»   » ಟಾಪ್ ಟು ಬಾಟಮ್ ಬದಲಾಗಿದ್ದಾರೆ ರಾಗಿಣಿ ನೋಡಿ

ಟಾಪ್ ಟು ಬಾಟಮ್ ಬದಲಾಗಿದ್ದಾರೆ ರಾಗಿಣಿ ನೋಡಿ

Posted By: ಜೀವನರಸಿಕ
Subscribe to Filmibeat Kannada

ಜನ ಚೇಂಜ್ ಕೇಳ್ತಾರೆ ಅಂತ ನಾವು ಚೇಂಜ್ ಆಗ್ಬೇಕಾ? ನಾವು ಅಂದುಕೊಂಡ ಹಾಗೆ ನಾವಿರಬೇಕು. ನಮಗೆ ಯಾವಾಗ ಹೇಗೆ ಬದ್ಲಾಗ್ಬೇಕು ಅನ್ನಿಸುತ್ತೋ ಆಗಲೇ ಬದ್ಲಾಗಬೇಕು. ಇದು ತುಪ್ಪದ ಬೆಡಗಿ ರಾಗಿಣಿ ಪಾಲಿಸಿ. ರಾಗಿಣಿ ಬದಲಾಗಿದ್ದಾರೆ.

ರಾಗಿಣಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಾಗ ಬಳುಕೋ ಬಳ್ಳಿಯಂತಿದ್ರು. 2008ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಆಗಿದ್ದ ರಾಗಿಣಿ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದ ಕಿಚ್ಚನಿಗೆ 'ವೀರಮದಕರಿ'ಯಲ್ಲಿ ಜೋಡಿಯಾದ್ರು. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ]

ಜಿಂತಾತ ಚಿತ ಚಿತ ಅಂತ ಹಾಡಿ ಕುಣಿದ್ರು ಸಿನಿಮಾ ಗೆಲ್ತು. ಕಿಚ್ಚ ಮಾತ್ರ ಹಾಗೇ ಸ್ಲಿಮ್ ಅಂಡ್ ಟ್ರಿಮ್ ಆಗಿ ಉಳಿದುಕೊಂಡ್ರು ಆದ್ರೆ ರಾಗಿಣಿ ಮೈ ಕೈ ತುಂಬಿಕೊಂಡು ಮಲೆನಾಡ ಮದುಮಗಳಂತಾದ್ರು. ಮೊದಲೇ 5.8 ಹೈಟು. ಆ ಹೈಟಿಗೂ ಪರ್ಸನಾಲಿಟಿಗೂ ಆರಡಿಯ ಮಾಲಾಶ್ರಿ ತರಹ ಕಾಣೋಕೆ ಶುರುವಾದ್ರು.

ರಾಗಿಣಿ ಗಿಣಿಯಾಗಿ ಉಳಿಯದೇ ಆಸ್ಟ್ರಿಚ್ ಪಕ್ಷಿ ತರಹ ಆದಾಗಲೇ ಅನ್ನಿಸುತ್ತೆ ಆ ಪರ್ಸನಾಲಿಟಿ ನೋಡಿ ರಾಗಿಣಿಗೆ ರಾಗಿಣಿ ಐಪಿಎಸ್ ಅನ್ನೋ ಸಿನಿಮಾ ಕೊಟ್ಟಿದ್ದು ಕೆ ಮಂಜು. ಆದ್ರೆ ಈಗ ರಾಗಿಣಿ ಕಂಪ್ಲೀಟ್ ಔಟ್ಲುಕ್ ಚೇಂಜ್ ಮಾಡಿಕೊಂಡಿದ್ದಾರೆ. ರಾಗಿಣಿಯ ರಂಗ್ ರಂಗ್ ಚೇಂಜ್ ಓವರ್ ಇಲ್ಲಿದೆ ನೋಡಿ

ಗ್ಲಾಮರಸ್ ಹೇರ್ ಸ್ಟೈಲ್

ಈ ಗ್ಲಾಮರ್ ಡಾಲ್ ಗೆ 2008 ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲನೆಯ ರನ್ನರ್ ಅಪ್ ಜೊತೆಗೆ ಬ್ಯೂಟಿಫುಲ್ ಹೇರ್ ಅವಾರ್ಡ್ ಕೂಡ ಸಿಕ್ಕಿತ್ತು. ಈಗ ಆ ಬ್ಯೂಟಿಫುಲ್ ಹೇರ್ ಗೆ ಗೋಲ್ಡ್ ಕಲರ್ ಕೊಟ್ಟಿದ್ದಾರೆ ರಾಗಿಣಿ.

ಲುಕ್ ಚೇಂಜ್

ಯರ್ರಾಬಿರ್ರಿ ದಪ್ಪ ಆಗಿದ್ದ ರಾಗಿಣಿ ಕಂಪ್ಲೀಟ್ ಮೇಕ್ ಓವರ್, ಚೇಂಜ್ ಓವರ್ ಎಲ್ಲವೂ ಆಗಿ ಬದಲಾದ ರೂಪದಲ್ಲಿ ಮತ್ತೆ 2009ರ ಗ್ಲಾಮರ್ಡಾಲ್ ಆಗಿ ಮಿರಮಿರನೆ ಮಿಂಚುವ ಫೋಟೋಶೂಟ್ ಮಾಡಿಸಿದ್ದಾರೆ.

