»   » ರಾಜಕೀಯಕ್ಕೆ ಗ್ರೀನ್ ಸಿಗ್ನಲ್ ಕೊಟ್ರಾ ರಾಧಿಕಾ ಕುಮಾರಸ್ವಾಮಿ!

ರಾಜಕೀಯಕ್ಕೆ ಗ್ರೀನ್ ಸಿಗ್ನಲ್ ಕೊಟ್ರಾ ರಾಧಿಕಾ ಕುಮಾರಸ್ವಾಮಿ!

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿತ್ತು. ಆಗ ಅದು ಖಚಿತವಾಗಿರಲಿಲ್ಲ. ಆದ್ರೆ, ನಟಿ ಹಾಗೂ ನಿರ್ಮಾಪಕಿ ರಾಧಿಕಾ ಅವರು ರಾಜಕೀಯಕ್ಕೆ ಬರುವ ಮನ್ಸೂಚನೆ ಕೊಟ್ಟಿದ್ದಾರೆ.

ಹೌದು, ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ''ರಾಜಕೀಯಕ್ಕೆ ರಾಧಿಕಾ ಕುಮಾರಸ್ವಾಮಿ ಬರ್ತಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ನೀವ್ ಏನ್ ಹೇಳ್ತಿರಾ'' ಎಂದು ಪ್ರಶ್ನಿಸಿದಾಗ, ರಾಧಿಕಾ ಅವರು ಸಕರಾತ್ಮಕವಾಗಿ ಉತ್ತರಿಸಿದ್ದಾರೆ. ರಾಜಕೀಯಕ್ಕೆ ಬರುವ ಮನಸ್ಸು ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

Actress Radhika Kumaraswamy Talks About her Political entry

ಅಷ್ಟಕ್ಕೂ, ರಾಧಿಕಾ ಕುಮಾರಸ್ವಾಮಿ ಕೊಟ್ಟ ಉತ್ತರ ಏನದು? ನೋಡಿ ಇಲ್ಲಿದೆ ''ಇಷ್ಟು ದಿನ ಸಿನಿಮಾ ಇಲ್ಲದೇ ಮನೆಯಲ್ಲಿದ್ದಾಗ, ಮತ್ತೆ ನಾಯಕಿ ಆಗ್ತಿನಿ ಯಾವತ್ತು ಅಂದುಕೊಂಡಿರಲಿಲ್ಲ. ರಾಜಕೀಯಕ್ಕೆ ಬಂದ್ರುನೂ, ಹೇಳುವುದಕ್ಕೆ ಆಗಲ್ಲ. ಬಂದರೂ ಬರಬಹುದು. ಸದ್ಯಕ್ಕೆ ನನ್ನ ಮನಸ್ಸುನಲ್ಲಿರುವುದು ಒಳ್ಳೆಯ ಸಿನಿಮಾಗಳು ಮಾಡ್ಬೇಕು, ಭವಿಷ್ಯದಲ್ಲಿ ನನಗೂ ಗೊತ್ತಾಗ್ತಿಲ್ಲ. ನೀವು ಈಗ ಕೇಳ್ಬೇಕಾದ್ರೆ ನನಗೆ ಆಸಕ್ತಿ ಹೆಚ್ಚಾಗ್ತಿದೆ ರಾಜಕೀಯಕ್ಕೆ ಬರೋಣ ಅಂತ'' ಎಂದು ರಾಜಕೀಯಕ್ಕೆ ಬರುವ ಸೂಚನೆ ಕೊಟ್ಟಿದ್ದಾರೆ.

ಸದ್ಯ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ರಾಜೇಂದ್ರ ಪೊನ್ನಪ್ಪ' ಹಾಗೂ ಅರ್ಜುನ್ ಸರ್ಜಾ, ಜೆಡಿ ಚಕ್ರವರ್ತಿ ಅಭಿನಯದ 'ಕಾಂಟ್ರಾಕ್ಟ್' ಚಿತ್ರಗಳಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಅದರ ಜೊತೆ ಕಿರುತೆರೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Kannada Actress Radhika Kumaraswamy Talks About her Political entry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada