»   » ರಣಚಂಡಿಯಾದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ರಣಚಂಡಿಯಾದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

By: ಉದಯರವಿ
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ರಣಚಂಡಿ ಅವತಾರ ಎತ್ತಿದ್ದಾರೆ. 'ರಾಗಿಣಿ ಐಪಿಎಸ್' ಬಳಿಕ ಅವರು ರೋಮ್ಯಾಂಟಿಕ್ ತಾರೆ ಅಷ್ಟೇ ಅಲ್ಲ ಆಕ್ಷನ್ ಗೂ ಸೈ ಎಂದಿದ್ದರು. ಈಗ ಮತ್ತೊಮ್ಮೆ ಆಕ್ಷನ್ ಪ್ರಧಾನ ಚಿತ್ರ 'ರಣಚಂಡಿ'ಗೆ ರೆಡಿಯಾಗಿದ್ದಾರೆ.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ನಿರ್ದೇಶಕ ಆನಂದ್ ಪಿ ರಾಜು. ಚಿತ್ರದ ಅಡಿಬರಹ 'ದಿ ಮಾಸ್' ಎಂಬುದು. ಈ ಚಿತ್ರದ ಮುಹೂರ್ತ ಭಾನುವಾರ (ಜೂ.8) ಸರಳವಾಗಿ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. [ರಾಗಿಣಿ ದ್ವಿವೇದಿ ಕುರಿತ ಕೆಲವು ಸೀಕ್ರೆಟ್ ಸಂಗತಿಗಳು]


ಆರ್ ಬಿ ಚೌದರಿ ಹಾಗೂ ಪುಟ್ಟಸ್ವಾಮಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಜುಲೈ 2ನೇ ವಾರದಿಂದ ರೆಗ್ಯುಲರ್ ಶೂಟಿಂಗ್ ಶುರು. ಈ ಚಿತ್ರದ ವಿಶೇಷ ಎಂದರೆ ಬಹುತೇಕ ಭಾಗದ ಚಿತ್ರೀಕರಣ ಲಕ್ಷದ್ವೀಪದಲ್ಲಿ ಮಾಡಲಾಗುತ್ತಿರುವುದು.

ಇನ್ನು ಉಳಿದಂತೆ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ರಾಗಿಣಿ ಅವರು ಕೇವಲ ಗ್ಲಾಮರ್ ಡಾಲ್ ಆಗಿಯಷ್ಟೇ ಉಳಿಯದೆ ತರಹೇವಾರಿ ಪಾತ್ರಗಳನ್ನು ಪೋಷಿಸುತ್ತಿದ್ದಾರೆ.

'ಅಮ್ಮ' ಎಂಬ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಅವರದು ಅಭಿನಯಕ್ಕೆ ಸವಾಲೊಡ್ಡುವ ಪಾತ್ರ. ರೋಮ್ಯಾಂಟಿಕ್, ಮಾಸ್, ಕ್ಲಾಸ್ ಹೀಗೆ ನಾನಾ ತರಹದ ಚಿತ್ರಗಳಲ್ಲಿ ರಾಗಿಣಿ ಈಗ ಫುಲ್ ಬಿಜಿ. ಇನ್ನು ಅವರ 'ರಣಚಂಡಿ' ಅವತಾರ ಅಭಿಮಾನಿಗಳಲ್ಲಿ ಸಾಕಷ್ಟು ಕಾತುರ ಉಂಟು ಮಾಡಿದೆ.

English summary
Sandalwood glamour doll Ragini Dwivedi again back to action. This time she playing a mass role in 'Ranachandi', the movie directed by Anand P Raju. The regular shooting starts from 2nd week of July. 
Please Wait while comments are loading...