»   » ಪ್ರಿಯಾಮಣಿ ನ್ಯಾಚುರಲ್ಸ್ ಸಲೂನ್ ಫ್ಯಾಷನ್ ಶೋ

ಪ್ರಿಯಾಮಣಿ ನ್ಯಾಚುರಲ್ಸ್ ಸಲೂನ್ ಫ್ಯಾಷನ್ ಶೋ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನ್ಯಾಚುರಲ್ಸ್ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ 300 ನೇ ಸಲೂನ್ ಆರಂಭಿಸಿದೆ. ಜನಪ್ರಿಯ ದಕ್ಷಿಣ ಭಾರತ ನಟಿ ಪ್ರಿಯಾಮಣಿ ಸಲೂನ್ ಉದ್ಘಾಟಿಸಿದ್ದಾರೆ. ರಾಜರಾಜೇಶ್ವರಿ ನಗರ, ಸರ್ಜಾಪುರ, ನಾಗರಭಾವಿ, ಮತ್ತು ವಿಜಯಾ ಬ್ಯಾಂಕ್ ಲೇಔಟ್ ಗಳಲ್ಲಿ 4 ಸಲೂನ್ ಗಳನ್ನು ಆರಂಭಿಸುವುದರೊಂದಿಗೆ, ನ್ಯಾಚುರಲ್ಸ್ ಬೆಂಗಳೂರಿನಲ್ಲಿ 45 ಕ್ಕೂ ಅಧಿಕ ಸಲೂನ್ ಗಳ ಅಸ್ತಿತ್ವವನ್ನು ವಿಸ್ತರಿಸಿದೆ.

ಭಾರತದಲ್ಲಿ ಅತ್ಯಧಿಕ ವೇಗವಾಗಿ ಬೆಳೆಯುತ್ತಿರುವ ಸಲೂನ್ ಸರಣಿಯಂದೇ ಗುರುತಿಸಲಾದ ನ್ಯಾಚುರಲ್ಸ್, ಇಂದು ಸೌಂದರ್ಯ ಮತ್ತು ಶೈಲಿಗೆ ಅನ್ವರ್ಥವಾಗಿದೆ. ಶ್ರೀಮತಿ ಕೆ. ವೀಣಾರವರಿಂದ 2000 ದಲ್ಲಿ ಆರಂಭವಾದ ನ್ಯಾಚುರಲ್ಸ್, 300+ ಕ್ಕೂ ಅಧಿಕ ಸಲೂನ್ ಗಳನ್ನು ಹೊಂದುವ ಮೂಲಕ ಪ್ಯಾನ್-ಇಂಡಿಯಾ ಸಲೂನ್ ಬ್ರಾಂಡ್ ಆಗಿದೆ.

ಭಾರತವನ್ನು ಶೈಲಿಯುತಗೊಳಿಸುವ ದೃಷ್ಟಿಯೊಂದಿಗೆ ಮತ್ತು 1000 ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸುವ ಉದ್ದೇಶದಿಂದ, 2017 ರೊಳಗೆ 3000 ಸಲೂನ್ ಗಳನ್ನು ಆರಂಭಿಸಿ, 50,000 ಉದ್ಯೋಗ ಸೃಷ್ಟಿಸುವ ಧ್ಯೇಯವನ್ನು ಹೊಂದಿರುವ ನ್ಯಾಚುರಲ್ಸ್ ತನ್ನ ಸ್ಥಾನವನ್ನು ಮಾರುಕಟ್ಟೆ ಮುಂದಾಳಾಗಿ ಸ್ಥಿರಗೊಳಿಸುವಲ್ಲಿ ಗಮನ ಕೇಂದ್ರೀಕರಿಸಿದೆ.

