For Quick Alerts
ALLOW NOTIFICATIONS  
For Daily Alerts

  ನಟಿ ರಾಧಿಕಾ ಕುಮಾರಸ್ವಾಮಿ ಹೊಸ ಅವತಾರ

  By ಅನಂತರಾಮು, ಹೈದರಾಬಾದ್
  |

  ಕನ್ನಡ ಚಿತ್ರಗಳ 'ಸ್ವೀಟಿ' ನಟಿ ರಾಧಿಕಾ ಕುಮಾರಸ್ವಾಮಿ ಈಗೆಲ್ಲಿದ್ದಾರೆ? ಯಾವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ? 'ಸ್ವೀಟಿ ನನ್ನ ಜೋಡಿ' ಚಿತ್ರದ ಬಳಿಕ ಅವರು ಎಲ್ಲಿ ಹೋದರು? ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ, ತೆಲುಗಿನಲ್ಲಿ ಅವರು ಈಗ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ.

  ಸದ್ದಿಲ್ಲದಂತೆ ಕೋಡಿ ರಾಮಕೃಷ್ಣ ಜೊತೆಗಿನ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಬಿಜಿಯಾಗಿದ್ದಾರೆ. ಈ ಭಕ್ತಿ ಪ್ರಧಾನ ಚಿತ್ರದ ಹೆಸರು 'ಅವತಾರಂ'. ಅರುಂಧತಿ ಆರ್ಟ್ಸ್ ಲಾಂಛನದಲ್ಲಿ ಯುಗಂಧರ್ ರೆಡ್ಡಿ ನಿರ್ಮಿಸುತ್ತಿರುವ ಚಿತ್ರವಿದು. [ಶಿವಣ್ಣ ಹೊಸ ಚಿತ್ರ 'ಬಂಗಾರದ ವಂಶ']

  ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರದು ಮುಖ್ಯಪಾತ್ರ. ಉಳಿದಂತೆ ಪಾತ್ರವರ್ಗದಲ್ಲಿ ಭಾನು ಪ್ರಿಯಾ, ರಿಷಿ ಇದ್ದಾರೆ. ಚಿತ್ರದ ಸ್ಟಿಲ್ಸ್ ನೋಡಿದರೆ ರಾಧಿಕಾ ಕುಮಾರ ಸ್ವಾಮಿ ಗೆಟಪ್ ಅಣ್ಣತಂಗಿ, ತವರಿಗೆ ಬಾ ತಂಗಿ ಚಿತ್ರಗಳನ್ನು ನೆನಪಿಸುತ್ತದೆ. [ಸ್ವೀಟಿ ಚಿತ್ರ ವಿಮರ್ಶೆ]

  ಎಲ್ಲ ವರ್ಗದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ರಾಧಿಕಾ

  ಈ ಚಿತ್ರದ ಬಗ್ಗೆ ಕೋಡಿ ರಾಮಕೃಷ್ಣ ಹೇಳುವುದೇನೆಂದರೆ, "ಮಕ್ಕಳು, ಯುವಕರು, ದೊಡ್ಡವರು ವಿಶೇಷವಾಗಿ ಮಹಿಳೆಯರು ಹೀಗೆ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಇಷ್ಟವಾಗುತ್ತದೆ. ಈ ಚಿತ್ರದಲ್ಲಿ ಗ್ರಾಫಿಕ್ಸ್ ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ನಿರ್ಮಾಪಕರು ಯಾವುದಕ್ಕೂ ರಾಜಿಯಾಗದಂತೆ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ" ಎಂದಿದ್ದಾರೆ.

  ಕನ್ನಡದಲ್ಲೂ ಚಿತ್ರ ರಿಲೀಸ್ ಆಗಲಿದೆಯಂತೆ

  ಈ ಚಿತ್ರ ದ್ವಿಭಾಷಾ ಚಿತ್ರವಾಗಿದ್ದು ಕನ್ನಡದಲ್ಲೂ ತೆರೆಗೆ ತರುತ್ತಿದ್ದೇವೆ. ರಾಧಿಕಾ ಅವರಿಗೆ ಈ ಚಿತ್ರದ ಬಗ್ಗೆ ಎಲ್ಲಿಲ್ಲದ ಒಲವು ಇದೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕ ಕೋಡಿ ರಾಮಕೃಷ್ಣ.

  ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ

  ಇಷ್ಟಕ್ಕೂ ಕಥೆ ಏನೆಂದರೆ ಇದು ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತ ಎನ್ನಲಾಗಿದೆ. ದೆವ್ವ ಭೂತ ಪ್ರೇತಗಳ ವಿರುದ್ಧ ಮಹಿಳೆಯೊಬ್ಬರ ಹೋರಾಟವೇ ಚಿತ್ರದ ಕಥಾವಸ್ತು. ಈ ಕಾಲ್ಪನಿಕ ಚಿತ್ರದಲ್ಲಿ ಗ್ರಾಫಿಕ್ಸ್ ಪ್ರಮುಖ ಪಾತ್ರವಹಿಸುತ್ತವೆ. ಚಿತ್ರದ ಹೈಲೈಟ್ ಗಳಲ್ಲಿ ಇದೂ ಒಂದು.

  ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ತೆರೆಗೆ

  ಕೇರಳದಲ್ಲಿ ತೀರಾ ಇತ್ತೀಚೆಗೆ ನಡೆದ ಒಂದು ನೈಜ ಘಟನೆ ಸುತ್ತ ಹೆಣೆದ ಕಥೆ ಇದು. ಈ ನೈಜ ಘಟನೆಯನ್ನು ಬೆಳ್ಳಿಪರದೆಗೆ ಹೊಂದಾಣಿಕೆಯಾಗುವಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ತಂದಿದ್ದೇನೆ ಎನ್ನುತ್ತಾರೆ ಕೋಡಿ.

  ಫ್ಯಾಂಟಸಿ ಚಿತ್ರಗಳ ಸರದಾರ ಕೋಡಿ

  ಈ ಹಿಂದೆ ಇದೇ ರೀತಿಯ ಫ್ಯಾಂಟಸಿ ಥ್ರಿಲ್ಲರ್ ಚಿತ್ರಗಳನ್ನು ಮಾಡಿ ಗೆದ್ದವರು ಕೋಡಿ ರಾಮಕೃಷ್ಣ. ತೆಲುಗಿನಲ್ಲಿ ಅವರ ನಿರ್ದೇಶನದ ಅಮ್ಮೋರು, ಅರುಂಧತಿ ಚಿತ್ರಗಳು ಭಾರಿ ಸದ್ದು ಮಾಡಿದಂತಹವು. ಈಗ ಅದೇ ರೀತಿಯ ನಿರೀಕ್ಷೆಗಳನ್ನು ಈ ಚಿತ್ರದ ಮೇಲೂ ಇಡಲಾಗಿದೆ.

  ವಿಶುಯಲ್ ಎಫೆಕ್ಟ್ ಗಾಗಿ ವಿದೇಶಿ ತಂತ್ರಜ್ಞರು

  ಈ ಚಿತ್ರದ ವಿಶುಯಲ್ ಎಫೆಕ್ಟ್ ಗಾಗಿ ವಿದೇಶಿ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ. ಚಿತ್ರಪ್ರೇಮಿಗಳಿಗೆ ಈ ಚಿತ್ರ ಖಂಡಿತ ನಿರಾಸೆಪಡಿಸಲ್ಲ ಎಂಬ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

  ಕೋಡಿ ರಾಮಕೃಷ್ಣ ಎರಡು ವರ್ಷಗಳ ಬೆವರು

  ಈ ಚಿತ್ರಕ್ಕಾಗಿ ಎರಡು ವರ್ಷಗಳ ಕಾಲ ಶ್ರಮಿಸಿದ್ದೇನೆ. ರಾಧಿಕಾ ಅವರು ಸಾಕಷ್ಟು ಸಹಕರಿಸಿದ ಕಾರಣ ಚಿತ್ರವನ್ನು ಅದ್ಭುತವಾಗಿ ತೆರೆಗೆ ತಂದಿದ್ದೇವೆ ಎನ್ನುತ್ತಾರೆ ಕೋಡಿ ರಾಮಕೃಷ್ಣ.

  ಮಾಂತ್ರಿಕನ ಪಾತ್ರದಲ್ಲಿ ಸತ್ಯ ಪ್ರಕಾಶ್

  ಚಿತ್ರದ ಉಳಿದ ಪಾತ್ರಗಳಲ್ಲಿ ಅನ್ನಪೂರ್ಣ ಹಾಗೂ ಸತ್ಯ ಪ್ರಕಾಶ್ ಅಭಿನಯಿಸಿದ್ದಾರೆ. ಸದಾ ಅಂಡರ್ ವರ್ಲ್ಡ್ ಪಾತ್ರಗಳಿಂದ ಗಮನಸೆಳೆಯುತ್ತಿದ್ದ ಸತ್ಯ ಪ್ರಕಾಶ್ ಅವರು ಈ ಚಿತ್ರದಲ್ಲಿ ಮಾಂತ್ರಿಕನ ಪಾತ್ರದಲ್ಲಿ ಗಮನಸೆಳೆಯುತ್ತಾರೆ.

  ಇದೇ ಫೆಬ್ರವರಿ 27ಕ್ಕೆ ತೆರೆಗೆ

  'ಸ್ವೀಟಿ ನನ್ನ ಜೋಡಿ' ಚಿತ್ರದ ಬಳಿಕ ರಾಧಿಕಾ ಅವರು 'ಅವತಾರಂ' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರವನ್ನು ಫೆಬ್ರವರಿ 27ಕ್ಕೆ ತೆರೆಗೆ ತರುತ್ತಿದ್ದಾರೆ.

  ಕನ್ನಡ ಅವತಾರಂ ಬಿಡುಗಡೆ ಯಾವಾಗ?

  ಆದರೆ ಕನ್ನಡದ ಆವೃತ್ತಿ ಬಿಡುಗಡೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಕನ್ನಡ ಚಿತ್ರದ ಹೆಸರು ಏನೂ ಎಂಬುದೂ ಇನ್ನೂ ನಿರ್ಧಾರವಾಗಿಲ್ಲ. ಕನ್ನಡದಲ್ಲಿ ನಿರ್ಮಿಸಿ ತೆಲುಗುನಲ್ಲಿ ಡಬ್ ಮಾಡಲಾಗಿದೆಯೋ ಏನೋ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

  ಗ್ರಾಫಿಕ್ಸ್ ಗೆ ಹೆಚ್ಚಿನ ಪ್ರಾಧಾನ್ಯತೆ

  ರಾಧಿಕಾ ಕುಮಾರಸ್ವಾಮಿ ಚಿತ್ರಗಳೆಂದರೆ ಗ್ಲಾಮರ್ ಗೆ ಸಾಕಷ್ಟು ಅವಕಾಶ ಇರುತ್ತದೆ. ಆದರೆ ಈ ಚಿತ್ರ ಅಭಿನಯದ ಜೊತೆಗೆ ಗ್ರಾಫಿಕ್ಸ್ ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ. ಗ್ಲಾಮರ್ ಅಂಶಗಳೂ ಇದ್ದೇ ಇರುತ್ತವೆ.

  ತೆಲುಗು ಚಿತ್ರರಂಗಕ್ಕೆ ರಾಧಿಕಾ ಕುಮಾರಸ್ವಾಮಿ

  ಖಗೋಳಶಾಸ್ತ್ರದಲ್ಲಿ ಗ್ರಹವೊಂದು ಭೂಮಿಗೆ ಸಮೀಪಿಸಿದಾಗ ನಡೆಯುವ ವಿದ್ಯಮಾನಗಳನ್ನು ಚಿತ್ರದಲ್ಲಿ ಅತ್ಯದ್ಭುತವಾಗಿ ತೆರೆಗೆ ತರಲಾಗಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ.

  English summary
  Kannada actress Radhika Kumaraswamy forthcoming Telugu fantasy thriller Avataram is loosely based on a real incident in Kerala. Kodi Ramakrishna directed Avatharam is slated to release February 27.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more