For Quick Alerts
  ALLOW NOTIFICATIONS  
  For Daily Alerts

  'ಮಾಡರ್ನ್ ಕೃಷ್ಣ' ಕಿಚ್ಚನ ಜೊತೆ ರಚಿತಾ-ಭಾವನಾರ ಒನಪು-ವಯ್ಯಾರ

  By Suneetha
  |

  ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಮುಕುಂದ ಮುರಾರಿ' ಗಾಂಧಿನಗರದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

  ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ಮತ್ತು ನಟಿ ಭಾವನಾ ಮೆನನ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ನಾವೇ ನಿಮಗೆ ಹೇಳಿದ್ವಿ. ಇದೀಗ ಹಾಡಿನ ಶೂಟಿಂಗ್ ಕೂಡ ನಡೆದಿದ್ದು, ಗುಳಿಕೆನ್ನೆ ಬೆಡಗಿ ರಚಿತಾ ಮತ್ತು ಭಾವನಾ ಅವರು ಪಾಲ್ಗೊಂಡಿದ್ದರು.[ಶ್ರೀಕೃಷ್ಣನಾದ ಕಿಚ್ಚನ ಜೊತೆ ಇಬ್ಬರು ಗೋಪಿಕೆಯರು, ಯಾರವರು.?]

  ಇನ್ನು ಕಿಚ್ಚ ಸುದೀಪ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಮುಗಿಸಿ ವಾಪಸಾಗಿದ್ದಾರೆ. ನಿರ್ದೇಶಕ ಕೃಷ್ಣ ಅವರು ಸುಮಾರು 10 ದಿನಗಳ ಕಾಲ ಯಶಸ್ವಿಯಾಗಿ 'ಹೆಬ್ಬುಲಿ' ಶೂಟಿಂಗ್ ಮುಗಿಸಿದ್ದಾರೆ.

  ಬಹುತೇಕ ಕೊನೆಯ ಹಂತದ ಶೂಟಿಂಗ್ ನಲ್ಲಿ ತೊಡಗಿರುವ 'ಮುಕುಂದ ಮುರಾರಿ' ಚಿತ್ರತಂಡ, ಇದೀಗ ನಿರ್ದೇಶಕ ನಂದ ಕಿಶೋರ್ ಸಾರಥ್ಯದಲ್ಲಿ ವಿಶಿಷ್ಟ ಹಾಡಿನ ಚಿತ್ರೀಕರಣ ಕೂಡ ಮುಗಿಸಿದೆ.

  ಹಿಂದಿ 'ಓ ಮೈ ಗಾಡ್' ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ನಟಿ ನಿಖಿತಾ ತುಕ್ರಾಲ್ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ...

  ದುಬಾರಿ ಸೆಟ್ ನಲ್ಲಿ ಹಾಡಿನ ಶೂಟಿಂಗ್

  ದುಬಾರಿ ಸೆಟ್ ನಲ್ಲಿ ಹಾಡಿನ ಶೂಟಿಂಗ್

  ಕಿಚ್ಚ ಸುದೀಪ್, ರಚಿತಾ ರಾಮ್ ಮತ್ತು ಭಾವನಾ ಮೆನನ್ ಕಾಣಿಸಿಕೊಂಡಿದ್ದ 'ಗೋಪಾಲ ಗೋಪಾಲ' ಎಂಬ ಹಾಡಿಗೆ, ಸುಮಾರು 60 ಲಕ್ಷ ವೆಚ್ಚದಲ್ಲಿ ದುಬಾರಿ ಸೆಟ್ ಹಾಕಲಾಗಿತ್ತು.[ಬರ್ತ್ ಡೇ ಸ್ಪೆಷಲ್: ಕಿಚ್ಚನಿಗೆ ಬ್ರೇಕ್ ಕೊಟ್ಟ 'ಆ' 5 ಸಿನ್ಮಾಗಳು]

  ರಾಧೆ-ರುಕ್ಮಿಣಿಯಾದ ರಚಿತಾ-ಭಾವನಾ

  ರಾಧೆ-ರುಕ್ಮಿಣಿಯಾದ ರಚಿತಾ-ಭಾವನಾ

  'ಮುರಾರಿ' ಕಿಚ್ಚ ಸುದೀಪ್ ಅವರ ಅಕ್ಕ-ಪಕ್ಕದಲ್ಲಿ ರಾಧೆ ಮತ್ತು ರುಕ್ಮಿಣಿಯಾಗಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಮತ್ತು ಭಾವನಾ ಮೆನನ್ ಅವರು, ಸಖತ್ ಆಗಿ ಡ್ಯಾನ್ಸ್ ಮಾಡುತ್ತಾ ಚೆಲ್ಲಾಟ ಆಡಿದರು.['ಮುಕುಂದ ಮುರಾರಿ' ಅಡ್ಡದಿಂದ ಲೀಕ್ ಆಗಿರುವ 'ಕೃಷ್ಣ' ಸುದೀಪ್ ಫೋಟೋ ಇದೇ.!]

  80 ಜನ ಸಹ ಕಲಾವಿದರು

  80 ಜನ ಸಹ ಕಲಾವಿದರು

  ಬೆಂಗಳೂರಿನ ಹೊರವಲಯದ, ನೆಲಮಂಗಲದ ಮೋಹನ್ ಸ್ಟುಡಿಯೋದಲ್ಲಿ, ಅದ್ಧೂರಿ ಸೆಟ್ ಹಾಕಿ ಈ ವಿಶೇಷ ಹಾಡಿನ ಚಿತ್ರೀಕರಣ ನಡೆಸಲಾಗಿತ್ತು. ಸುಮಾರು 80 ಮಂದಿ ಸಹ ನೃತ್ಯಗಾರರ ಜೊತೆ ಸುದೀಪ್, ರಚಿತಾ ಮತ್ತು ಭಾವನಾ ಹೆಜ್ಜೆ ಹಾಕಿದ್ದಾರೆ.

  ಮೊದಲ ದಿನ ಉಪ್ಪಿ ಹಾಜರಿದ್ದರು

  ಮೊದಲ ದಿನ ಉಪ್ಪಿ ಹಾಜರಿದ್ದರು

  ಎರಡು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದ್ದು, ಮೊದಲ ದಿನ ಉಪೇಂದ್ರ ಅವರು ಪಾಲ್ಗೊಂಡಿದ್ದರು. ಎರಡನೇ ದಿನ ಸುದೀಪ್ ಅವರು ರಚಿತಾ ಮತ್ತು ಭಾವನಾ ಜೊತೆ ಹೆಜ್ಜೆ ಹಾಕಿದರು.

  ಸದ್ಯದಲ್ಲೇ ಆಡಿಯೋ

  ಸದ್ಯದಲ್ಲೇ ಆಡಿಯೋ

  ನಿನ್ನೆ (ಸೆಪ್ಟೆಂಬರ್ 18) ರಿಯಲ್ ಸ್ಟಾರ್ ಉಪೇಂದ್ರ ಅವರು ಹುಟ್ಟುಹಬ್ಬ ಆಚರಿಸಿದ್ದು, ಅವರ ಹುಟ್ಟುಹಬ್ಬದ ಅಂಗವಾಗಿ ಸಾಂಗ್ ಟೀಸರ್ ರಿಲೀಸ್ ಆಗಿದೆ. ಇನ್ನೇನು ಸದ್ಯದಲ್ಲೇ ಆಡಿಯೋ ಕೂಡ ಬಿಡುಗಡೆ ಆಗಲಿದೆ.

  English summary
  Actresses Bhavana Menon and Kannada Actress Rachita Ram has danced with Upendra and Sudeep for a special song for the film 'Mukunda Murari'. The shooting for the film was almost complete except for a song and the final song of the film has also been picturised in a specially erected set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X