»   » 'ದೇವರವ್ನೆ ಬಿಡು ಗುರು' ಅಂತಾವ್ರೇ ಪ್ರಿಯಾಮಣಿ

'ದೇವರವ್ನೆ ಬಿಡು ಗುರು' ಅಂತಾವ್ರೇ ಪ್ರಿಯಾಮಣಿ

Posted By:
Subscribe to Filmibeat Kannada

ಇತ್ತೀಚೆಗೆ ಎಲ್ಲಾ ಸಿನಿಮಾ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರೆಲ್ಲ ಹಾಡುವುದು ಒಂದು ಟ್ರೆಂಡ್ ಆದಂತಿದೆ. ಮೊನ್ನೆ ಮೊನ್ನೆ ಪುನೀತ್ ಸಿನಿಮಾ 'ಚಕ್ರವ್ಯೂಹ'ಕ್ಕೆ ತಮಿಳು-ತೆಲುಗು ನಟಿ ಕಾಜಲ್ ಅಗರ್ ವಾಲಾ ಅವರು ಹಾಡಿ ಹೋದ ಬೆನ್ನಲ್ಲೇ ಇದೀಗ ನಟಿ ಪ್ರಿಯಾಮಣಿ ಅವರು ಹಾಡೊಂದಕ್ಕೆ ತಮ್ಮ ದ್ವನಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ನಟಿ ಪ್ರಿಯಾಮಣಿ ಅವರು ಅಕುಲ್ ಬಾಲಾಜಿ ಅಭಿನಯದ 'ದೇವರವ್ನೆ ಬಿಡು ಗುರು' ಎಂಬ ಚಿತ್ರದ ಹಾಡೊಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ರಾಜೇಶ್ ರಾಮ್ ನಾಥ್ ನಟಿ ಪ್ರಿಯಾಮಣಿ ಅವರಿಗೆ ಧೈರ್ಯ ಕೊಟ್ಟ ಮೇಲೆಯೇ ಈ ಸಾಹಸಕ್ಕೆ ಕೈ ಹಾಕಿದ್ದಾರೆ.[ದೆವ್ವದ ಕೈಯಲ್ಲಿ ಚಿತ್ರಾನ್ನವಾಗುವ 'ಪುಟ್ಟಣ್ಣ'ನಿಗೆ ವಿಮರ್ಶಕರು ಏನಂತಾರೇ?]

Actress Priyamani to make her singing debut in 'Devraune Bidu Guru'

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಹೊಸ ಮುಖ ಹೊಸ ನಿರ್ದೇಶಕ ಮೈಸೂರಿನ ಹುಡುಗ ಪ್ರಥಮ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ನಾಯಕ ನಟನಾಗಿರುವ ಅಕುಲ್ ಬಾಲಾಜಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಈ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ.[ಇಷ್ಟ ಆದರೆ 'ನಾಟಿಕೋಳಿ' ಓಕೆ ಎಂದ ಪ್ರಿಯಾಮಣಿ]

ಹೊಸ ಪ್ರತಿಭೆ ಇಷಾ ರಂಗನಾಥ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ವಹಿಸಲಿದ್ದಾರೆ.

English summary
Kannada Actress Priyamani is here to take up one such crazy task. Priyamani is all set to croon in Kannada movie 'Devraune Bidu Guru' for the first time. The movie is directed by Pratham.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada