»   » ನೂತನ ಮದುಮಗಳು ರಾಗಿಣಿ ದ್ವಿವೇದಿಗೆ ಶುಭಾಶಯ

ನೂತನ ಮದುಮಗಳು ರಾಗಿಣಿ ದ್ವಿವೇದಿಗೆ ಶುಭಾಶಯ

Posted By: ಜೀವನರಸಿಕ
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮದುಮಗಳಾಗಿದ್ದಾರೆ. ಗ್ಲಾಮರ್ ಡಾಲ್ ಆಗಿ ಪಡ್ಡೆಗಳ ಎದೆಯಲ್ಲಿ ಕಚಗುಳಿ ಇಡ್ತಿದ್ದ ರಾಗಿಣಿ ಈಗ ಸುಂದರವಾಗಿ ಸೀರೆಯುಟ್ಟು ಭಾರತೀಯ ನಾರಿಯಂತೆ ಕಂಗೊಳಿಸ್ತಿದ್ದಾರೆ. ಅವ್ರ ಅಲಂಕಾರ ನೋಡಿದ್ರೆ ರಾಗಿಣಿ ಸೀರೆಯಲ್ಲಿ ಇಷ್ಟೊಂದು ಸುಂದರವಾಗಿ ಕಾಣಿಸ್ತಾರಾ ಅಂತ ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ.

ಆದ್ರೆ ಗ್ಲಾಮರ್ ಡಾಲ್ ಗೆ ಇಷ್ಟುಬೇಗ ಮದುವೇನಾ ಅಂತ ಶಾಕ್ ಆಯ್ತಾ. ಅಷ್ಟೆಲ್ಲಾ ತಲೆಕೆಡಿಸಿಕೊಳ್ಬೇಡಿ. ಇದು 'ಟೈಮ್ಸ್ ಏಷ್ಯಾ ವೆಡ್ಡಿಂಗ್ ಫೇರ್ 2015' ಆಗಿ ರಾಗಿಣಿ ಕಾಣಿಸಿಕೊಂಡಿರೋ ಕಲರ್ ಫುಲ್ ಫೋಟೋಗಳಿವು.


Actress Ragini Dwivedi becomes Bride

ಟೈಮ್ಸ್ ಏಷ್ಯಾ ವೆಡ್ಡಿಂಗ್ ಫೇರ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸಹಿ ಮಾಡಿರೋ ರಾಗಿಣಿ ಸದ್ಯದಲ್ಲೇ ಎಲ್ಲೆಲ್ಲೂ ಮಿಂಚು ಹರಿಸಲಿದ್ದಾರೆ. ಸದ್ಯ ರಾಗಿಣಿ ಅಭಿನಯದ 'ಶಿವಂ' ಸಿನಿಮಾ ಥಿಯೇಟರ್ ನಲ್ಲಿದ್ದು ಪಂಚಭಾಷಾ ಸಿನಿಮಾ 'ಅಮ್ಮ' ತೆರೆಗೆ ಬರೋಕೆ ತಯಾರಾಗಿದೆ.


ಕನ್ನಡದಲ್ಲಿ ಮತ್ತೊಂದು ಸಿನಿಮಾ 'ಪರಪಂಚ'ದಲ್ಲಿ ಕೂಡ ರಾಗಿಣಿಯ ಪಂಚಿಂಗ್ ಪಾತ್ರ ಇದೆ. ಸದ್ಯ ರಾಗಿಣಿಯನ್ನ ಗ್ಲಾಮರ್ ಡಾಲ್ ಆಗಿ ನೋಡ್ತಿದ್ದ ಚಿತ್ರಪ್ರೇಮಿಗಳಿಗೆ ರಾಗಿಣಿಯನ್ನ ಮದುಮಗಳಾಗಿ ಆಭರಣಗಳ ಜೊತೆ ರಂಗುರಂಗಾಗಿ ನೋಡೋದೇ ಒಂದು ಸಂಭ್ರಮ. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ]


Actress Ragini Dwivedi becomes Bride2

ಶಿವಂ ಚಿತ್ರದಲ್ಲಿ ರಾಗಿಣಿ ದ್ವಿವೇದಿ ತುಂಡುಡುಗೆಯಲ್ಲಿ ಎಲ್ಲರ ಕಣ್ಣು ಕುಕ್ಕಿದ್ದರು. ಈಗ ಮೈತುಂಬ ಬಟ್ಟೆ ತೊಟ್ಟು ಚಿನ್ನದ ಒಡವೆಗಳನ್ನು ಹಾಕಿಕೊಂಡು ಥೇಟ್ ಮದುಮಗಳಂತೆ ಕಂಗೊಳಿಸುತ್ತಿದ್ದಾರೆ. ಅಭಿಮಾನಿಗಳಿಗೆ ಇದಕ್ಕಿಂತ ಸಂಭ್ರಮದ ಸಂಗತಿ ಇನ್ನೇನಿರಲಿಕ್ಕೆ ಸಾಧ್ಯ.


Actress Ragini Dwivedi becomes Bride3

ಸೊಂಟದಿಂದ ಎದೆಯತನಕ ನಾಗರಹಾವಿನ ಟ್ಯಾಟ್ಯೂ ಹಾಕಿಸಿಕೊಂಡು ಎಲ್ಲರ ಎದೆಯಲ್ಲಿ ಬುಸುಗುಡುವಂತೆ ಮಾಡಿದ್ದರು. ಈಗ ಅವರ ಡಿಫರೆಂಟ್ ಗೆಟಪ್ ಗೆ ಎಂಥಹವರೂ ಮಾರುಹೋಗಲೇಬೇಕು. ರಾಗಿಣಿಗೆ ಬಿಕಿನಿ ಅಷ್ಟೇ ಅಲ್ಲ, ಸೀರೆಯೂ ಒಪ್ಪುತ್ತದೆ ಎಂಬುದು ಈ ಚಿತ್ರಗಳನ್ನು ನೋಡಿದರೆ ನಿಮಗೇ ಮನದಟ್ಟಾಗುತ್ತದೆ.

English summary
Sandalwood glamour doll Ragini Dwivedi becomes Bride. The actress wears wedding saree and jewellery in Times Asia Wedding Fair 2015. Ragini is the brand ambassador for Times Asia Wedding Fair 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada