Don't Miss!
- Finance
ರೆಪೋ ದರ ಮತ್ತೆ 25 ಬಿಪಿಎಸ್ ಏರಿಕೆ ಸಾಧ್ಯತೆ, ಇಎಂಐ ಮತ್ತಷ್ಟು ಹೆಚ್ಚಾಗುತ್ತಾ?
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- News
ಹಿಂಡೆನ್ಬರ್ಗ್ ವರದಿಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ ಇಲ್ಲಿದೆ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಧಿಕಾ ಪಂಡಿತ್ ನಂತರ 'ಪ್ರಿಯಾಮಣಿ' ಕಡೆಯಿಂದ ಸರ್ಪ್ರೈಸ್.!
Recommended Video

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಇತ್ತೀಚಿಗಷ್ಟೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ರಾಧಿಕಾ ಮತ್ತು ಯಶ್ ತಂದೆ-ತಾಯಿ ಆಗ್ತಿರುವ ಬಗ್ಗೆ ಸ್ವತಃ ಇಬ್ಬರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.
ಇದು ಕಳೆದ ಕೆಲದಿನಗಳಲ್ಲೇ ಬಹುಭಾಷಾ ನಟಿ ಪ್ರಿಯಾಮಣಿ ಮಾಡಿರುವ ಟ್ವೀಟ್ ಚರ್ಚೆಗೆ ಕಾರಣವಾಗಿದೆ. ವಿಷ್ಯ ಏನೂ ಎಂಬುದನ್ನ ನೇರವಾಗಿ ಹೇಳದ ಪ್ರಿಯಾಮಣಿ 'ಇಂಟ್ರೆಸ್ಟಿಂಗ್ ವಿಚಾರವಿದೆ, ಕಾದು ನೋಡಿ' ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ.
'ಅತ್ತೆ'
ಆಗುತ್ತಿರುವ
ಯಶ್
ತಂಗಿ
ನಂದಿನಿ
ಸಂತಸಕ್ಕೆ
ಪಾರವೇ
ಇಲ್ಲ.!
ಈ ಟ್ವೀಟ್ ನ್ನ ನೋಡಿದ ಫಾಲೋವರ್ಸ್ ಪ್ರಿಯಾಮಣಿ ಮತ್ತು ಮುಸ್ತಾಫ್ ರಾಜ್ ದಂಪತಿಗೆ ಶುಭಕೋರುತ್ತಿದ್ದಾರೆ. ಅಷ್ಟಕ್ಕೂ, ಪ್ರಿಯಾಮಣಿ ಮಾಡಿರುವ ಟ್ವೀಟ್ ನಲ್ಲಿ ಏನಿದೆ.? ಏನಿರಬಹುದು ಆ ಸಂಥಿಂಗ್ ಇಂಟ್ರೆಸ್ಟಿಂಗ್ ವಿಷ್ಯ ಎಂಬುದು ಮುಂದೆ ಓದಿ....

ನಿಮಗೊಂದು ಸರ್ಪ್ರೈಸ್
''ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಅವರ ಕಡೆಯಿಂದ ಸಂಥಿಂಗ್ ಇಂಟ್ರೆಸ್ಟಿಂಗ್ ಮತ್ತು ಫನ್ ಆಗಿರುವ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ಕಾದು ನೋಡಿ'' ಎಂದು ಪ್ರಿಯಾಮಣಿ ಟ್ವೀಟ್ ಮಾಡಿದ್ದಾರೆ.
ಅಮ್ಮ
ಆಗ್ತಿದ್ದಾರೆ
ಯಶ್
ಮಡದಿ
ರಾಧಿಕಾ
ಪಂಡಿತ್

ತಾಯಿ ಆಗ್ತಿದ್ದಾರಾ ಪ್ರಿಯಾಮಣಿ.?
ಈ ಟ್ವೀಟ್ ನೋಡಿದ ನಂತರ ಪ್ರಿಯಾಮಣಿ ತಾಯಿ ಆಗ್ತಿದ್ದಾರಾ..? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಅರಂಭವಾಗಿದೆ. ಕಳೆದ ವರ್ಷ ಆಗಸ್ಟ್ 23 ರಂದು ಪ್ರಿಯಾಮಣಿ ಮುಸ್ತಾಫ್ ರಾಜ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಹೀಗಾಗಿ, ಪ್ರಿಯಾಮಣಿ ತಾಯಿ ಗರ್ಭೀಣಿಯಾಗಿರಬಹುದು ಎನ್ನಲಾಗುತ್ತಿದೆ.

ಅಭಿಮಾನಿಗಳಿಂದ ಶುಭಾಶಯ
ಪ್ರಿಯಾಮಣಿ ಮಾಡಿರುವ ಟ್ವೀಟ್ ರೀ-ಟ್ವೀಟ್ ಮಾಡುತ್ತಿರುವ ಅಭಿಮಾನಿಗಳು, 'ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. 'ಪ್ರಿಯಾಮಣಿ ಹಾಗೂ ಮುಸ್ತಾಫ್ ರಾಜ್ ಅವರಿಗೆ ಶುಭಾಶಯ' ಎನ್ನುತ್ತಿದ್ದಾರೆ. ''ಚೋಟಿ ಪ್ರಿಯಾಮಣಿ'' ಎಂದು ಕಾಮೆಂಟ್ ಮಾಡಿದ್ದಾರೆ.

ಖಚಿತ ಮಾಹಿತಿ ಇಲ್ಲ
ಪ್ರಿಯಾಮಣಿ ಅವರು ಏನೂ ಹೇಳಲು ಮುಂದಾಗಿದ್ದರೋ ಗೊತ್ತಿಲ್ಲ. ಆದ್ರೆ, ಅವರು ಮಾಡಿರುವ ಟ್ವೀಟ್ ನಿಂದ ಇಂತಹ ಸುದ್ದಿಯೊಂದು ಹುಟ್ಟುಕೊಂಡಿರುವುದು ಮಾತ್ರ ನಿಜ. ಆದ್ರೆ, ನಿಜಕ್ಕೂ ಪ್ರಿಯಾಮಣಿ ಹಾಗೂ ಮುಸ್ತಾಫ್ ರಾಜ್ ಅದೇನ್ ಸ್ಪೆಷಲ್ ಸುದ್ದಿ ಕೊಡ್ತಾರೋ ಕಾದು ನೋಡಬೇಕಿದೆ.
ಮೂರೇ
ತಿಂಗಳಿಗೆ
ತವರಿನವರಿಗೆ
ಸಿಹಿಸುದ್ದಿ
ಕೊಟ್ಟ
ನಟಿ
ಪ್ರಿಯಾಮಣಿ.!

ಕನ್ನಡ ಸಿನಿಮಾಗಳಲ್ಲಿ ಬ್ಯುಸಿ
ನನ್ನ ಪ್ರಕಾರ, ದಶರಥ ಹಾಗೂ ವ್ಯೂಹ ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಿಯಾಮಣಿ, ತಮಿಳಿನಲ್ಲಿ ಡ್ಯಾನ್ಸ್ ಶೋನಲ್ಲಿ ನಿರೂಪಕರಾಗಿದ್ದಾರೆ. ಇದರ ಜೊತೆಗೆ ಮಲಯಾಳಂ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇಷ್ಟರ ಮಧ್ಯೆ ಹೊಸ ಚಿತ್ರಗಳನ್ನ ಪ್ರಿಯಾಮಣಿ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅದಕ್ಕೆ ಕಾರಣ ಇದೇ ಇರಬಹುದಾ.?