For Quick Alerts
  ALLOW NOTIFICATIONS  
  For Daily Alerts

  'ಕಸ್ತೂರಿ ಮಹಲ್' ಸಿನಿಮಾದಿಂದ ಹೊರ ನಡೆದ ರಚಿತಾ: ಕಾರಣವೇನು?

  |

  ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಡಿಂಪಲ್ ಕ್ವೀನ್ ಬಹುನಿರೀಕ್ಷೆಯ 'ಕಸ್ತೂರಿ ಮಹಲ್' ಸಿನಿಮಾದಿಂದ ಹೊರನಡೆದಿದ್ದಾರಂತೆ.

  ಲಾಕ್ ಡೌನ್ ಬಳಿಕ ಸಿನಿಮಾಗಳು ಕೆಲಸಗಲು ಸ್ಥಗಿತವಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ, ತಿಂಗಳ ಬಳಿಕ ಸಿನಿಮಾ ಕೆಲಸಗಳು ಪ್ರಾರಂಭವಾಗುತ್ತಿವೆ. ಈ ನಡುವೆ ರಚಿತಾ ರಾಮ್ ಅಭಿನಯದ 'ಕಸ್ತೂರಿ ಮಹಲ್' ಸಿನಿಮಾ ಗ್ರ್ಯಾಂಡ್ ಆಗಿ ಲಾಂಚ್ ಆಗಿತ್ತು. ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾವಿದು. ಆದರೀಗ ರಚಿತಾ ಸಿನಿಮಾದಿಂದ ಹೊರನಡೆದ್ದಾರೆ ಎನ್ನುವ ಶಾಕಿಂಗ್ ಸುದ್ದಿ ಕೇಳಿ ಬರುತ್ತಿದೆ. ಮುಂದೆ ಓದಿ...

  ಡ್ರಗ್ಸ್ ಬಗ್ಗೆ ಕೇಳುತ್ತಿದ್ದಂತೆ ಉರಿದುಬಿದ್ದ ನಟಿ ರಚಿತಾ ರಾಮ್

  'ಕಸ್ತೂರಿ ನಿವಾಸ' ಟೈಟಲ್ ವಿವಾದ

  'ಕಸ್ತೂರಿ ನಿವಾಸ' ಟೈಟಲ್ ವಿವಾದ

  ತುಂಬಾ ಪ್ರೀತಿಯಿಂದನೇ ಸಿನಿಮಾ ಒಪ್ಪಿಕೊಂಡು, ಸಿನಿಮಾದ ಬಗ್ಗೆ ಮಾತನಾಡಿದ್ದ ರಚಿತಾ ದಿಢೀರನೆ ಸಿನಿಮಾದಿಂದ ಹೊರನಡೆದಿರುವುದು ಅಚ್ಚರಿ ಮೂಡಿಸಿದೆ. ರಚಿತಾ ಈ ಸಿನಿಮಾಗೆ ಸಹಿ ಹಾಕುವಾಗ ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂದು ಟೈಟಲ್ ಇಡಲಾಗಿತ್ತು. ಆದರೆ ಈ ಟೈಟಲ್ ಇಟ್ಟಾಗಿನಿಂದ ಸಿನಿಮಾ ವಿವಾದದ ಕೇಂದ್ರ ಬಿಂದುವಾಗಿತ್ತು.

  ಡಾ.ರಾಜ್ ಅಭಿಮಾನಿಗಳ ಆಕ್ರೋಶ

  ಡಾ.ರಾಜ್ ಅಭಿಮಾನಿಗಳ ಆಕ್ರೋಶ

  ಡಾ.ರಾಜ್ ಕುಮಾರ್ ನಟನೆಯ ಸುಪ್ರಸಿದ್ಧ ಸಿನಿಮಾದ ಹೆಸರನ್ನು ನಿರ್ದೇಶಕ ದಿನೇಶ್ ಬಾಬು ತನ್ನ ಬಳಸಿಕೊಂಡಿದ್ದರ ಬಗ್ಗೆ ರಾಜ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಟೈಟಲ್ ಬದಲಾಯಿಸುವಂತೆ ಅಭಿಮಾನಿಗಳು ನಿರ್ದೇಶಕರನ್ನು ಒತ್ತಾಯ ಮಾಡಿದ್ದರು. ಹೀಗಾಗಿ ನಿರ್ದೇಶಕ ದಿನೇಶ್ ಬಾಬು ಟೈಟಲ್ ಬದಲಾಯಿಸುವ ನಿರ್ಧಾರ ಮಾಡಿ ಚಿತ್ರಕ್ಕೆ ಕಸ್ತೂರಿ ಮಹಲ್ ಎಂದು ನಾಮಕರಣ ಮಾಡಿದರು. ಇನ್ನೇನು ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟೊತ್ತಿಗೆ ರಚಿತಾ ಸಿನಿಮಾದಿಂದ ಹೊರನಡೆದಿದ್ದಾರೆ.

  'ಕಸ್ತೂರಿ ನಿವಾಸ' ಟೈಟಲ್ ವಿವಾದ: ಅನುಮತಿಯೇ ಕೇಳಿಲ್ಲವೆಂದ ಭಗವಾನ್

  ರಚಿತಾ ಸಿನಿಮಾದಿಂದ ಹೊರನಡೆದಿದ್ದೇಕೆ?

  ರಚಿತಾ ಸಿನಿಮಾದಿಂದ ಹೊರನಡೆದಿದ್ದೇಕೆ?

  ಅಷ್ಟಕ್ಕು ರಚಿತಾ ಸಿನಿಮಾದಿಂದ ಹೊರ ನಡೆಯಲು ಕಾರಣ ಡೇಟ್ ಸಮಸ್ಯೆ ಎಂದು ಹೇಳಲಾಗುತ್ತಿದೆ. ರಚಿತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಹಾಗಾಗಿ ಡೇಟ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾದಿಂದಲೇ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲವರು ಡೇಟ್ ಸಮಸ್ಯೆಯಾಗುತ್ತೆ ಎಂದು ಈ ಮೊದಲು ರಚಿತಾ ಅವರಿಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ಕಿಚ್ಚ ಸುದೀಪ್-ರಚಿತಾ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸುವ ಸುದ್ದಿ, ನಿಜವೇ?

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ರಚಿತಾ ಜಾಗಕ್ಕೆ ಯಾರು ಬರ್ತಾರೆ?

  ರಚಿತಾ ಜಾಗಕ್ಕೆ ಯಾರು ಬರ್ತಾರೆ?

  'ಕಸ್ತೂರಿ ಮಹಲ್' ಸಿನಿಮಾದಲ್ಲಿ ಕಿರುತೆರೆಯ ಖ್ಯಾತ ನಟ ಸ್ಕಂದ ಅಶೋಕ್ ಮತ್ತು ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಸ್ತೂರಿ ಮಹಲ್ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ನಟಿ ರಚಿತಾ ರಾಮ್ ಚಿತ್ರದ ಕೇಂದ್ರವಾಗಿದ್ದರು. ಆದರೀಗ ಸಿನಿಮಾದಿಂದ ದಿಢೀರ್ ಹೊರ ನಡೆದಿರುವುದು ಚಿತ್ರತಂಡಕ್ಕೆ ತಲೆನೋವಾಗಿದೆ. ರಚಿತಾ ಜಾಗಕ್ಕೆ ಯಾರು ಬರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

  English summary
  Actress Rachita Ram walks out from Kasturi Mahal movie. Kasturi Mahal is the 50th film of director Dinesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X