ರಣಚಂಡಿ ರಾಗಿಣಿ

ಇನ್ನು ಇತ್ತೀಚೆಗೆ ರಾಗಿಣಿಯ ಪರ್ಸನಾಲಿಟಿ ನೋಡಿ ಅವ್ರಿಗೊಂದು ಪೊಲೀಸ್ ಡ್ರೆಸ್ ಹಾಕಿಸಿದ್ರೆ ತಮಿಳಿನ ನಮಿತಾರನ್ನೋ, ಕನ್ನಡದ ಮಾಲಾಶ್ರಿಯನ್ನೋ ನೋಡಿದ ಹಾಗಾಗುತ್ತೆ ಅಂತ ಈಗೀಗ ರಾಗಿಣಿಗೆ ಅಂತಹಾ ಆಫರ್ ಗಳೇ ಹೆಚ್ಚಾಗೋದು ಮಾಮೂಲಿಯಾಗಿತ್ತು. ಸದ್ಯ 'ರಣಚಂಡಿ' ಅನ್ನೊ ಚಿತ್ರ ರಾಗಿಣಿ ಕೈಯ್ಯಲ್ಲಿದೆ.

ಲೇಡಿ ಸಿಂಗಂ ಘರ್ಜನೆ

ಪಂಚಭಾಷಾ ಚಿತ್ರ 'ಅಮ್ಮ'ವನ್ನ ಮುಗಿಸಿರೋ ರಾಗಿಣಿ ಈಗ 'ಲೇಡಿ ಸಿಂಗಂ' ಅನ್ನೋ ಚಿತ್ರಕ್ಕೂ ತಯಾರಾಗ್ತಿರೋ ಸುದ್ದಿಯಿದೆ. ಆದ್ರೆ ಈ ನಡುವೆ ರಾಗಿಣಿ ಸ್ಲಿಮ್ ಆಗಿದ್ದಾರೆ. ಒಂದೆರೆಡು ತಿಂಗಳಿಂದ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೆ ಫಿಟ್ ಅಂಡ್ ಫೈನ್ ಆಗಿದ್ದಾರೆ.

19ಕ್ಕೇ ಸ್ಟಾರ್ ನಟಿ

ಹಾಗೆ ನೋಡಿದ್ರೆ ಬಹಳ ಬೇಗ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಎತ್ತರಕ್ಕೇರಿದ ಚೆಲುವೆ ಈ ಗ್ಲಾಮರ್ ಡಾಲ್. 19ರ ವರ್ಷಕ್ಕೇನೇ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ ರಾಗಿಣಿ 20ರ ವಯಸ್ಸಲ್ಲೇ ತೀರಾ ದಪ್ಪ ಅನ್ನಿಸಿದ್ದು ಬೇಡಿಕೆಯನ್ನ ಕಡಿಮೆ ಮಾಡಿತ್ತು.

ರಾಗಿಣಿಯನ್ನ ಹೀರೋ ಅಂದಿದ್ರು ಕಿಚ್ಚ

ರಾಗಿಣಿಯನ್ನ ಸ್ಯಾಂಡಲ್ ವುಡ್ ಗೆ ಕರೆತಂದ ಕಿಚ್ಚ ರಾಗಿಣಿಯನ್ನ ಹೀರೋ ಅಂತ ಮೂದಲಿಸಿದ್ದೂ ಇದೇ ಕಾರಣಕ್ಕೆ. ಎಂಟ್ರಿಕೊಟ್ಟಾಗ ಸ್ಲಿಮ್ ಆಗಿದ್ದ ರಾಗಿಣಿ ಆಮೇಲೆ ತೀರಾ ದಪ್ಪ ಆಗಿ ಅವಕಾಶ ಸಿಗದಿದ್ದಾಗ ನೀವೇ ಕರೆತಂದ ರಾಗಿಣಿಗೆ ಅವಕಾಶಗಳಿಲ್ಲ ಕೊಡೋಲ್ವ ಅಂದ ಪತ್ರಕರ್ತರ ಪ್ರಶ್ನೆ ರಾಗಿಣಿ ಈಗ ಹೀರೋ ಆಗಿದ್ದಾರೆ ಅಂದಿದ್ರು.

ಹೊಸ ಸಿನಿಮಾಗಾಗೀನಾ ?

ಇಷ್ಟಕ್ಕೂ ರಾಗಿಣಿ ಹೀಗೆಲ್ಲಾ ಚೇಂಜ್ ಓವರ್ ಪಡ್ಕೊಳ್ತಿರೋದು ನೋಡಿದ್ರೆ ಯಾವುದೋ ಹೊಸ ಸಿನಿಮಾಗೆ ರಾಗಿಣಿ ತಯಾರಿ ಮಾಡಿಕೊಳ್ತಿರೋ ಹಾಗಿದೆ. ಹಾಗೇನಾದ್ರೂ ಇದ್ರೆ ಸದ್ಯದಲ್ಲೇ ಗೊತ್ತಾಗಲಿದೆ.

English summary
Actress Ragini Dwivedi flaunts her slim and trim figure. Ragini's feat in itself is marvellous, but the glamour queen is not the one to rest. Fitness regime has become an innate part of her life now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada