»   » ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಈಗ ಸ್ಮಗ್ಲರ್

ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಈಗ ಸ್ಮಗ್ಲರ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ದೊರೆತ ಮತ್ತೊಬ್ಬ ಮಾಲಾಶ್ರೀ ಅಥವಾ ಮಂಜುಳಾ ಎಂದೇ ಖ್ಯಾತರಾಗಿರುವ 'ಗಂಡುಬೀರಿ ಹೆಣ್ಣು', 'ರೆಬಲ್' ಹುಡುಗಿ (ಅವರ ಮುಂಬರುವ ಚಿತ್ರದ ಹೆಸರು) ಪ್ರಿಯಾ ಹಾಸನ್. ಈಗ ಈಕೆಯ ಮತ್ತೊಂದು ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು 'ಸ್ಮಗ್ಲರ್'.

ಜಂಭದ ಹುಡುಗಿ ಹಾಗೂ ಬಿಂದಾಸ್ ಹುಡುಗಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಪ್ರಿಯಾ ಹಾಸನ್ ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಕ್ಕಾ ಕಮರ್ಷಿಯಲ್ ಆದ ಈ ಚಿತ್ರಕ್ಕೆ ಕೆ ವೀರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದ ಈ ಚಿತ್ರಕ್ಕೆ ಉಪಮುಖ್ಯಮಂತ್ರಿ ಆರ್ ಅಶೋಕ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರು ಶುಭಕೋರಿದರು. ಈಗಾಗಲೆ ತೆಲುಗಿನ 23 ಚಿತ್ರಗಳಲ್ಲಿ ಅಭಿನಯಿಸಿರುವ ರಮಣ ಈ ನಾಯಕಿ ಪ್ರಧಾನ ಚಿತ್ರದ ನಾಯಕ.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಚಕ್ರಿ ಅವರು ಸಂಗೀತ ಸಂಯೋಜಿಸಿದ್ದಾರೆ. ಪ್ರಿಯಾ ಹಾಸನ್ ಅವರು ಈ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ರಾಮ್ ಲಕ್ಷ್ಮಣ್, ರಾಮ್ ಶೆಟ್ಟಿ, ಮಾಸ್ ಮಾದ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಚಿತ್ರಕ್ಕಿರುವುದು ವಿಶೇಷ.

ಇನ್ನು ಚಿತ್ರದ ನಿರ್ದೇಶಕ ಕೆ ವೀರು ಅವರು ತೆಲುಗು ಹಾಗೂ ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಜೂ.ಎನ್ಟಿಆರ್ ಅವರ ಮುಂದಿನ ಚಿತ್ರ 'ಮೈಕ್ ಟೆಸ್ಟಿಂಗ್ 1 2 3' ಚಿತ್ರಕ್ಕೂ ಇವರೇ ನಿರ್ದೇಶಕರು. ಕನ್ನಡದ 'ಸ್ಮಗ್ಲರ್' ಚಿತ್ರ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

'ಸ್ಮಗ್ಲರ್' ಚಿತ್ರದಲ್ಲಿ ರಂಜನೆ ಮನರಂಜನೆ, ಆಕ್ಷನ್ ಹಾಗೂ ಹಾಸ್ಯಕ್ಕೆ ಒತ್ತು ನೀಡಲಾಗಿದೆಯಂತೆ. ಒಟ್ಟು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ನಾಯಕಿ ಪ್ರಧಾನ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ತಮಗೇನು ಅಳುಕಿಲ್ಲ ಎಂದಿದ್ದಾರೆ ರಮಣ. (ಏಜೆನ್ಸೀಸ್)

English summary
'Jambada Hudugi' and 'Bindaas Hudugi' fame Priya Hassan new film titled as Smuggler. presented by Rainbow Groups and produced by Gowramma and Priya Hassan introduced popular commercial films director K Veeru as director for 'Smuggler'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada