»   » ರಣವಿಕ್ರಮನಿಗೆ ಕೈಕೊಟ್ಟ 'ಬುಲ್ ಬುಲ್' ರಚಿತಾ

ರಣವಿಕ್ರಮನಿಗೆ ಕೈಕೊಟ್ಟ 'ಬುಲ್ ಬುಲ್' ರಚಿತಾ

By: ಉದಯರವಿ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ 'ಬುಲ್ ಬುಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಬೆಡಗಿ ರಚಿತಾ ರಾಮ್ ಈಗ 'ರಣವಿಕ್ರಮ'ನಿಗೆ ಕೈಕೊಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಧೀರ ರಣವಿಕ್ರಮ' ಚಿತ್ರದಿಂದ ಅವರು ಹೊರಬಿದ್ದಿದ್ದಾರೆ.

ಇದಕ್ಕೆ ಅವರು ಕೊಡುತ್ತಿರುವ ಕಾರಣ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂಬುದು. ಈ ಹಿಂದೆ ಅವರು 'ಪರಪಂಚ' ಚಿತ್ರದಿಂದಲೂ ಹೊರಬಿದ್ದಿದ್ದರು. ಆಗ 'ರಣವಿಕ್ರಮ' ಡೇಟ್ಸ್ ಕಾರಣ ಕೊಟ್ಟಿದ್ದರು. ಈಗ ರಣವಿಕ್ರಮ ಚಿತ್ರದಿಂದಲೇ ಅವರು ಹೊರಬಿದ್ದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. [ಸ್ಯಾಂಡಲ್ ವುಡ್ ಫೇವರಿಟ್ ಜೋಡಿ ಇಲ್ಲಿದೆ ನೋಡಿ]


ಸದ್ಯಕ್ಕೆ 'ರಣವಿಕ್ರಮ' ಚಿತ್ರದ ಶೂಟಿಂಗ್ ಬಳ್ಳಾರಿಯಲ್ಲಿ ಭರದಿಂದ ಸಾಗುತ್ತಿದೆ. ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಪುನೀತ್ ಅವರು ಇದೇ ಮೊದಲ ಬಾರಿಗೆ ಖಾಕಿ ಖದರ್ ತೋರಿಸುತ್ತಿರುವ ಚಿತ್ರ.

ಈ ಚಿತ್ರದ ಇನ್ನೊಬ್ಬ ನಾಯಕಿ ತೆಲುಗು, ತಮಿಳು ಚಿತ್ರಗಳ ಅಂಜಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ರಚಿತಾ ರಾಮ್ ಚಿತ್ರದಿಂದ ಹೊರಬಂದಿರುವ ಕಾರಣ ಇನ್ನೊಬ್ಬ ನಾಯಕಿಯ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ರಚಿತಾ ಸ್ಥಾನಕ್ಕೆ ಇನ್ನೊಬ್ಬ ಬೆಡಗಿ ಎಂಟ್ರಿ ಕೊಡಲಿದ್ದಾರೆ.

English summary
Sandalwood 'Bulbul' actor Rachita Ram walks out of Kannada movie Puneeth Rajkumar lead 'Ranavikrama'. The buzz is that owing to date clashes the actress has decided to drop the project.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada