For Quick Alerts
  ALLOW NOTIFICATIONS  
  For Daily Alerts

  ತೋಟದಲ್ಲಿ ಕೆಲಸ ಮಾಡುತ್ತಿರುವ ಪುತ್ರನ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ನಟನೆಯಿಂದ ದೂರ ಸರಿದಿರುವ ರಕ್ಷಿತಾ ಇದೀಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕ್ರೇಜಿ ಕ್ವೀನ್ ಆಗಾಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

  ಲಾಕ್ಡೌನ್ ಸಮಯದಲ್ಲಿ ತೋಟದ ಮನೆಯಲ್ಲಿ ಸಮಯ ಕಳೆದ Prem ಕುಟುಂಬ | Filmibeat Kannada

  ಇತ್ತೀಚಿಗೆ ರಕ್ಷಿತಾ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ. ರಕ್ಷಿತಾ ತನ್ನ ಪುತ್ರ ಸೂರ್ಯ ತೋಟದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಗ ಹೀಗೆ ಕೃಷಿ ಕೆಲಸ ಮಾಡುತ್ತಿರುವುದನ್ನು ನೋಡಿದ್ರೆ ತುಂಬಾ ಹೆಮ್ಮೆಯಾಗುತ್ತೆ ಎಂದು ಹೇಳಿದ್ದಾರೆ.

  ಸದ್ಯ ಕೊರೊನಾ ಕಾರಣದಿಂದ ಶಾಲೆಗಳು ಇನ್ನು ತೆರೆದಿಲ್ಲ. ಮಕ್ಕಳು ಕಳೆದ ಒಂದು ವರ್ಷದಿಂದ ಮನೆಯಲ್ಲೇ ಕಾಲಕಳೆಯುವಂತಾಗಿದೆ. ಈ ಸಮಯದಲ್ಲಿ ಅನೇಕ ಮಕ್ಕಳು ಕುಟುಂಬದ ಜೊತೆ ಇದ್ದು ಒಂದಿಷ್ಟು ಕೆಲಸಗಳನ್ನು ಕಲಿಯುತ್ತಿದ್ದಾರೆ. ಇದೀಗ ರಕ್ಷಿತಾ ಪುತ್ರ ಸೂರ್ಯ ಕೂಡ ತೋಟದಲ್ಲಿ ಕೆಲಸ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಈ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ನಾನು ಅವರ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ನನ್ನ ಪುಟ್ಟ ರೈತ. ಅವರು ತೋಟದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತೆ. ಇದು ಭಾನುವಾರ ಸೂರ್ಯ ನಮ್ಮ ತೋಟದಲ್ಲಿ ಮಾಡುವ ಕೆಲಸ. ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತೆ" ಎಂದು ಬರೆದುಕೊಂಡಿದ್ದಾರೆ.

  ರಶ್ಮಿಕಾ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಿರೂಪಕ, ನಟ ಅಕುಲ್ ಬಾಲಾಜಿ ಕಾಮೆಂಟ್ ಮಾಡಿ ಹೆಮ್ಮೆಯಾಗುತ್ತೆ ಎಂದು ಹೇಳಿದ್ದಾರೆ.

  ಅಂದಹಾಗೆ ರಕ್ಷಿತಾ ಸದ್ಯ ಕನ್ನಡ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತನ್ನ ಸಹೋದರ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಸಿನಿಮಾ ಏಕ್ ಲವ್ ಯಾ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಅನೇಕ ವರ್ಷಗಳ ಬಳಿಕ ರಕ್ಷಿತಾ ಏಕ್ ಲವ್ ಯಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

  English summary
  Sandalwood Actress Rakshitha shares video of her son working in farm. She says so proud of him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X