For Quick Alerts
  ALLOW NOTIFICATIONS  
  For Daily Alerts

  RCB ಪಂದ್ಯ ಸೋತ ಬಳಿಕ ಪ್ರಿಯಾಮಣಿ ಟ್ವೀಟ್

  By Bharath Kumar
  |

  ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆದ್ದೇ ಗೆಲ್ಲುತ್ತೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆರ್.ಸಿ.ಬಿ ಫ್ಲೇ-ಆಫ್ ಗೆ ಹೋಗುವ ಕನಸು ಬಹುತೇಕ ಭಗ್ನವಾಗಿದೆ.

  ನಿನ್ನೆ ಹೈದ್ರಾಬಾದ್ ನಲ್ಲಿ ಸನ್ ರೈಸ್ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಆರ್.ಸಿ.ಬಿ ವಿರೋಚಿತ ಸೋಲು ಕಂಡಿದೆ. ಗೆಲುವಿನ ದಡದಲ್ಲಿ ಎಡವಿ, ಎದುರಾಳಿ ತಂಡಕ್ಕೆ ಪಂದ್ಯ ಬಿಟ್ಟುಕೊಟ್ಟಿದೆ. ಈ ಮೂಲಕ ಆರ್.ಸಿ.ಬಿ ಅಭಿಮಾನಿಗಳಿಗೆ ಬಹುದೊಡ್ಡ ನಿರಾಸೆಯಾಗಿದೆ.

  ಇತ್ತ ಬೆಂಗಳೂರು ತಂಡ ಸೋಲುತ್ತಿದ್ದಂತೆ ಬಹುಭಾಷಾ ನಟಿ ಪ್ರಿಯಾಮಣಿ ಟ್ವೀಟ್ ಮಾಡಿದ್ದಾರೆ. ರೋಚಕ ಪಂದ್ಯವನ್ನ ವೀಕ್ಷಣೆ ಮಾಡಿದ್ದ ಪ್ರಿಯಾಮಣಿ ಎರಡು ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಆರ್ಸಿಬಿಗೆ 5 ರನ್ ಸೋಲು: ಅಗ್ರ ಸ್ಥಾನಕ್ಕೇ ಭದ್ರವಾದ ಹೈದರಾಬಾದ್

  ''ಅದ್ಭುತ ಪಂದ್ಯ. ಚಾಂಪಿಯನ್ಸ್ ತಮ್ಮ ತಂಡದ ಮೊತ್ತವನ್ನ ಸಮರ್ಥಿಸಿಕೊಂಡಿದ್ದಾರೆ. ಕೊನೆಯವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಸನ್ ರೈಸ್ ಗೆಲುವು ಕಂಡಿದೆ. ಆರ್.ಸಿ.ಬಿ ತಂಡವೂ ಉತ್ತಮವಾಗಿ ಆಡಿದೆ'' ಎಂದು ಟ್ವೀಟ್ ಮಾಡಿದ್ದಾರೆ.

  ಪ್ರಿಯಾಮಣಿ ಅಭಿನಯದ 'ಧ್ವಜ' ಚಿತ್ರ ಇತ್ತೀಚಿಗಷ್ಟೆ ತೆರೆಕಂಡಿತ್ತು. ಸದ್ಯ, 'ನನ್ನ ಪ್ರಕಾರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನ ಒಂದು ಚಿತ್ರದಲ್ಲೂ ಪ್ರಿಯಾಮಣಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada actress priyamani has taken his twitter account to express his opinion about royal challengers bangalore vs sunrisers hyderabad match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X