»   » ರಾಗಿಣಿ 'ತುಪ್ಪದ ಬೆಡಗಿ' ಅಂದ್ರೆ ಜೋಕೆ, ಇನ್ಮುಂದೆ ಅವರು 'ಸಿಂಡ್ರೆಲಾ'

ರಾಗಿಣಿ 'ತುಪ್ಪದ ಬೆಡಗಿ' ಅಂದ್ರೆ ಜೋಕೆ, ಇನ್ಮುಂದೆ ಅವರು 'ಸಿಂಡ್ರೆಲಾ'

Posted By:
Subscribe to Filmibeat Kannada

ಇತ್ತೀಚೆಗೆ 'ತುಪ್ಪದ ಬೆಡಗಿ' ನಟಿ ರಾಗಿಣಿ ಅವರ ಸಿನಿಮಾಗಳು ಹೆಚ್ಚಾಗಿ ಬರದಿದ್ದರೂ, ಇನ್ನಿತರೇ ವಿಚಾರದ ಮೂಲಕ ರಾಗಿಣಿ ಅವರು ಆಗಾಗ ಸುದ್ದಿ ಮಾಡುತ್ತಿರುತ್ತಾರೆ. ಮೊನ್ನೆ ಸಂಭಾವನೆ ವಿಚಾರದ ಮೂಲಕ ಸುದ್ದಿ ಮಾಡಿದ್ದರು. ಇದೀಗ ಮತ್ತೆ ಹೊಸ ರೀತಿಯಲ್ಲಿ ಸುದ್ದಿಗೆ ಬಂದಿದ್ದಾರೆ.

ಅಂದಹಾಗೆ ನಟಿ ರಾಗಿಣಿ ಅವರಿಗೆ ಐಟಂ ಡ್ಯಾನ್ಸ್ ಮಾಡೋದು ಹೊಸ ವಿಷಯ ಅಲ್ಲ. 'ತುಪ್ಪ ಬೇಕಾ ತುಪ್ಪ'ದಿಂದ ಹಿಡಿದು, 'ಬಾಯಿ ಬಸಳೆ ಸೊಪ್ಪು' ಹಾಡಿನವರೆಗೆ ರಾಗಿಣಿ ದ್ವಿವೇದಿ ಅವರು ಕುಣಿದು-ಕುಪ್ಪಳಿಸಿದ್ದಾರೆ.['ಮುಂಗಾರು ಮಳೆ'ಯಲ್ಲಿ ನೆನೆದು 'ಗೋಲಿಸೋಡ' ಕುಡಿಯುವ ಅವಕಾಶ ನಿಮಗೆ]


ಇದೀಗ ಸಖತ್ ಸ್ಲಿಮ್ ಬ್ಯೂಟಿ ಆಗಿ, ಬಳುಕೋ ಬಳ್ಳಿ ಆಗಿರುವ ರಾಗಿಣಿ ಅವರು ಮತ್ತೆ ಐಟಂ ಸಾಂಗ್ ಒಂದಕ್ಕೆ ಸೊಂಟ ಕುಣಿಸಿದ್ದಾರೆ. ಈ ಬಾರಿ ರಾಗಿಣಿ 'ತುಪ್ಪ' ಹಂಚ್ತಾ ಇಲ್ಲ. ಬದ್ಲಾಗಿ ಚಿಕ್ಕಬಳ್ಳಾಪುರದಿಂದ ಓಡಿ ಬಂದ ಸಿಂಡ್ರೆಲಾ ಆಗಿದ್ದಾರೆ.[ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಯಾರು.?]


ಮುಂದಿನ ವಾರ ತೆರೆ ಕಾಣಲು ಸಜ್ಜಾಗಿ ನಿಂತಿರುವ 'ಗೋಲಿಸೋಡ' ಚಿತ್ರದ ಐಟಂ ಸಾಂಗ್ ಗೆ ರಾಗಿಣಿ ಅವರು ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ಮುಂದೆ ರಾಗಿಣಿ ಅವರನ್ನು 'ತುಪ್ಪದ ಬೆಡಗಿ' ಅಂತ ಯಾರು ಕರೀಬೇಡಿ, ಯಾಕೆಂದ್ರೆ ಅವರು 'ಚಿಕ್ಕಬಳ್ಳಾಪುರದ ಸಿಂಡ್ರೆಲಾ' ಆಗಿದ್ದಾರೆ. ಮುಂದೆ ಓದಿ...


ಯಾರ ಜೊತೆ ಕುಣಿದಿದ್ದು

ಹೆಚ್ಚಾಗಿ ಐಟಂ ಸಾಂಗ್ ಎಂದಾಗ ಅದು ಚಿತ್ರದ ನಾಯಕರ ಜೊತೆ ಇರುತ್ತದೆ. ಆದರೆ ಈ ಬಾರಿ ವಿಶೇಷವಾಗಿ ನಟಿ ರಾಗಿಣಿ ಅವರು ಕಾಮಿಡಿ ನಟರೊಬ್ಬರ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಯಾರು 'ಆ' ಕಾಮಿಡಿ ನಟ ನೋಡಿ ಮುಂದಿನ ಸ್ಲೈಡ್ ನಲ್ಲಿ..[ಬರೀ ಸೀರೆ ಉಡೋಕೆ ರಾಗಿಣಿಗೆ ಅಷ್ಟೊಂದು ಸಂಭಾವನೆ ಕೊಡ್ಬೇಕಿತ್ತಾ.?]


ಕಾಮಿಡಿ ನಟ ಸಾಧುಕೋಕಿಲಾ

ಈ ಬಾರಿ ರಾಗಿಣಿ ಅವರು ಕಾಮಿಡಿ ನಟ ಸಾಧು ಕೋಕಿಲಾ ಅವರ ಜೊತೆ 'ಗೋಲಿಸೋಡ' ಚಿತ್ರದ 'ರಂಗು ರಂಗು ರಂಗೀಲಾ, ಪಡ್ಡೆ ಹುಡುಗರಿಗೆ ನಾನೇ ಥೌಸಂಡ್ ವಾಲಾ, ಚಿಕ್ಕಬಳ್ಳಾಪುರದಿಂದ ಓಡಿ ಬಂದ ಸಿಂಡ್ರೆಲಾ..' ಎಂಬ ಹಾಡಿಗೆ ಎರ್ರಾ-ಬಿರ್ರಿ ಕುಣಿದಿದ್ದಾರೆ.['ಐಕಾನ್ ಆಫ್ ದ ಇಯರ್' ಪಟ್ಟ ಅಲಂಕರಿಸಿದ ರಾಗಿಣಿ ದ್ವಿವೇದಿ]


ಮಾರ್ಕೆಟ್ ನಲ್ಲಿ ಕುಣಿದ ರಾಗಿಣಿ

ಸಿಟಿ ಮಾರ್ಕೆಟ್ ನಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು, ಮೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಸುಮಾರು 40 ಜನ ಸಹ ಕಲಾವಿದರು ರಾಗಿಣಿ ಮತ್ತು ಸಾಧು ಮಹಾರಾಜ್ ಗೆ ಸಾಥ್ ಕೊಟ್ಟಿದ್ದಾರೆ.[ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]


ಜನಜಂಗುಳಿ ಮಧ್ಯೆ ಶೂಟಿಂಗ್

ಸಿಟಿ ಮಾರ್ಕೆಟ್ ನ ಜನಜಂಗುಳಿ ಮಧ್ಯೆ ಈ ಹಾಡನ್ನು ಚಿತ್ರೀಕರಣ ಮಾಡಿದ್ದು ವಿಶೇಷ. 'ಗೋಲಿಸೋಡ' ಸಿನಿಮಾದಲ್ಲೊಂದು, ಸಿನಿಮಾ ಶೂಟಿಂಗ್ ಆಗುತ್ತಿರುತ್ತದೆ. ಆ ಶೂಟಿಂಗ್ ನಲ್ಲಿ ರಾಗಿಣಿ ನಾಯಕಿಯಾದರೆ, ಸಾಧು ಕೋಕಿಲಾ ನಾಯಕ' ಈ ಸನ್ನಿವೇಶವನ್ನು ಇಡೀ ಒಂದು ಐಟಂ ಸಾಂಗ್ ಮೂಲಕ ತೋರಿಸಲಾಗಿದೆ. ರಾಮ್ ಜೋಗಯ್ಯ ಅವರು ಬರೆದ ಹಾಡಿಗೆ, ರಾಜೇಶ್ ರಾಮನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ತಮಿಳು ರೀಮೇಕ್

ತಮಿಳು ಚಿತ್ರ 'ಗೋಲಿಸೋಡ' ರೀಮೇಕ್ ಆಗಿರುವ ಈ ಚಿತ್ರದಲ್ಲಿ ಮಧು ಸೂಧನ್ ಅವರು ಖಳನಟನ ಪಾತ್ರದಲ್ಲಿ ಮಿಂಚಿದ್ದಾರೆ. ತಮಿಳು ಮೂಲ ಚಿತ್ರದಲ್ಲೂ ಅವರೇ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ನಟಿ ತಾರಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.


ಯಾವಾಗ ತೆರೆಗೆ.?

ಅನಾಥ ಹುಡುಗರ ಸುತ್ತ ಹೆಣೆದಿರುವ 'ಗೋಲಿಸೋಡ' ಚಿತ್ರದಲ್ಲಿ ಪ್ರಿಯಾಂಕ ಜೈನ್, ದಿವ್ಯಾ, ಹೇಮಂತ್, ಚಂದನ್ ಮತ್ತು ಮಂಜುನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ಬಹಳ ನಿರೀಕ್ಷೆ ಮೂಡಿಸಿರುವ 'ಗೋಲಿಸೋಡ' ಮುಂದಿನ ಶುಕ್ರವಾರ (ಸೆಪ್ಟೆಂಬರ್ 9) ದಂದು ಇಡೀ ಕರ್ನಾಟಕದಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.


English summary
Kannada Actress Ragini Dwivedi has done a Item dance in Kannada Movie 'Golisoda'. Ragini Dwivedi dance steps are very hot along with Actor Sadhu Kokila. 'Golisoda' all set to releasing on September 9th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada