»   » ಆಕ್ಷನ್ ಸೀನ್‌ನಲ್ಲಿ ಮೂಳೆ ಮುರಿದುಕೊಂಡ ರಾಗಿಣಿ

ಆಕ್ಷನ್ ಸೀನ್‌ನಲ್ಲಿ ಮೂಳೆ ಮುರಿದುಕೊಂಡ ರಾಗಿಣಿ

Posted By:
Subscribe to Filmibeat Kannada

ಹಾಟ್ ತಾರೆ ರಾಗಿಣಿ ದ್ವಿವೇದಿ ಈಗ ಆಕ್ಷನ್ ಪ್ರಧಾನ ಪಾತ್ರಕ್ಕೆ ಹೊರಳಿರುವುದು ಗೊತ್ತೇ ಇದೆ. ಚಿತ್ರದ ಹೆಸರು 'ರಾಗಿಣಿ ಐಪಿಎಸ್'. ಇತ್ತೀಚೆಗೆ ಈ ಚಿತ್ರದ ಸಾಹಸ ಸನ್ನಿವೇಶದಲ್ಲಿ ರಾಗಿಣಿ ಗಾಯಗೊಂಡಿದ್ದಾರೆ. ಆದರೆ ಅದನ್ನು ಲೆಕ್ಕಿಸದೆ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡು ಎಲ್ಲರನ್ನೂ ಚಕಿತಗೊಳಿಸಿದರು.

ಸಾಹಸ ಸನ್ನಿವೇಶದಲ್ಲಿ ರಾಗಿಣಿ ಮೂಳೆ ಮುರಿದುಕೊಂಡಿದ್ದರು. ಬಳಿಕ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ವೈದ್ಯರು ಕೆಲದಿನಗಳ ಮಟ್ಟಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಆದರೆ ರಾಗಿಣಿ ಮಾತ್ರ ತಮ್ಮ ನೋವನ್ನೂ ಲೆಕ್ಕಿಸದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ರಾಗಿಣಿ ಅವರ ಸಮರ್ಪಣ ಭಾವಕ್ಕೆ ಚಿತ್ರತಂಡದ ಸದಸ್ಯರು ಸರ್ಪೈಸ್ ಆಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಣಿ ಪಾತ್ರ ಪೋಷಿಸುತ್ತಿದ್ದೇನೆ. ಬಹಳ ಥ್ರಿಲ್ ಎನ್ನಿಸುತ್ತಿದೆ. ಚಿತ್ರಕ್ಕೆ ತಮ್ಮದೇ ಹೆಸರನ್ನು ಇಟ್ಟಿದ್ದಾರೆ ಚಿತ್ರದ ನಿರ್ಮಾಪಕರು. ನಿಜಕ್ಕೂ ನನಗೆ ತುಂಬಾನೆ ಸಂತಸವಾಗುತ್ತಿದೆ ಎಂದಿದ್ದಾರೆ ರಾಗಿಣಿ.

ಕೆ ಮಂಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಆನಂದ್ ಪಿ ರಾಜು. ಮೇ 24ರಂದು ಕಂಠೀರವ ಸ್ಟುಡಿಯೋದಲ್ಲಿ ರಾಗಿಣಿ ಐಪಿಎಸ್ ಚಿತ್ರ ಆರಂಭವಾಯಿತು. ಚಿತ್ರಕ್ಕೆ ಆರಂಭ ಫಲಕ ತೋರಿದವರು ಆಕ್ಷನ್ ಕ್ವೀನ್ ಮಾಲಾಶ್ರೀ. ಈ ಹಿಂದೆ ಆನಂದ್ ಪಿ ರಾಜು ಅವರಿಗೆ 'ಚೆನ್ನಮ್ಮ ಐಪಿಎಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಅನುಭವವಿದೆ.

ಮಾಸ್ ಮಾದ ಅವರ ಮೇಲ್ವಿಚಾರಣೆಯಲ್ಲಿ ರಾಗಿಣಿ ಆಕ್ಷನ್ ಸನ್ನಿವೇಶಗಳನ್ನು ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದೆ. ಕಮರ್ಷಿಯಲ್ ಚಿತ್ರಗಳಲ್ಲಿ ಏನೇನು ಇರುತ್ತದೋ ಅವೆಲ್ಲವನ್ನೂ ಇಲ್ಲಿ ನಿರೀಕ್ಷಿಸಬಹುದು ಎಂದಿದ್ದಾರೆ ರಾಗಿಣಿ. (ಏಜೆನ್ಸೀಸ್)

English summary
Kannada actress Ragini Dwivedi injured during shooting of a fight sequence of her latest film Ragini IPS in Bangalore. She was taken to a hospital where he is said to be out of danger. The actress attended the first day of the film’s shoot despite her injury.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada