For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಪ್ರೇಮ್ ಹುಟ್ಟುಹಬ್ಬಕ್ಕೆ ಪತ್ನಿ ರಕ್ಷಿತಾ ಪ್ರೀತಿಯ ವಿಶ್

  |

  ಸ್ಯಾಂಡಲ್ ವುಡ್ ನಿರ್ದೇಶಕ ಜೋಗಿ ಪ್ರೇಮ್ ಗೆ ಇಂದು (ಅ.22) ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬವನ್ನು ಪ್ರೇಮ್ ಚಿತ್ರೀಕರಣ ಸೆಟ್ ನಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ. ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣದಲ್ಲಿ ಪ್ರೇಮ್ ಬ್ಯುಸಿಯಾಗಿದ್ದಾರೆ. ಸದ್ಯ ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಲ್ಲೇ ಚಿತ್ರತಂಡದ ಜೊತೆ ಪ್ರೇಮ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  Happy Birthday Prem | ಊಟಿಯಲ್ಲಿ ಪ್ರೇಮ್ ಹುಟ್ಟುಹಬ್ಬ ಆಚರಿಸಿದ ಶಿಷ್ಯಂದಿರು | Filmibeat Kannada

  ಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಪ್ರೇಮ್ ಹುಟ್ಟುಹಬ್ಬಕ್ಕೆ ಪತ್ನಿ ರಕ್ಷಿತಾ ಪ್ರೀತಿಯ ಶುಭಾಶಯ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಪತಿ ಪ್ರೇಮ್ ಗೆ ವಿಶ್ ಮಾಡಿದ್ದಾರೆ.

  ರಾಣಾ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ ಪ್ರೇಮ್ರಾಣಾ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ ಪ್ರೇಮ್

  "ನಾನು ಏನು ಹೇಳಲಿ..ನಿಮ್ಮ ಬಗ್ಗೆ ನಿಜವಾಗಿ ಏನಾದರು ಹೇಳಬೇಕಾದಾಗ ಪದಗಳಲೇ ಕಡಿಮೆ ಆಗುತ್ತೆ. ನೀವು ನನ್ನೊಂದಿಗೆ ಈ ಪಯಣದ ಭಾಗವಾಗಿರುವುದಕ್ಕೆ ಹೆಚ್ಚು ಕೃತಜ್ಞನಾಗಿರಬೇಕು. ನೀವು ಅತ್ಯಂತ ಅದ್ಭುತ ಪ್ರೀತಿಯ ಮತ್ತು ಪ್ರಾಮಾಣಿಕ ವ್ಯಕ್ತಿ. ನೀವು ನನ್ನ ಜೀವನದ ಭಾಗವಾಗಿದ್ದಕ್ಕೆ ಧನ್ಯವಾದಗಳು. ಜನ್ಮದಿನದ ಶುಭಾಶಯಗಳು ಪಪ್ಪಿ. ನಾನು ನಿಮಗೆ ಎಂದೆಂದಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ. ಲವ್ ಯು." ಎಂದು ಪತಿಯ ಬಗ್ಗೆ ಭಾವನಾತ್ಮಕವಾಗಿ ಬರೆದು ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ.

  ರಕ್ಷಿತಾ ಸದ್ಯ ಸಹೋದರ ರಾಣಾ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿದೆ. ವಿಶೇಷ ಅಂದರೆ ರಕ್ಷಿತಾ ಕೂಡ ಈ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

  ಇನ್ನೂ ಹುಟ್ಟುಹಬ್ಬ ಆಚರಣೆ ದಿನ ಊಟಿಯಲ್ಲಿ ಇರುತ್ತೇನೆ ಎಂದು ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರೇಮ್. ''ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಲ್ಲೊಂದು ಮನವಿ, ನಮ್ಮ ಏಕ್'ಲವ್'ಯಾ ಶೂಟಿಂಗ್ ಇರುವ ಕಾರಣ ಈ ಬಾರಿ ನನ್ನ ಹುಟ್ಟುಹಬ್ಬದ ದಿನ ಊಟಿಯಲ್ಲಿರ್ತೀವಿ, ಎಲ್ಲಿದ್ದರೂ ಹೇಗಿದ್ದರೂ ಸದಾ ನಿಮ್ಮೊಟ್ಟಿಗೆ ನಾನು. ನಿಮ್ಮ ಅಭಿಮಾನವೇ ನನ್ನ ಶ್ರೀರಕ್ಷೆ. 22 ರಂದು ರಾತ್ರಿ 12ಗೆ ಶೂಟಿಂಗ್ ಸ್ಪಾಟ್ ಇಂದ ಲೈವ್ ಬರ್ತೀನಿ'' ಎಂದು ಹೇಳಿದ್ದಾರೆ.

  ಇನ್ನೂ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳು ಭರ್ಜರಿ ಹಾಡೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮಂಡ್ಯ ಮುತ್ತು ಅಭಿಮಾನಿ ಬಳಗದವರು ಪ್ರೇಮ್ ಅವರಿಗೆ ಟ್ರಿಬ್ಯೂಟ್ ಸಾಂಗ್ ತಯಾರಿಸಿ ಬಿಡುಗಡೆ ಮಾಡಿದ್ದಾರೆ.

  ''ನನ್ನ ಹುಟ್ಟುಹಬ್ಬಕ್ಕೆ ಮಂಡ್ಯ ಮುತ್ತು ಅಭಿಮಾನಿ ಬಳಗದವರು ಒಂದು ಟ್ರಿಬ್ಯೂಟ್ ಸಾಂಗ್ ಮಾಡಿದೀರ, ಸಿನಿಮಾ ಮತ್ತು ಅಮ್ಮ ಎರಡೂ ನನ್ನ ಜೀವ ಅನ್ನೋದು ಈ ಒಂದು ಹಾಡಲ್ಲಿ ತೋರ್ಸ್ಕೊಟ್ಟಿದೀರ, ತಂದೆ ತಾಯಿಯ ನಂತರ ಅವರಷ್ಟೇ ಹೆಚ್ಚು ಪ್ರೀತಿ ತೋರೋ ನೀವುಗಳು ಅಭಿಮಾನದ ಅನ್ನದಾತರು. ನಿಮ್ಮನೆ ಮಗ'' ಎಂದು ಆ ಹಾಡನ್ನು ಸಹ ಪ್ರೇಮ್ ಹಂಚಿಕೊಂಡಿದ್ದಾರೆ.

  English summary
  Actress Rakshitha birthday wishes to her husband prem. Prem celebrating his birthday on Ek love ya Shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X