»   » ರಾಧಿಕಾ ಪಂಡಿತ್ ರಿಂದ ಚಿತ್ರಪ್ರೇಮಿಗಳಿಗೆ ಶಾನೆ ಬೇಸರ

ರಾಧಿಕಾ ಪಂಡಿತ್ ರಿಂದ ಚಿತ್ರಪ್ರೇಮಿಗಳಿಗೆ ಶಾನೆ ಬೇಸರ

By: ಜೀವನರಸಿಕ
Subscribe to Filmibeat Kannada

ಕನ್ನಡದ ಹ್ಯಾಟ್ರಿಕ್ ಹೀರೋಯಿನ್ ರಾಧಿಕಾ ಪಂಡಿತ್ ಅಂತಾಹದ್ದೇನು ಮಾಡಿದ್ರು, ಅಭಿಮಾನಿಗಳಿಗೆ ಬೇಸರ ಆಗೋವಂತಾದ್ದು ಅಂತೀರಾ. ರಾಧಿಕಾ ಯಾರಾದ್ರೂ ಅಭಿಮಾನಿಗೆ ಬೈದ್ರಾ? ಇಲ್ಲಾ ರಾಂಗ್ ಆಗಿ ಕಪಾಳಕ್ಕೆ ಬಾರಿಸಿದ್ರಾ? ಹಾಗೆಲ್ಲ ಮಾಡೋ ಸ್ವಭಾವದವ್ರೇ ಅಲ್ಲ ರಾಧಿಕಾ ಪಂಡಿತ್.

ರಾಧಿಕಾ ಪಂಡಿತ್ ಸೋ ಸಿಂಪಲ್ ಅಂಡ್ ಸ್ವೀಟ್. ಹಾಗಾಗಿ ಅಂತಹಾ ಎಡವಟ್ಟೇನೂ ಆಗಿಲ್ಲ. ರಾಧಿಕಾ ಸಿನಿಮಾಗಳು ಲೇಟಾಗ್ತಿದೆ ಅನ್ನೋ ಬೇಸರ ಅಭಿಮಾನಿಗಳನ್ನ ಕಾಡ್ತಿದೆ. ರಾಧಿಕಾ ಪಂಡಿತ್ ಒಳ್ಳೆಯ ನಟಿ. ಒಳ್ಳೆಯ ಪರ್ಫಾಮರ್ ಕೂಡ. ಆದ್ರೆ ಅಭಿಮಾನಿಗಳಿಗೆ, ಚಿತ್ರಪ್ರೇಮಿಗಳಿಗೆ ರಾಧಿಕಾರನ್ನ ಬಿಗ್ಸ್ಕ್ರೀನ್ ನಲ್ಲಿ ನೋಡೋಕೆ ಆಗ್ತಿಲ್ಲ ಅನ್ನೋ ಬೇಸರವಿದೆ. [ನಟಿ ರಾಧಿಕಾ ಪಂಡಿತ್ ಸಕ್ಸಸ್ ಗುಟ್ಟೇನು ಗೊತ್ತಾ?]


ಇತ್ತೀಚೆಗೆ ಬಂದ ರಾಧಿಕಾ ಸಿನಿಮಾ ಅಂದ್ರೆ 'ದಿಲ್ ವಾಲಾ'. ಆ ಸಿನಿಮಾ ಹಿಟ್ಟಾಗಲಿಲ್ಲ. ರಾಧಿಕಾರ ಮತ್ತೊಂದು ಸಿನಿಮಾ 'ಬಹಾದ್ದೂರ್' ಮುಹೂರ್ತ ಮುಗಿಸಿ ಎರಡು ವರ್ಷ ಆಗ್ತಿದೆ. ಬಹಾದ್ದೂರ್ ರಿಲೀಸ್ ಯಾವಾಗ ಅನ್ನೋದು ಗೊತ್ತಿಲ್ಲ.

ಸದ್ಯ ಯಶ್ ಜೊತೆ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದಾರೆ. ಜಯಣ್ಣ ಪ್ರೊಡಕ್ಷನ್ಸ್ ಸಿನಿಮಾ ಅಂದ್ರೆ ಚಿತ್ರ ಬೇಗ ತೆರೆಗೆ ಬರೋದ್ರಲ್ಲಿ ಅನುಮಾನವಿಲ್ಲ. ಯಾವ ಚಿತ್ರವಾದ್ರೂ ಬರಲಿ ರಾಧಿಕಾ ತೆರೆಗೆ ಬರಲಿ ಅನ್ನೋ ಕಾತುರ, ಆತುರ ಚಿತ್ರಪ್ರೇಮಿಗಳಲ್ಲಿದೆ.

English summary
Actress Radhika Pandit fans waiting for her movies for long time, but the actress disappoints the fans. Because her movies are geting delayed to release. The fans last seen Radhika in 'Dilwala' (2013) after that the actress busy in Bahaddoor, Mr. & Mrs. Ramachari and Endendigu.
Please Wait while comments are loading...