For Quick Alerts
  ALLOW NOTIFICATIONS  
  For Daily Alerts

  ಪುನೀತ್ ಮನೆಗೆ ಭೇಟಿ ನೀಡಿದ ನಟಿ ಪ್ರಿಯಾಮಣಿ, ಗೀತ

  |

  ನಟ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದ ನಟಿ ಪ್ರಿಯಾಮಣಿ ಇಂದು ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.

  ಪುನೀತ್ ರಾಜ್‌ಕುಮಾರ್ ಜೊತೆಗೆ 'ರಾಮ್' ಮತ್ತು 'ಅಣ್ಣಾ ಬಾಂಡ್' ಸಿನಿಮಾದಲ್ಲಿ ನಟಿ ಪ್ರಿಯಾಮಣಿ ನಟಿಸಿದ್ದರು. ಸಿನಿಮಾದ ಹೊರತಾಗಿ ಪುನೀತ್ ಜೊತೆಗೆ ಉತ್ತಮ ಸ್ನೇಹವನ್ನು ಪ್ರಿಯಾಮಣಿ ಹೊಂದಿದ್ದರು. ನಟ ಪುನೀತ್ ರಾಜ್‌ಕುಮಾರ್‌ಗೆ ಪ್ರಿಯಾಮಣಿ ಡ್ಯಾನ್ಸ್ ಎಂದರೆ ಬಹಳ ಇಷ್ಟವಾಗಿತ್ತು. ಈ ಬಗ್ಗೆ 'ರಾಮ್' ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಪುನೀತ್ ಹೇಳಿದ್ದರು.

  ಪ್ರಿಯಾಮಣಿ ಜೊತೆಗೆ ಪತಿ ಮುಸ್ತಫಾ ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆ ಕಾಲ ಇಬ್ಬರೂ ಶಿವಣ್ಣನವರೊಟ್ಟಿಗೆ ಮಾತನಾಡಿದರು. ಇದೇ ಸಮಯದಲ್ಲಿ ಪಂಚಭಾಷಾ ನಟಿ ಗೀತಾ ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಗೀತಾ ಅವರು ರಾಜ್‌ಕುಮಾರ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಪುನೀತ್ ನಿಧನರಾದ ಬಳಿಕ ಅಂತಿಮ ದರ್ಶನಕ್ಕೆ ಪ್ರಿಯಾಮಣಿ ಬರಲಾಗಿರಲಿಲ್ಲವಾದ್ದರಿಂದ ಈಗ ಬಂದಿದ್ದಾರೆ. ಗೀತಾ ಸಹ ಅಂದು ಬರಲಾಗಿರಲಿಲ್ಲ. ಪುನೀತ್ ತಮ್ಮ ಸಿನಿಮಾಗಳ ನಟಿಯರೊಟ್ಟಿಗೆ ಬಹಳ ಒಳ್ಳೆಯ ಸ್ನೇಹ ಇತ್ತು, ರಮ್ಯಾ, ರಕ್ಷಿತಾ, ಮಿಲನದ ನಟಿ ಪಾರ್ವತಿ ಮಿಲ್ಟನ್, ಮೀರಾ ಜಾಸ್ಮಿನ್, ಪ್ರಿಯಾಮಣಿ, ರಾಧಿಕಾ ಪಂಡಿತ್, ರಚಿತಾ ರಾಮ್ ಇನ್ನೂ ಹಲವರು ಪುನೀತ್‌ಗೆ ಆತ್ಮೀಯರಾಗಿದ್ದರು.

  ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅಂತಿಮ ದರ್ಶನಕ್ಕೆ ಬರಲಾಗದಿದ್ದ ಹಲವು ಸ್ಟಾರ್ ನಟ-ನಟಿಯರು ಈಗ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿ ಸಾಂತ್ವಾನ ಹೇಳುತ್ತಿದ್ದಾರೆ. ತೆಲುಗಿನ ನಟ ನಾಗಾರ್ಜುನ, ನಟ ರಾಮ್ ಚರಣ್ ತೇಜ, ಪುನೀತ್‌ ರಾಜ್‌ಕುಮಾರ್ ಅವರ ಆತ್ಮೀಯ ಗೆಳೆಯರಾಗಿದ್ದ ನಟ ಸೂರ್ಯ, ಶಿವಕಾರ್ತಿಕೇಯ, ರಾಜೇಂದ್ರ ಪ್ರಸಾದ್, ನಕ್ಕೀರನ್ ಗೋಪಾಲ್ ಇನ್ನೂ ಹಲವರು ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು.

  English summary
  Actress Priyamani visited Puneeth Rajkumar's house with her husband. Senior actress Geetha also visited Shivanna's house and express condolence.
  Monday, November 8, 2021, 8:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X