For Quick Alerts
  ALLOW NOTIFICATIONS  
  For Daily Alerts

  'ಎಲೆಕ್ಷನ್ ಗೆ ನಿಂತು ಬಿಡು' ರಾಗಿಣಿಗೆ ರೆಬಲ್ ಸ್ಟಾರ್ ನೀಡಿದ ಸಲಹೆ

  By Naveen
  |

  ನಟಿ ರಾಗಿಣಿ ದ್ವಿವೇದಿ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಗೆಲುವೋ.. ಸೋಲೋ.. ಸದ್ಯ ರಾಗಿಣಿ ಕೈನಲ್ಲಿ ಸಾಕಷ್ಟು ಅವಕಾಶಗಳು ಇದೆ. ಅದೇ ರೀತಿ ಅವರ ಅಭಿಮಾನಿ ಬಹಳ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ.

  ಚಿತ್ರರಂಗದಲ್ಲಿ ಹೆಸರು ಮಾಡಿದ ನಟ ನಟಿಯರು ರಾಜಕೀಯಕ್ಕೆ ಬರುವುದು ಹೊಸದೆನಲ್ಲ. ಅದೇ ರೀತಿ ಈಗ ರಾಗಿಣಿ ಕೂಡ ರಾಜಕೀಯ ಜೀವನ ಶುರು ಮಾಡಿದರೆ ಆಶ್ಚರ್ಯ ಪಡಬೇಡಿ. ಯಾಕೆಂದರೆ, ಒಳ್ಳೆಯ ಅವಕಾಶ ಸಿಕ್ಕು, ಸಮಯ ಕೂಡಿ ಬಂದರೆ ರಾಗಿಣಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಸುಳಿವು ನೀಡಿದ್ದಾರೆ.

  ಬುರ್ಕಾ ಧರಿಸಿ ಬಂದ ರಾಗಿಣಿಯ ಹಿಂದಿನ ರಹಸ್ಯವೇನು? ಬುರ್ಕಾ ಧರಿಸಿ ಬಂದ ರಾಗಿಣಿಯ ಹಿಂದಿನ ರಹಸ್ಯವೇನು?

  ನಿನ್ನೆ ರಾಗಿಣಿ ದ್ವಿವೇದಿ ನಟನೆಯ 'ದಿ ಟೆರೆರಿಸ್ಟ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದ ಬಗ್ಗೆ ಮಾತು ಶುರು ಮಾಡಿದ ರಾಗಿಣಿ ಲವಲವಿಕೆಯಿಂದ ಸಖತ್ ಜೋಶ್ ನಲ್ಲಿ ಚಿತ್ರದ ತಮ್ಮ ಪಾತ್ರದ ಬಗ್ಗೆ ಹಾಗೂ ಕೆಲ ವಿಷಯಗಳನ್ನು ಹೇಳಿದರು.

  actress ragini dwivedi enters politics

  ರಾಗಿಣಿ ಮಾತನಾಡುವ ಸ್ಟೈಲ್ ನೋಡಿದ ಅಂಬರೀಶ್ ''ಚೆನ್ನಾಗಿ ಮಾತನಾಡುತ್ತೀಯ.. ನೀನು ಎಲೆಕ್ಷನ್ ಗೆ ನಿಂತು ಬಿಡು'' ಎಂದು ತಮಾಷೆ ಮಾಡಿದರು. ಅಂಬಿ ಮಾತಿಗೆ ಉತ್ತರ ನೀಡಿದ ರಾಗಿಣಿ ''ನೀವು ನನಗೆ ರಾಜಕೀಯಕ್ಕೆ ಬನ್ನಿ ಎಂದು ಕರೆದೆ ಇಲ್ಲ. ನೀವು ಹೇಳಿದರೆ ಚುನಾವಣೆಗೆ ನಿಲ್ಲುತ್ತೇನೆ'' ಎಂದರು.

  English summary
  Kannada actress Ragini Dwivedi enters politics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X