»   » ಎರಡನೇ ಮಗುವಿಗೆ ತಾಯಿಯಾದ ನಟಿ ರಂಭಾ

ಎರಡನೇ ಮಗುವಿಗೆ ತಾಯಿಯಾದ ನಟಿ ರಂಭಾ

Posted By:
Subscribe to Filmibeat Kannada

ತೊಂಬತ್ತರ ದಶಕದಲ್ಲಿ ಚಿತ್ರರಸಿಕರ ಹೃದಯ ಕದ್ದ ತಾರೆ ರಂಭಾ. ಕನ್ನಡದ 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಮೋಡಿ ಮಾಡಿದ ಬೆಡಗಿ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ರಂಭಾ ವರಿಸಿದ್ದರು.

ಈಗಾಗಲೆ ಈ ದಂಪತಿಗಳಿಗೆ ಮೂರು ವರ್ಷ ವಯಸ್ಸಿನ ಹೆಣ್ಣುಮಗು ಇದೆ. ಇದೀಗ ಮತ್ತೊಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ರಂಭಾ. ಕೆನಡಾದ ಟೊರಂಟೋದಲ್ಲಿ ನೆಲೆಸಿರುವ ರಂಭಾ ಅವರು ಅಲ್ಲೇ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. [ತಿರುಪತಿಯಲ್ಲಿ ಕರುಳ ಕುಡಿಯೊಂದಿಗೆ ನಟಿ ರಂಭಾ]

Actress Rambha delivers second child

ಮದುವೆ ಬಳಿಕ ಬೆಳ್ಳಿತೆರೆಯಿಂದ ದೂರ ಸರಿದಿದ್ದ ರಂಭಾ ಅವರು ಕಿರುತೆರೆಯ ಕೆಲವು ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾಣಿಸುತ್ತಿದ್ದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಇದ್ದು, ರಂಭಾ ಅವರ ಕುಟುಂಬಕ್ಕೆ ಮತ್ತೊಬ್ಬ ಸದಸ್ಯೆಯ ಆಗಮವಾಗಿದೆ. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ 'ಸರ್ವರ್ ಸೋಮಣ್ಣ', ಕನಸುಗಾರ ರವಿಚಂದ್ರನ್ ಜೊತೆಯಲ್ಲಿ 'ಓ ಪ್ರೇಮವೆ', ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಜೊತೆ 'ಭಾವ ಭಾವಮೈದ', ಸಾಹಸಸಿಂಹ ವಿಷ್ಣುವರ್ಧನ್ ಜೊತೆ 'ಸಾಹುಕಾರ', ರಸಿಕ ರವಿಚಂದ್ರನ್ ಜೊತೆಯಲ್ಲಿ 'ಪಾಂಡು ರಂಗ ವಿಠಲ', ಶಿವಣ್ಣ ಜೊತೆ 'ಗಂಡುಗಲಿ ಕುಮಾರರಾಮ', 'ಅನಾಥರು' ಚಿತ್ರದಲ್ಲಿ ವಿಶೇಷ ಭೂಮಿಕೆಯಲ್ಲಿ ರಂಭಾ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದಾರೆ. ಎರಡನೇ ಮಗುವಿಗೆ ತಾಯಿಯಾಗಿರುವ ಅವರಿಗೆ ಒಂದು ಶುಭಾಶಯ ಹೇಳಿ. (ಏಜೆನ್ಸೀಸ್)

English summary
Kannada actress Rambha who married entrepreneur Indiran and settled in Canada, has given birth to a girl child at a hospital in Toronto. This is the couple's second child.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada