twitter
    For Quick Alerts
    ALLOW NOTIFICATIONS  
    For Daily Alerts

    ಬೀದಿ ನಾಯಿ ಲಾರಾ ಅಂತ್ಯಸಂಸ್ಕಾರದಲ್ಲಿ ರಮ್ಯಾ ಕಣ್ಣೀರು

    |

    ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣ ಆಡಿ(Audi) ಕಾರು ಹತ್ತಿಸಿ ಲಾರಾ ಎಂಬ ಹೆಸರಿನ ಬೀದಿ ನಾಯಿಯನ್ನು ಕೊಂದಿರುವ ಬಗ್ಗೆ ನಟಿ ರಮ್ಯಾ ಸೇರಿದಂತೆ ನಗರದ ಹಲವು ಶ್ವಾನ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Recommended Video

    ಬೀದಿ ನಾಯಿ ಲಾರಾ ಗೋಸ್ಕರ ಬೆಂಗಳೂರಿಗೆ ಬಂದ ರಮ್ಯಾ

    ನಿನ್ನೆ ಸಂಜೆ ಸುಮ್ಮನಹಳ್ಳಿಯ ಪ್ರಾಣಿಗಳ ಚಿತಾಗಾರದಲ್ಲಿ ಲಾರಾಳ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ನಟಿ ರಮ್ಯಾ ಸೇರಿದಂತೆ ಹಲವು ಪ್ರಾಣಿ ಪ್ರಿಯರು ಭಾಗವಹಿಸಿದ್ದರು. ಅಂತ್ಯಕ್ರಿಯೆಯ ವೇಳೆ ನಟಿ ರಮ್ಯಾ ಕಣ್ಣೀರು ಹಾಕಿದ್ದಾರೆ.

    ಬಳಿಕ ಮಾಧ್ಯಮದೊಟ್ಟಿಗೆ ಮಾತನಾಡಿರುವ ನಟಿ ರಮ್ಯಾ, ''ಲಾರಾ ನಾಯಿ ಹತ್ಯೆಯ ಬಗ್ಗೆ ನನಗೆ ಟ್ವಿಟ್ಟರ್​ನಲ್ಲಿ ಮಾಹಿತಿ ತಿಳಿಯಿತು. ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಆರೋಪಿ ಉದ್ದೇಶಪೂರ್ವಕವಾಗಿಯೇ ನಾಯಿಯನ್ನು ಕೊಂದಿದ್ದಾನೆ. ಈ ಭೂಮಿ ಮೇಲೆ ಬದುಕಲು ನಮಗೆ ಇರುವಷ್ಟೇ ಹಕ್ಕು ಬೇರೆ ಪ್ರಾಣಿ-ಪಕ್ಷಿಗಳಿಗೂ ಇದೆ. ಆದರೆ ನಾವು ಅವುಗಳಿಗೆ ಬೆಲೆ ಕೊಡುತ್ತಿಲ್ಲ. ಈಗ ನಾನು ಒಬ್ಬ ಸೆಲೆಬ್ರಿಟಿಯಾಗಿ ನನ್ನ ಸ್ಥಾನವನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡದಿದ್ದರೆ ವ್ಯರ್ಥ ಆದಂತೆ ಆಗುತ್ತದೆ. ಇಂಥ ಘಟನೆ ಬಗ್ಗೆ ಬಗ್ಗೆ ನಾನು ಮಾತನಾಡದೇ ಇದ್ದರೆ ನನಗೆ ಪಾಪಪ್ರಜ್ಞೆ ಕಾಡುತ್ತದೆ'' ಎಂದಿದ್ದಾರೆ ರಮ್ಯಾ.

    Actress Ramya Attends in Street Dog Lara’s Final Ritual

    ''ನಮ್ಮ ದೇಶದಲ್ಲಿ ಪ್ರಾಣಿಗಳ ರಕ್ಷಣಗೆ ಕಠಿಣ ಕಾನೂನು ಇಲ್ಲ. 50 ರೂಪಾಯಿ ದಂಡ ಕಟ್ಟಿ ಹೊರಗಡೆ ಬಂದು ಬಿಡುತ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನ ಮೇಲೆ ಮಾತ್ರ ಅಲ್ಲ. ಪ್ರಾಣಿ ಪಕ್ಷಿಗಳ ಬಗ್ಗೆಯೂ ಕೂಡ ಇರಬೇಕು. ಮೊದಲನೆಯದಾಗಿ ಪ್ರಾಣಿಗಳ ರಕ್ಷಣೆಗಾಗಿ ಕಾನೂನು ಕಠಿಣವಾಗಬೇಕಿದೆ. ದೊಡ್ಡವರು, ದುಡ್ಡಿರೋರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರಾಣಿ ರಕ್ಷಣೆ ಕಾನೂನನ್ನು ಕಠಿಣಗೊಳಿಸಬೇಕು ಅಂತ ನಾನು ಸರ್ಕಾರಕ್ಕೆ ಮನವಿ ಮಾಡುತ್ತೀನಿ'' ಎಂದರು ರಮ್ಯಾ.

    ಬೀದಿ ನಾಯಿ ಲಾರಾ ಪಾರ್ಥಿವ ಶರೀರವನ್ನು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿಗೆ ತೆಗೆದುಕೊಂಡು ಬಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಲ್ಲಿಂದ ಮತ್ತೆ ಆಂಬುಲೆನ್ಸ್‌ನಲ್ಲಿ ಸುಮ್ಮನಹಳ್ಳಿಯ ಚಿತಾಗಾರಕ್ಕೆ ನಾಯಿ ಲಾರಾಳ ಶವವನ್ನು ತೆಗೆದುಕೊಂಡು ಬರಲಾಯಿತು. ಅಲ್ಲಿಗೆ ನಟಿ ರಮ್ಯಾ, ನಾಯಿಯನ್ನು ಪೋಷಣೆ ಮಾಡುತ್ತಿದ್ದ ಗಾಯತ್ರಿ ಇನ್ನೂ ಹಲವು ಶ್ವಾನ ಪ್ರಿಯರು ಆಗಮಿಸಿದ್ದರು. ಕೆಲವರು ಬೀದಿ ನಾಯಿಗಳ ಮೇಲಿನ ಕ್ರೌರ್ಯ ತಡೆಯಬೇಕೆಂದು ಭಿತ್ತಿ ಪತ್ರ ಪ್ರದರ್ಶಿಸಿದರು. ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳು ಲಾರಾಳ ಶವಕ್ಕೆ ಹೂವು ಅರ್ಪಿಸುವ ಮೂಲಕ ಅಂತಿಮ ವಿದಾಯ ಹೇಳಿದರು. ಕಣ್ಣೀರು ತುಂಬಿದ ಭಾವುಕ ಪರಿಸ್ಥಿತಿಯಲ್ಲಿ ಲಾರಾಳ ಅಂತಿಮ ಸಂಸ್ಕಾರ ನೆರವೇರಿತು.

    ಆದಿಕೇಶವುಲು ಮೊಮ್ಮಗ ಆದಿನಾರಾಯಣ ಚಲಾಯಿಸುತ್ತಿದ್ದ ಆಡಿ ಕಾರು ಬೀದಿ ನಾಯಿ ಮೇಲೆ ಹರಿದಿತ್ತು. ಘಟನೆಯ ವಿಡಿಯೋ ಲಭ್ಯವಾಗಿದ್ದು, ಆದಿಯು ಬೇಕೆಂದೇ ನಾಯಿಯ ಮೇಲೆ ಕಾರು ಚಲಾಯಿಸಿದ್ದಾನೆ ಎಂದು ಶ್ವಾನ ಪ್ರಿಯರು ಆರೋಪಿಸಿದ್ದಾರೆ. ಘಟನೆ ಬಳಿಕ ಆದಿ ವಿರುದ್ಧ ನಟಿ ರಮ್ಯಾ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

    ಜಯನಗರ ಮೊದಲ ಬ್ಲಾಕ್‌ನಲ್ಲಿ 29 ಜನವರಿಯಂದು ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಆದಿಯ ಕಾರು ಹರಿದಿದೆ. ರಸ್ತೆಯಲ್ಲಿ ಬರುತ್ತಿದ್ದ ಕಾರು ಉದ್ದೇಶಪೂರ್ವಕವಾಗಿ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಹರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ವಿಡಿಯೋ ವೈರಲ್ ಆಗಿದ್ದು ಆದಿಯನ್ನು ಬಂಧಿಸಲು ಒತ್ತಾಯಗಳು ಕೇಳಿ ಬಂದಿವೆ.

    English summary
    Actress Ramya attends in street dog Lara's final ritual yesterday in Sumanahalli. She said law for protecting animals should be strong.
    Wednesday, February 2, 2022, 10:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X