ಭಾರತದಲ್ಲಿ ಯೂನಿಸೆಕ್ಸ್ ಪರಿಕಲ್ಪನೆಯ ಆರಂಭಿಕರಾದ ನ್ಯಾಚುರಲ್ಸ್ ಸಲೂನ್ ದೈನಂದಿನ ಹೇರ್ ಕಟ್ ಗಳ ಪರಿಧಿಯಾಚೆ ಅಂದಗೊಳಿಸುವ ಪರಿಕಲ್ಪನೆಯನ್ನು ಕೈಗೆತ್ತಿಕೊಂಡಿತು. ಸೂಕ್ತ ಸ್ಥಳ, ಮೃದುವಾದ ಒಳಾಂಗಣ, ತನ್ನ ವರ್ಗದಲ್ಲೇ ಅತ್ಯುತ್ತಮವಾದ ಸಲಕರಣೆಗಳು, ತರಬೇತಿ ಮತ್ತು ವಿಶಿಷ್ಟ ಅಭಿವೃದ್ಧಿಯೊಂದಿಗಿನ ಕೆಲವೇ ಯು ಎಸ್ ಪಿ ಗಳು ನ್ಯಾಚುರಲ್ಸ್ ಅನ್ನು ಹೆಚ್ಚು ಬಯಸುವ ಮತ್ತು ವೇಗವಾಗಿ ಬೆಳೆಯುತ್ತಿರುವ ಸಲೂನ್ ಸರಣಿಯನ್ನಾಗಿಸಿದೆ. ಉದ್ಘಾಟನೆ ನಂತರ ನಡೆದ ಫ್ಯಾಷನ್ ಶೋನಲ್ಲಿ ನಟಿ ಪ್ರಿಯಾಮಣಿ ಪಾಲ್ಗೊಂಡಿದ್ದರು. ಫ್ಯಾಷನ್ ಶೋ ಚಿತ್ರಗಳು ಇಲ್ಲಿವೆ ನೋಡಿ

ಪ್ರಿಯಾಮಣಿ ಫ್ಯಾಷನ್ ಶೋ

ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸಲೂನ್ ಅಗತ್ಯಗಳಾದ ಥ್ರೆಡಿಂಗ್, ಕಟ್ ಮತ್ತು ಕಲರ್ ನಿಂದ ಅತ್ಯುತ್ತಮವಾದ ಟ್ರೀಟ್ ಮೆಂಟ್ ಗಳಾದ ಬಾಡಿ ಸ್ಕ್ರಬ್ ಹಾಗೂ ಹೇರ್ ಸ್ಪಾ ಗಳ ಸೇವೆಗಳನ್ನು ಒಳಗೊಂಡಿದೆ.

ಪ್ರಿಯಾಮಣಿ ಫ್ಯಾಷನ್ ಶೋ

ಅತ್ಯುತ್ತಮ ದರ್ಜೆಯ ಉತ್ಪನ್ನಗಳಾದ Schwarzkopf, ಕ್ರಿಸ್ಟಿನ್ ವಾಲ್ಮಿ, ಮ್ಯಾಕ್, ಮತ್ತು ಕ್ರ್ಯೋಲಾನ್ ಗಳನ್ನು ಬಳಸುವ ಮೂಲಕ ನ್ಯಾಚುರಲ್ಸ್ ತನ್ನ ಗ್ರಾಹಕರಿಗೆ ಉತ್ತಮವಾದುದರ ಹೊರತಾಗಿ ಮತ್ತೇನನ್ನೂ ಕೊಡುವುದಿಲ್ಲ ಎನ್ನುವ ಭರವಸೆ ನೀಡುತ್ತದೆ.

ಪ್ರಿಯಾಮಣಿ

Schwarzkopf ವೃತ್ತಿಪರತೆ : Schwarzkopf ವೃತ್ತಿಪರತೆಯು ಇಂದಿಗೆ 6 ವರ್ಷಗಳಿಂದ ನ್ಯಾಚುರಲ್ಸ್‍ನೊಂದಿಗೆ ಸಹಯೋಗವನ್ನು ಹೊಂದಿದೆ. ಸಮಯದೊಂದಿಗೆ ಬ್ರಾಂಡ್‍ಗಳು ಒಟ್ಟಾಗಿ ಬೆಳೆದು, ಕೂದಲಿನ ಆರೈಕೆಯ ಉದ್ದಿಮೆಯಲ್ಲಿ ತಮ್ಮದೇ ಆದ ನೆಲೆಯನ್ನು ಸ್ಥಾಪಿಸಿವೆ.

ನ್ಯಾಚುರಲ್ಸ್ ಜತೆ ಪ್ರಿಯಾಮಣಿ

ಹೆನ್ಕೆಲ್ ಬ್ಯೂಟಿ ಕೇರ್- ವೃತ್ತಿಪರತೆಯ ವ್ಯವಸ್ಥಾಪಕ ನಿರ್ದೇಶಕ ಮುರಳಿ ಸುಂದರ್, "ನ್ಯಾಚುರಲ್ಸ್ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ ಆಗಿದ್ದು, ಇದು ಗ್ರಾಹಕ ಸಂಬಂಧವನ್ನು ನಿರ್ಮಿಸುವ ಮತ್ತು ವಿಶ್ವದರ್ಜೆಯ ವೈಯಕ್ತಿಕ ಸೇವೆಯನ್ನು ನೀಡುವ ಸ್ಪಷ್ಟ ಗುರಿಯನ್ನು ಹೊಂದಿದೆ.

ನ್ಯಾಚುರಲ್ಸ್ ನೊಂದಿಗೆ Schwarzkopf ವೃತ್ತಿಪರ ಸಂಸ್ಥೆಯ ಸಹಯೋಗ ಬಹಳ ಹಿಂದಿನಿಂದ ಬಂದಿದ್ದು, ಮುಂದಿನ ವರ್ಷಗಳಲ್ಲೂ ಇದು ಮುಂದುವರೆಯುತ್ತದೆ. ಈ ಮೈಲುಗಲ್ಲಿನ ಸಾಧನೆಯ ಸಂದರ್ಭದಲ್ಲಿ ನ್ಯಾಚುರಲ್ಸ್ ನೊಂದಿಗೆ ನಮ್ಮ ಪಾಲುದಾರಿಕೆ ನಮಗೆ ಸಂತೋಷ ಮತ್ತು ಅನುಕೂಲವನ್ನು ಉಂಟುಮಾಡಿದೆ" ಎಂದು ಹೇಳಿದ್ದಾರೆ.

ಪ್ರಿಯಾಮಣಿ

ಪ್ರಿಯಾಮಣಿ ನ್ಯಾಚುರಲ್ಸ್ ಸಲೂನ್ ಫ್ಯಾಷನ್ ಶೋ

ಉದ್ದಿಮೆ ಬೆಳವಣಿಗೆ

ಅನೇಕ ವರ್ಷಗಳಿಂದ, ನ್ಯಾಚುರಲ್ಸ್ ಫ್ರಾಂಚೈಸಿಂಗ್ ಮೂಲಕ ಭಾರತದಾದ್ಯಂತ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ನ್ಯಾಚುರಲ್ಸ್ ತನ್ನ ಬ್ರಾಂಡ್ ನೊಂದಿಗೆ ಸಹಯೋಗ ಹೊಂದಲು ಆಸಕ್ತರಾಗಿರುವ ಅದಮ್ಯ ಚೇತನದ, ಸಮರ್ಪಣಾ ಮನೋಭಾವದ ಉದ್ದಿಮೆದಾರರಿಗೆ ಎದುರು ನೋಡುತ್ತಿದೆ. ಹೆಚ್ಚಿನ ವಿವರಗಳಿಗಾಗಿ, ಸಂಪರ್ಕಿಸಿ 9999981322/ franchise@naturals.in

ಪ್ರಿಯಾಮಣಿ

ಉದ್ಘಾಟನೆ ನಂತರ ನಡೆದ ಫ್ಯಾಷನ್ ಶೋನಲ್ಲಿ ನಟಿ ಪ್ರಿಯಾಮಣಿ ಪಾಲ್ಗೊಂಡಿದ್ದರು.

English summary
Naturals launched its 300th Salon at Bangalore. The Salon was inaugurated by Celebrity Actress Priya Mani. With the launch of 4 salons at Rajarajeswari Nagar, Sarjapur, Nagarbhavi and Vijaya Bank Layout, Naturals has extended its presence to over 45 salons in Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada