For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ'ನ ಜೊತೆ ಡ್ಯುಯೆಟ್ ಹಾಡೋ ರಾಣಿ ಯಾರು ಗೊತ್ತಾ?

  By Suneetha
  |

  ಬ್ಲಾಕ್ ಬಸ್ಟರ್ ಹಿಟ್ 'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ರಾಜಕುಮಾರ' ಸಿನಿಮಾ ಮತ್ತೆ ಸುದ್ದಿ ಮಾಡಿದೆ.

  ಇನ್ನು 'ರಾಜಕುಮಾರ' ಚಿತ್ರದಲ್ಲಿ ಪುನೀತ್ ಅವರ ಜೊತೆ ಡ್ಯುಯೆಟ್ ಹಾಡಲು ಬರುವ ಆ ಲಕ್ಕಿ ಹಿರೋಯಿನ್ ಯಾರಿರಬಹುದು ಎಂಬ ಮಾತು ಇಡೀ ಗಾಂಧಿನಗರದಲ್ಲಿ ಆಗಾಗ ಕೇಳಿಬರುತ್ತಲೇ ಇತ್ತು. ಇದೀಗ ಆ ಸುದ್ದಿಗೂ ಫುಲ್ ಸ್ಟಾಪ್ ಇಡುವ ಕಾಲ ಹತ್ತಿರವಾಗಿದೆ. ಹೌದು ಪವರ್ ಸ್ಟಾರ್ ಪುನೀತ್ ಅವರ 'ರಾಜಕುಮಾರ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ.[ಪವರ್ ಸ್ಟಾರ್ 'ದೊಡ್ಮನೆ ಹುಡುಗ' ಪಕ್ಕಾ ಲೋಕಲ್ ಫ್ಲೇವರ್ ಕಣ್ರೀ]

  ಈ ಮೊದಲು ನಟ ಪುನೀತ್ ರಾಜ್ ಕುಮಾರ್ ಅವರ 'ಪವರ್' ಚಿತ್ರಕ್ಕೆ ದಕ್ಷಿಣ ಭಾರತದ ನಟಿ ತ್ರಿಷಾ ಅವರು ಆಗಮಿಸಿ ತಮ್ಮ ಗ್ಲಾಮರ್ ಮತ್ತು ಅದ್ಭುತ ನಟನೆಯ ಮೂಲಕ ಇಡೀ ಸ್ಯಾಂಡಲ್ ವುಡ್ ಕ್ಷೇತ್ರದಲ್ಲೇ ಧೂಳೆಬ್ಬಿಸಿ ಹೋಗಿದ್ದರು.

  ಇದೀಗ ಮತ್ತೋರ್ವ ದಕ್ಷಿಣ ಭಾರತದ ನಟಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಬರಲು ತಯಾರಾಗಿ ನಿಂತಿದ್ದಾರೆ. ಈ ಸುದ್ದಿಯನ್ನು ಪಕ್ಕಾ ಮಾಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಸದ್ಯಕ್ಕೆ 'ರಾಜಕುಮಾರ' ಚಿತ್ರದ ಲೊಕೇಷನ್ ನ ಹುಡುಕಾಟದಲ್ಲಿ ವಿಶ್ವ ಪರ್ಯಟನೆ ನಡೆಸಿದ್ದಾರೆ.[ಪವರ್ ಸ್ಟಾರ್ ಅಪ್ಪು ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಉಡುಗೊರೆ]

  ಅಂದಹಾಗೆ ನಮ್ಮ ಅಪ್ಪು ಜೊತೆ ನಟಿಸಲಿರುವ ತೆಲುಗು-ತಮಿಳು ಚಿತ್ರರಂಗದ ಆ ನಟಿ ಯಾರಪ್ಪಾ ಎಂಬ ಕುತೂಹಲ ನಿಮಗಿದ್ಯಾ, ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ತಮಿಳು-ತೆಲುಗು ನಟಿ ಪ್ರಿಯಾ ಆನಂದ್

  ತಮಿಳು-ತೆಲುಗು ನಟಿ ಪ್ರಿಯಾ ಆನಂದ್

  ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮುದ್ದು ಮುಖದ ಚೆಲುವೆ ಪ್ರಿಯಾ ಆನಂದ್ ಅವರು ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರದಲ್ಲಿ ರಾಣಿಯಾಗಿ ಮಿಂಚಲಿದ್ದಾರೆ. 'ರಾಜಕುಮಾರ' ಚಿತ್ರದಲ್ಲಿ ದಕ್ಷಿಣ ಭಾರತದ ಸಂಪ್ರದಾಯದ ಹುಡುಗಿ ಮತ್ತು 'ಎನ್ ಆರ್ ಐ' ಆಗಿ ದ್ವಿಪಾತ್ರದಲ್ಲಿ ಮಿಂಚಲು ಪ್ರಿಯಾ ಆನಂದ್ ಅವರು ಸೂಕ್ತ ಎಂದು ಅವರನ್ನು ಆಯ್ಕೆ ಮಾಡಲಾಗಿದೆ. ತಮಿಳು ಸಿನಿಮಾ '180', 'ವನಕ್ಕಮ್ಮ್ ಚೆನ್ನೈ', 'ಇರುಂಬು ಕುತ್ತಿರೈ', 'ಎಥಿರ್ ನೀಚಲ್' ಮುಂತಾದ ಹಿಟ್ ಸಿನಿಮಾಗಳಲ್ಲಿ ಪ್ರಿಯಾ ಅವರು ಮಿಂಚಿದ್ದರು.

  'ರಾಜಕುಮಾರ' ಫೊಟೋ ಶೂಟ್

  'ರಾಜಕುಮಾರ' ಫೊಟೋ ಶೂಟ್

  'ರಾಜಕುಮಾರ' ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ವಿಶೇಷ ಫೊಟೋ ಶೂಟ್ ನಡೆಸಲಾಗಿತ್ತು. ಚಿತ್ರದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಇಡೀ ಚಿತ್ರತಂಡ.

  'ಕಸ್ತೂರಿ ನಿವಾಸ' ಹೋಲುವ ಪೋಸ್ಟರ್

  'ಕಸ್ತೂರಿ ನಿವಾಸ' ಹೋಲುವ ಪೋಸ್ಟರ್

  ಡಾ.ರಾಜ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಿದ್ದ 'ರಾಜಕುಮಾರ' ಚಿತ್ರದ ಪೋಸ್ಟರ್ ಗಳು ಅಣ್ಣಾವ್ರ 'ಕಸ್ತೂರಿ ನಿವಾಸ' ಚಿತ್ರದ ಪೋಸ್ಟರ್ ಗಳನ್ನು ಹೋಲುತ್ತಿದೆ. 'ಕಸ್ತೂರಿ ನಿವಾಸ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ಅವರ 'ರಾಜಕುಮಾರ' ಸಿನಿಮಾವನ್ನು ಹೋಲಿಕೆ ಮಾಡಿ ನಿರ್ದೇಶಕ ಸಂತೋಷ್ ಅವರು ಸಿನಿಮಾ ಮಾಡಿರಬಹುದೇ ಅನ್ನೋ ಅನುಮಾನ ಕಾಡುತ್ತಿದೆ. ಇದಕ್ಕೆ ಕಾಲವೇ ಉತ್ತರ ನೀಡಬೇಕು.

  ತಂದೆಯಾಗಿ ತಮಿಳು ನಟ ಶರತ್

  ತಂದೆಯಾಗಿ ತಮಿಳು ನಟ ಶರತ್

  'ಮೈನಾ' ಚಿತ್ರದಲ್ಲಿ ಸೂಪರ್ ಕಾಪ್, 'ಸಾರಥಿ' ಚಿತ್ರದಲ್ಲಿ ದರ್ಶನ್ ತಂದೆಯಾಗಿ ಕಾಣಿಸಿಕೊಂಡಿದ್ದ ತಮಿಳು ನಟ ಶರತ್ ಕುಮಾರ್ ಅವರು 'ರಾಜಕುಮಾರ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ಪುನೀತ್-ಸಂತೋಷ್

  ಪುನೀತ್-ಸಂತೋಷ್

  ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಸೆಟ್ಟೇರಿದ 'ರಾಜಕುಮಾರ' ಸಿನಿಮಾ, ಸಂತೋಷ್ ಆನಂದ್ ರಾಮ್ ಮತ್ತು ಪವರ್ ಸ್ಟಾರ್ ಜುಗಲ್ ಬಂದಿಯಲ್ಲಿ ಮೂಡಿಬರಲಿದೆ.(ಚಿತ್ರಗಳು: ಮಾರ್ಚ್ 17, 2015, ಪುನೀತ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದ ಚಿತ್ರ.)

  ಪ್ರೀತಿಯ ಅಪ್ಪಾಜಿ

  ಪ್ರೀತಿಯ ಅಪ್ಪಾಜಿ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಿರುವ 'ರಾಜಕುಮಾರ' ಸಿನಿಮಾ ಅಪ್ಪಾಜಿ ಅವರ ನಿಜ ಜೀವನಾಧರಿತ ಕಥೆಯಾಗಿರಬಹುದೇ?, ಎಂಬುದು ಸಿನಿಮಾ ಆರಂಭವಾದ ನಂತರ ಸಿನಿಮಾ ನಿರ್ಮಾಪಕರು ತಿಳಿಸಬೇಕಿದೆ.

  ಅಭಿಮಾನಿ ರಚಿಸಿದ ಪೋಸ್ಟರ್

  ಅಭಿಮಾನಿ ರಚಿಸಿದ ಪೋಸ್ಟರ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರದ ಪೋಸ್ಟರ್ ಅಭಿಮಾನಿಯ ಕೈ ಚಳಕದಲ್ಲಿ ಮೂಡಿಬಂದಿದ್ದು ಹೀಗೆ. ಪುನೀತ್ ಅವರ ಕಟ್ಟಾ ಅಭಿಮಾನಿಯೊಬ್ಬ ತಮ್ಮ ನೆಚ್ಚಿನ ನಟನಿಗೆ ತಾವೇ ಕೈಯಾರೆ ಪೋಸ್ಟರ್ ನ ಚಿತ್ರ ಬಿಡಿಸಿ ಉಡುಗೊರೆ ನೀಡಿದ್ದಾರೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಫೇಮಸ್ ಆಗಿತ್ತು.

  'ಚಕ್ರವ್ಯೂಹ'

  'ಚಕ್ರವ್ಯೂಹ'

  ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ಚಕ್ರವ್ಯೂಹ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್, ತಮಿಳು ನಟ ಅರುಣ್ ವಿಜಯ್ ಮುಂತಾದವರು ಪ್ರಮುಖವಾಗಿ ಮಿಂಚಿದ್ದಾರೆ.

  'ದೊಡ್ಮನೆ ಹುಡುಗ'

  'ದೊಡ್ಮನೆ ಹುಡುಗ'

  ನಿರ್ದೇಶಕ ದುನಿಯಾ ಸೂರಿ ಆಕ್ಷನ್-ಕಟ್ ಹೇಳಿರುವ ಬಹುತಾರಾಗಣ ಇರುವ ಪುನೀತ್ ಅವರ ಮತ್ತೊಂದು ಬಿಗ್ ಬಜೆಟ್ 'ದೊಡ್ಮನೆ ಹುಡುಗ' ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದ್ದು, ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್, ಸುಮಲತಾ ಅಂಬರೀಶ್, ನಟ ಅಂಬರೀಶ್, ನಟಿ ಭಾರತಿ ವಿಷ್ಣುವರ್ಧನ್ ಮುಂತಾದವರು ಮಿಂಚಿದ್ದಾರೆ.

  English summary
  South Actress Priya Anand is the chosen to play the female lead in Director Santhosh Anandram's next Movie 'Rajakumara'. Kannada Actor Puneeth Rajkumar in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X