲಗಾಲಿಟ್ಟು ಬಂದ ಪ್ರೇಮಾ]

2009 ರಲ್ಲಿ ರಿಲೀಸ್ ಆದ 'ಶಿಶಿರ' ಸಿನಿಮಾ ಬಿಟ್ಟರೆ, ಬಣ್ಣದ ಲೋಕದಿಂದ ಬಹುದೂರ ಸರಿದಿದ್ದ ನಟಿ ಪ್ರೇಮಾ ಈಗ ರಾಜಕೀಯ ರಂಗ ಪ್ರವೇಶ ಮಾಡುತ್ತಿರುವುದು ಎಲ್ಲರ ಕಣ್ಣರಳಿಸಿದೆ. (ಏಜೆನ್ಸೀಸ್)

English summary
According to the reports, Kannada Actress Prema has decided to contest in BBMP elections. However, Ward and other details are not yet disclosed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada