»   » ದಸರಾ ಹಬ್ಬಕ್ಕೆ ನಟಿ ಪ್ರಿಯಾಮಣಿಗೆ ಅಗ್ನಿಪರೀಕ್ಷೆ !

ದಸರಾ ಹಬ್ಬಕ್ಕೆ ನಟಿ ಪ್ರಿಯಾಮಣಿಗೆ ಅಗ್ನಿಪರೀಕ್ಷೆ !

Posted By:
Subscribe to Filmibeat Kannada

ಕನ್ನಡ ನಟಿ ಪ್ರಿಯಾಮಣಿ ಅವರು ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ, 'ಡ್ಯಾನ್ಸಿಂಗ್ ಸ್ಟಾರ್ 3'ನಲ್ಲಿ ತೀರ್ಪುಗಾರರಾಗಿರುವ ಪ್ರಿಯಾಮಣಿ ಅವರಿಗೆ ಈ ವರ್ಷದ 'ದಸರಾ' ಹಬ್ಬವಂತೂ ಸಖತ್ ಸ್ಪೆಷಲ್.

ಈ ದಸರಾ ಸೀಸನ್ ನಲ್ಲಿ ಪ್ರಿಯಾಮಣಿ ಅವರ ಸಿನಿಮಾಗಳು ಭರ್ಜರಿಯಾಗಿ ತೆರೆ ಕಾಣುತ್ತಿವೆ. ಅದೂ ಒಂದಲ್ಲಾ ಎರಡೆರಡು ಚಿತ್ರಗಳು ಒಟ್ಟೊಟ್ಟಿಗೆ ತೆರೆ ಕಾಣುತ್ತಿವೆ. ದಸರಾ ಹಬ್ಬದ ಸಂದರ್ಭದಲ್ಲಿ ಸಾಲು-ಸಾಲು ರಜೆಗಳಿರುವ ಕಾರಣ ಆ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆದ್ರೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದು ಪಕ್ಕಾ.[ಅಯ್ಯಯ್ಯೋ...ಪ್ರಿಯಾಮಣಿ ಯಾಕಿಂಗ್ ಆಗ್ಬುಟ್ರು.!?]


ಚಿತ್ರೀಕರಣ ಮುಗಿದು ಬಹಳ ದಿನ ಕಳೆದರೂ, ತೆರೆಗೆ ಬರಲು ಮೀನಾ-ಮೇಷ ಎಣಿಸುತ್ತಿದ್ದ 'ದನ ಕಾಯೋನು' ಮತ್ತು ಸದಭಿರುಚಿಯುಳ್ಳ 'ಇದೊಳ್ಳೆ ರಾಮಾಯಣ' ನಟಿ ಪ್ರಿಯಾಮಣಿ ಅವರಿಗೆ ಬಹಳ ಮಹತ್ವಾಕಾಂಕ್ಷೆಯುಳ್ಳ ಚಿತ್ರಗಳು. ಮುಂದೆ ಓದಿ.....


ಡಬಲ್ ಧಮಾಕಾ

ದಸರಾ ಹಬ್ಬದ ಸಂದರ್ಭದಲ್ಲಿ ನಟಿ ಪ್ರಿಯಾಮಣಿ ಅವರ ಎರಡು ಸಿನಿಮಾಗಳು ತೆರೆ ಕಾಣುತ್ತಿವೆ. 1. ಇದೊಳ್ಳೆ ರಾಮಾಯಣ ಮತ್ತು 2. ದನ ಕಾಯೋನು. 'ಇದೊಳ್ಳೆ ರಾಮಾಯಣ' ಚಿತ್ರವನ್ನು ನಟಿ ಪ್ರಿಯಾಮಣಿ ಅವರು ಸದ್ದಿಲ್ಲದೆ ಮುಗಿಸಿಕೊಟ್ಟಿದ್ದರು. ಎರಡು ಚಿತ್ರದಲ್ಲೂ ಪ್ರಿಯಾಮಣಿ ಅವರು ಬಹಳ ವಿಭಿನ್ನ ಪಾತ್ರ ವಹಿಸಿದ್ದಾರೆ.['ಯು' ಪ್ರಮಾಣಪತ್ರಕ್ಕೆ ಪ್ರಕಾಶ್ ರಾಜ್ ಹೆಚ್ಚಿನ ಒತ್ತು ಕೊಡೋದ್ಯಾಕೆ?]


'ಇದೊಳ್ಳೆ ರಾಮಾಯಣ' ಚಿತ್ರಕ್ಕೆ ಮುಹೂರ್ತ ಫಿಕ್ಸ್

ನಟ-ನಿರ್ಮಾಪಕ-ನಿರ್ದೇಶಕ ಪ್ರಕಾಶ್ ರಾಜ್ ಅವರ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ 'ಇದೊಳ್ಳೆ ರಾಮಾಯಣ' ಅಕ್ಟೋಬರ್ 7ಕ್ಕೆ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ನಟಿ ಪ್ರಿಯಾಮಣಿ ಅವರು ವೈಶ್ಯೆಯ ಪಾತ್ರದಲ್ಲಿ ಮಿಂಚಿರೋದು ವಿಶೇಷ. ಚಿತ್ರದಲ್ಲಿ ನಟ ಪ್ರಕಾಶ್ ರಾಜ್ ಅವರು ನಟಿಸಿದ್ದು, ನಿರ್ದೇಶನ-ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಲಯಾಳಂ 'ಶಟರ್' ಚಿತ್ರದ ರೀಮೇಕ್ ಇದಾಗಿದೆ.[ದಸರಾ ಹಬ್ಬಕ್ಕೆ ಪ್ರಕಾಶ್ ರಾಜ್ ಕಡೆಯಿಂದ ದೊಡ್ಡ ಉಡುಗೊರೆ]


ಸೆನ್ಸಾರ್ ಅಂಗಳಕ್ಕೆ ಕಾಲಿಡಲು ಸಜ್ಜಾದ 'ದನ ಕಾಯೋನು'

'ದನ ಕಾಯೋನು' ಚಿತ್ರಕ್ಕೆ ಇನ್ನೂ ಸೆನ್ಸಾರ್ ಆಗಿಲ್ಲ, ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿರುವ ಚಿತ್ರತಂಡ ಇನ್ನೇನು ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೆ ಕಾಲಿಡಲಿದೆ. ಆ ನಂತರ ಚಿತ್ರದ ದಿನಾಂಕ ಫಿಕ್ಸ್ ಆಗಲಿದೆ. ಚಿತ್ರದಲ್ಲಿ ನಟಿ ಪ್ರಿಯಾಮಣಿ ಅವರಿಗೆ ದುನಿಯಾ ವಿಜಯ್ ಅವರು ಸಾಥ್ ಕೊಟ್ಟಿದ್ದಾರೆ.[ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!]


ಎರಡೂ ಚಿತ್ರಗಳು ಒಂದೇ ದಿನ?

ಮೂಲಗಳ ಪ್ರಕಾರ 'ದನ ಕಾಯೋನು' ಚಿತ್ರವನ್ನು ಕೂಡ ಅಕ್ಟೋಬರ್ 7ಕ್ಕೆ ತೆರೆಗೆ ತರಲು ನಿರ್ದೇಶಕ ಯೋಗರಾಜ್ ಭಟ್ ಅವರು ಯೋಜನೆ ಹಾಕಿಕೊಂಡಿದ್ದಾರಂತೆ. ಒಂದ್ವೇಳೆ ಹಾಗಾದಲ್ಲಿ, ಪ್ರಿಯಾಮಣಿ ಅವರ ಎರಡೂ ಚಿತ್ರಗಳು ಒಂದೇ ದಿನ ತೆರೆಗೆ ಬರಲಿದೆ. ಒಟ್ನಲ್ಲಿ ಪ್ರಿಯಾಮಣಿ ಅವರಿಗೆ ಒಂಥರಾ ಅಗ್ನಿಪರೀಕ್ಷೆ ಎದುರಿಸುವ ಸಂದರ್ಭ.[ವಿವಾದದಲ್ಲಿ ಸಿಲುಕಿದ ಯೋಗರಾಜ್ ಭಟ್ಟರ 'ದನ ಕಾಯೋನು']


English summary
Kannada Actress Priyamani starrer Kannada Movie 'Idolle Ramayana' and Kannada movie 'Dana Kayonu' both are getting release on same day (October 7th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada