»   » ಪತಿಯನ್ನು ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ ನಟಿ ರಂಭಾ

ಪತಿಯನ್ನು ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ ನಟಿ ರಂಭಾ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇತ್ತೀಚೆಗೆ ಸಿನಿಮಾ ನಟ ಅಥವಾ ನಟಿಯರ ಸಂಸಾರದಲ್ಲಿ ಬಿರುಗಾಳಿ ಎದ್ದು, ಅವರುಗಳು ವಿಚ್ಛೇದನಕ್ಕೆ ಅಂತ ಕೋರ್ಟ್ ಮೆಟ್ಟಿಲೇರೋದು ಸಾಮಾನ್ಯ ವಿಚಾರ ಆದಂತಾಗಿದೆ.

  ಕೆಲವು ಸಮಯಗಳ ಹಿಂದೆಯಷ್ಟೇ ನಟಿ ಅಮಲಾ ಪೌಲ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.[ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟಿ ಅಮಲಾ ಪೌಲ್ ದಂಪತಿ]

  ಆದ್ರೆ ಕನ್ನಡ ಸಿನಿಮಾ 'ಸಾಹುಕಾರ' ನಟಿ ರಂಭಾ ಅವರ ವಿಚಾರದಲ್ಲಿ ನಡೆದ ಘಟನೆ ಮಾತ್ರ ಅಪರೂಪ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಖ್ಯಾತಿ ಗಳಿಸಿರುವ ನಟಿ ರಂಭಾ ಅವರು ಕೂಡ ಇದೀಗ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

  ಎಲ್ಲರೂ ಹೆಚ್ಚಾಗಿ ಬೇರೆ-ಬೇರೆಯಾಗಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುವ ಈಗಿನ ಜಮಾನದಲ್ಲಿ, ನಟಿ ರಂಭಾ ಅವರು ಮಾತ್ರ ತಮ್ಮ ಸಂಸಾರವನ್ನು ಉಳಿಸುವ ಸಲುವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ನಟಿ ರಂಭಾ ಅಂದವಾದ ಸಂಸಾರಕ್ಕೆ ಏನಾಗಿದೆ, ನೋಡಲು ಮುಂದೆ ಓದಿ....

  ನಟಿ ರಂಭಾ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ

  ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ರಂಭಾ ಮತ್ತು ಅವರ ಪತಿ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರು ಕೆಲವು ಸಮಯಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದ್ರೆ ಇದೀಗ ನಟಿ ರಂಭಾ ಅವರಿಗೆ ತಮ್ಮ ಪತ್ನಿ ಜೊತೆ ಇರಬೇಕೆಂಬ ಹಂಬಲ ಉಂಟಾಗಿದೆ. ಆದ್ದರಿಂದ ತಮ್ಮ ನಡುವೆ ಹಳಸಿರುವ ಸಂಬಂಧವನ್ನು ಸರಿಪಡಿಸುವ ಸಲುವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.[ಕವಲುದಾರಿಯಲ್ಲಿ ನಟಿ ರಂಭಾ ದಾಂಪತ್ಯ ಜೀವನ?]

  ಕೋರ್ಟ್ ಮೊರೆ ಹೋದ ರಂಭಾ

  ಬೇರೆ-ಬೇರೆಯಾಗಿ ವಾಸವಿರುವ ರಂಭಾ ದಂಪತಿ ಇದೀಗ ಮತ್ತೆ ಒಟ್ಟಾಗಿ ಜೀವಿಸಲು ನಿರ್ಧರಿಸಿದ್ದಾರೆ. ಆದ್ದರಿಂದ ಖುದ್ದು ನಟಿ ರಂಭಾ ಅವರು ನಿನ್ನೆ (ಅಕ್ಟೋಬರ್ 25) ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ, ಇಬ್ಬರು ಒಟ್ಟಿಗೆ ಜೀವಿಸುವಂತೆ ಅನುವು ಮಾಡಿಕೊಡಬೇಕೆಂದು ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದಾರೆ.[ವಿಚ್ಛೇದನ ಸುದ್ದಿ ಖಚಿತಪಡಿಸಿದ ರಜನಿ ಪುತ್ರಿ ಸೌಂದರ್ಯ]

  ನನಗೆ ಗಂಡ ಬೇಕು- ರಂಭಾ

  ಇದೀಗ ಇಬ್ಬರು ಪುಟ್ಟ ಹೆಣ್ಣುಮಕ್ಕಳ ಭವಿಷ್ಯದ ಆಲೋಚನೆ ಮಾಡಿರುವ ನಟಿ ರಂಭಾ ಅವರು, ತಮ್ಮ ಪತಿ ಜೊತೆಗಿದ್ದರೆ ಸೂಕ್ತ ಎಂದು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ಚೆನ್ನೈ ಕೌಟುಂಬಿಕ ನ್ಯಾಯಾಲಕ್ಕೆ, ಹಿಂದು ಮದುವೆ ಕಾಯ್ದೆಯಡಿ ಸೆಕ್ಷನ್ 9ರ ಅನುಸಾರ, ಪತಿಯ ಜೊತೆ ಮತ್ತೆ ವಾಸ ಮಾಡುವ ಅನುವು ಮಾಡಿಕೊಡುವಂತೆ ಕೋರಿ ಅರ್ಜಿ ಗುಜರಾಯಿಸಿದ್ದಾರೆ.

  ಡಿಸೆಂಬರ್ ನಲ್ಲಿ ವಿಚಾರಣೆ

  ನಟಿ ರಂಭಾ ಅವರ ಅರ್ಜಿಯನ್ನು ಸ್ವೀಕರಿಸಿರುವ ಚೆನ್ನೈ ಕೌಟುಂಬಿಕ ನ್ಯಾಯಾಲಯ, ದಂಪತಿಗಳಿಬ್ಬರನ್ನು ಡಿಸೆಂಬರ್ 9ರಂದು ಕೋರ್ಟ್ ಗೆ ಬರಲು ತಿಳಿಸಿದೆ. ಅಂದು ರಂಭಾ ದಂಪತಿಯ ಕೇಸ್ ವಿಚಾರಣೆ ನಡೆಯಲಿದೆ.

  ಇಬ್ಬರು ಹೆಣ್ಣುಮಕ್ಕಳಿದ್ದಾರೆ

  ಕೆನಡಾ ಮೂಲದ ಉದ್ಯಮಿ, ಇಂದ್ರನ್ ಪದ್ಮನಾಥನ್ ಅವರ ಜೊತೆ, ಎಪ್ರಿಲ್ 8, 2010ರಲ್ಲಿ 'ಸರ್ವರ್ ಸೋಮಣ್ಣ' ಖ್ಯಾತಿಯ ನಟಿ ರಂಭಾ ಅವರ ಮದುವೆ ತಿರುಪತಿಯಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಮೇಲೆ ನಟಿ ರಂಭಾ ಅವರು ಪತಿಯ ಜೊತೆ ಟೊರೆಂಟೋಗೆ ಹಾರಿದ್ದರು. ಈ ದಂಪತಿಗಳಿಗೆ 5 ವರ್ಷ ವಯಸ್ಸಿನ ಲಾವಣ್ಯ ಮತ್ತು 19 ತಿಂಗಳ ಸಾಶಾ ಎಂಬ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ.

  ಸ್ಟಾರ್ ನಟರ ಜೊತೆ ಡ್ಯುಯೆಟ್ ಹಾಡಿದ್ದ ನಟಿ

  ಸಖತ್ ಗ್ಲಾಮರ್ ರೋಲ್ ನಲ್ಲಿ ನಟಿಸುತ್ತಿದ್ದ ನಟಿ ರಂಭಾ ಅವರ ಸಿನಿ ಜರ್ನಿಯಲ್ಲಿ, ಅವರಿಗೆ ಭಾಷೆ ಸಮಸ್ಯೆ ಉಂಟಾಗಲಿಲ್ಲ. ಆದ್ದರಿಂದ 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ನಟಿ ರಂಭಾ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮುಂತಾದ ಭಾಷೆಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರು ರಜನಿಕಾಂತ್, ಚಿರಂಜೀವಿ, ವಿಜಯ್, ಬಾಲಕೃಷ್ಣ, ಉಪೇಂದ್ರ, ರವಿಚಂದ್ರನ್, ಗೋವಿಂದ, ಮಮ್ಮುಟ್ಟಿ, ಸಲ್ಮಾನ್ ಖಾನ್ ಮುಂತಾದ ಸ್ಟಾರ್ ನಟರ ಜೊತೆ ಅಭಿನಯಿಸಿದ ಕೀರ್ತಿ ಗಳಿಸಿದ್ದಾರೆ.

  ಕೊನೆಯ ಸಿನಿಮಾ ಮಲಯಾಳಂ

  ನಟಿ ರಂಭಾ ಅವರು ಕಾಣಿಸಿಕೊಂಡ ಕೊನೆಯ ಸಿನಿಮಾ 'ದ ಫಿಲ್ಮ್ಸ್ ಸ್ಟಾರ್'. 2011ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ನಟ ದಿಲೀಪ್ ಅವರ ಜೊತೆ ರಂಭಾ ಡ್ಯುಯೆಟ್ ಹಾಡಿದ್ದರು. ತದನಂತರ ಅವರು ಕೆಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡು ಸಂಸಾರ ಮಾಡುವುದರಲ್ಲಿ ಬಿಜಿಯಾಗಿದ್ದರು.

  English summary
  Actress Rambha is reportedly trying to save her troubled marriage with estranged husband Indran Padmanathan, who apparently has been living separately for some time now. Actress Rambha has now moved to a family court in Chennai requesting to restore her conjugal rights.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more