»   » ಬರೀ ಸೀರೆ ಉಡೋಕೆ ರಾಗಿಣಿಗೆ ಅಷ್ಟೊಂದು ಸಂಭಾವನೆ ಕೊಡ್ಬೇಕಿತ್ತಾ.?

ಬರೀ ಸೀರೆ ಉಡೋಕೆ ರಾಗಿಣಿಗೆ ಅಷ್ಟೊಂದು ಸಂಭಾವನೆ ಕೊಡ್ಬೇಕಿತ್ತಾ.?

Posted By:
Subscribe to Filmibeat Kannada

'ತುಪ್ಪ ಬೇಕಾ ತುಪ್ಪ' ಹಾಡಿಗೆ ಡ್ಯಾನ್ಸ್ ಮಾಡಿದ ಮೇಲೆ ನಟಿ ರಾಗಿಣಿ ದ್ವಿವೇದಿ ಅವರು, ಸ್ಯಾಂಡಲ್ ವುಡ್ ನಲ್ಲಿ 'ತುಪ್ಪದ ಬೆಡಗಿ' ಅಂತಾನೇ ಫೇಮಸ್ ಆದರು. ಈ ಮೊದಲು ಒಳ್ಳೆ ಮೈ-ಕೈ ತುಂಬಿಕೊಂಡು ಪೂರ್ತಿ ಗುಂಡ-ಗುಂಡಗೆ ಇದ್ದ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ಸುಮಾರು ತೂಕ ಇಳಿಸಿಕೊಂಡು ಬಳುಕೋ ಬಳ್ಳಿಯಾಗಿದ್ದಾರೆ.

ಇನ್ನು ರಾಗಿಣಿ ಅವರು ಬಳುಕೋ ಲತೆಯಂತಾದ ಮೇಲೆ ಭಾರಿ ಆಫರ್ ಗಳು ಬರುತ್ತಿವೆ. ಈಗಾಗಲೇ ರಾಗಿಣಿ ಅವರ 'ನಾನೇ ನೆಕ್ಸ್ಟ್ ಸಿಎಂ', 'ಅಮ್ಮಾ', 'ರಣಚಂಡಿ' ಮುಂತಾದ ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ.

ಇವು ಮಾತ್ರವಲ್ಲದೇ ಹೊಸದಾಗಿ 'ಗಾಂಧಿಗಿರಿ' ಎಂಬ ಸಿನಿಮಾದಲ್ಲಿ ಬೇರೆ ರಾಗಿಣಿ ಅವರಿಗೆ ಅವಕಾಶ ದೊರಕಿದೆ. ಇನ್ನು ರಾಗಿಣಿ ಅವರಿಗೆ ಈ ಚಿತ್ರಕ್ಕಾಗಿ ಬರೋಬ್ಬರಿ 75 ಲಕ್ಷ ಸಂಭಾವನೆ ಸಿಕ್ಕಿದೆ ಅಂತ ಕೂಡ ನಾವೇ ನಿಮಗೆ ತಿಳಿಸಿದ್ವಿ.[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

ಅಷ್ಟಕ್ಕೂ ರಾಗಿಣಿ ಅವರಿಗೆ ಅಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಟ್ಟು, ಅವರಿಂದ ಎಂತಹ ಪಾತ್ರ ಮಾಡಿಸಬಹುದು, ಅನ್ನೋದು ಎಲ್ಲರಿಗೆ ಇರೋ ಕುತೂಹಲ. ಸದ್ಯಕ್ಕೆ ರಾಗಿಣಿ ಅವರ ಒಂದು ಫೋಟೋ ಹೊರಬಿದ್ದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

ಸೀರೆ ಉಟ್ಟ ನೀರೆ

ಇನ್ನೇನು ಸದ್ಯದಲ್ಲೇ ಸೆಟ್ಟೇರಲಿರುವ 'ಗಾಂಧಿಗಿರಿ' ಎಂಬ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು, ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಲಿದ್ದಾರೆ.

ಇಡೀ ಸಿನಿಮಾದಲ್ಲಿ ಸೀರೆ

ರಾಗಿಣಿ ಅವರ ಇಷ್ಟು ಸಿನಿಮಾಗಳಲ್ಲಿ, ಅವರು ಇಡೀ ಸಿನಿಮಾ ಪೂರ್ತಿ ಸೀರೆ ಉಟ್ಟಿರೋದನ್ನ ನೋಡಿದ್ದೀರಾ?, ಇಲ್ಲಾಂತಾದ್ರೆ, ಮುಂಬರುವ 'ಗಾಂಧಿಗಿರಿ' ಸಿನಿಮಾದಲ್ಲಿ ನೋಡಬಹುದು. ಈ ಸಿನಿಮಾದಲ್ಲಿ ರಾಗಿಣಿ ಅವರು ಬರೀ ಸೀರೆ ಉಟ್ಟು ಪ್ರೇಕ್ಷಕರ ಕಣ್ಣು ತಂಪು ಮಾಡಲಿದ್ದಾರೆ.

ಸ್ಕೂಲ್ ಟೀಚರ್ ಆದ ರಾಗಿಣಿ

'ಗಾಂಧಿಗಿರಿ' ಚಿತ್ರದಲ್ಲಿ ಬಳುಕೋ ಬಳ್ಳಿ ರಾಗಿಣಿ ದ್ವಿವೇದಿ ಅವರು ಸ್ಕೂಲ್ ಟೀಚರ್ ಪಾತ್ರ ವಹಿಸಿದ್ದಾರೆ. ಆದ್ದರಿಂದ ಅವರು ಇಡೀ ಸಿನಿಮಾ ಪೂರ್ತಿ ಸೀರೆ ಉಡಲೇಬೇಕು ತಾನೆ.

ಗ್ಲಾಮರ್ ಕಡಿಮೆ ಇದೆ

ಈ ಬಾರಿ ರಾಗಿಣಿ ಅವರು ಸೀರೆ ಉಟ್ಟು ಕಂಗೊಳಿಸಲಿರುವುದರಿಂದ, ಅವರ ಗ್ಲಾಮರ್ ಲುಕ್ ನೋಡೋ ಭಾಗ್ಯ ಪಡ್ಡೆ ಹೈಕಳಿಗಿಲ್ಲ. ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯಾಗಲಿರುವ ರಾಗಿಣಿಗೆ ಕೈಯಲ್ಲಿ ಕೋಲು-ಪುಸ್ತಕ ಹಿಡಿದು ಟೀಚರಮ್ಮ ಆಗಿದ್ದಾರೆ. 'ಪರಪಂಚ' ಚಿತ್ರದಲ್ಲಿ ''ಬಾಯಿ ಬಸಳೆ ಸೊಪ್ಪು, ಈರುಳ್ಳಿ" ಅಂತ ಹಾಟ್ ಆಗಿ ಕಾಣಿಸಿಕೊಂಡಿದ್ದ ರಾಗಿಣಿ ಈ ಬಾರಿ ಸಾದಾ-ಸೀದಾ ಲುಕ್ ನಲ್ಲಿದ್ದಾರೆ.

ನಾಯಕ ಯಾರು.?

ಈ ಚಿತ್ರದಲ್ಲಿ ನಟಿ ರಾಗಿಣಿ ಅವರ ಜೊತೆ ನಟ ಕಮ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಕಾಣಿಸಿಕೊಳ್ಳಲಿದ್ದಾರೆ. 'ದಿ ವಿಲನ್' ಚಿತ್ರದ ಶೂಟಿಂಗ್ ನಡುವೆಯೂ ಪ್ರೇಮ್ ಅವರು 'ಗಾಂಧಿಗಿರಿ' ಚಿತ್ರಕ್ಕಾಗಿ ಬಿಡುವು ಮಾಡಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ.

ನಿರ್ದೇಶಕ ಯಾರು.?

ಈ ಚಿತ್ರಕ್ಕೆ ರಘು ಹಾಸನ್ ಎಂಬುವವರು ಆಕ್ಷನ್-ಕಟ್ ಹೇಳಿದ್ದು, ಹಿರಿಯ ನಟಿ ಅರುಂಧತಿ ನಾಗ್ ಅವರು ಪ್ರೇಮ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ. ಈ ಮೊದಲು 'ಹಿಟ್ಲರ್' ಎಂದಿದ್ದ ಈ ಚಿತ್ರದ ಟೈಟಲ್, ವಿವಾದದ ಬಳಿಕ 'ಗಾಂಧಿಗಿರಿ' ಎಂದು ಬದಲಾಗಿದೆ.

English summary
Kannada Actress Ragini Dwivedi's new look in Kannada Movie 'Gandhigiri'. Actress Ragini school teacher role played in this movie. Actor-Director 'Jogi' Prem in the lead. The movie is directed by Raghu Hassan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada