For Quick Alerts
  ALLOW NOTIFICATIONS  
  For Daily Alerts

  'ದತ್ತ' ಶೂಟಿಂಗ್ ನೆನಪಿಸಿಕೊಂಡ ರಮ್ಯಾ: ಮತ್ತೆ ದರ್ಶನ್ ಜೊತೆ ನಟಿಸೋ ಆಸೆ ಇದೆ ಎಂದ ಪದ್ಮಾವತಿ!

  |

  ಮೋಹಕ ತಾರೆ ರಮ್ಯಾ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ರಮ್ಯಾ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. 16 ವರ್ಷಗಳ ಹಿಂದೆ ಈ ಜೋಡಿ 'ದತ್ತ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿತ್ತು. ಚಿ. ಗುರುದತ್ ನಿರ್ದೇಶನದ ಸಿನಿಮಾ ಒಂದು ರೇಂಜಿಗೆ ಸದ್ದು ಮಾಡಿತ್ತು. ರಮ್ಯಾ ಈಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದು, ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕರೆ ನಟಿಸ್ತೀನಿ ಎಂದಿದ್ದಾರೆ.

  10 ವರ್ಷಗಳ ನಂತರ ನಟಿ ರಮ್ಯಾ ಸ್ಯಾಂಡಲ್‌ವುಡ್‌ಗೆ ವಾಪಸ್ ಆಗಿದ್ದಾರೆ. ರಾಜ್. ಬಿ ಶೆಟ್ಟಿ ನಿರ್ದೇಶಿಸಿ ನಟಿಸ್ತಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸ್ತಿದ್ದಾರೆ. ರಾಜ್. ಬಿ ಶೆಟ್ಟಿ ಜೊತೆ ಸೇರಿ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವಿಜಯ ದಶಮಿ ಸಂಭ್ರಮದಲ್ಲೇ ಅಭಿಮಾನಿಗಳಿಗೆ ರಮ್ಯಾ ಸಿಹಿ ಸುದ್ದಿ ಕೊಟ್ಟಿದ್ದರು. ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಮಾತ್ರವಲ್ಲದೇ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದು, ಎಲ್ಲರ ನಟರ ಜೊತೆಗೂ ನಟಿಸಲು ಉತ್ಸುಕರಾಗಿದ್ದಾರೆ.

  Ramya : ನಾಯಕಿಯಾಗಿ ಚಿತ್ರರಂಗಕ್ಕೆ ರಮ್ಯಾ ವಾಪಸ್: ಯಾವ ಸಿನಿಮಾ? ಹೀರೋ ಯಾರು? ಇಲ್ಲಿದೆ ಡಿಟೈಲ್ಸ್!Ramya : ನಾಯಕಿಯಾಗಿ ಚಿತ್ರರಂಗಕ್ಕೆ ರಮ್ಯಾ ವಾಪಸ್: ಯಾವ ಸಿನಿಮಾ? ಹೀರೋ ಯಾರು? ಇಲ್ಲಿದೆ ಡಿಟೈಲ್ಸ್!

  ಕಾರ್ಯಕ್ರಮದಲ್ಲಿ ನಟ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ 'ದತ್ತ' ಸಿನಿಮಾ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಆ ಸಿನಿಮಾ ಚಿತ್ರೀಕರಣದಲ್ಲಿ ದರ್ಶನ್ ಬಹಳ ತಮಾಮೆ ಮಾಡುತ್ತಿದ್ದರು. ಮಾತಿನಲ್ಲೇ ಕಾಲು ಎಳೆಯುತ್ತಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ನನಗೆ ಆಪ್ತ ಸ್ನೇಹಿತರು. ಮತ್ತೆ ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕರೆ ಖಂಡಿತ ನಟಿಸ್ತೀನಿ" ಎಂದು ರಮ್ಯಾ ಹೇಳಿದ್ದಾರೆ. ಈ ವಿಡಿಯೋ ಕಟ್ ಮಾಡಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

  ಕೆಲ ದಿನಗಳ ಹಿಂದೆ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಮ್ಯಾ ನಾನು 'ದತ್ತ' ಸಿನಿಮಾ ನಂತರ ದರ್ಶನ್ ಅವರನ್ನು ಭೇಟಿ ಆಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಲೋಕಸಭಾ ಚುಣಾವಣೆಯಲ್ಲಿ ನಿಂತು ಒಮ್ಮೆ ಗೆದ್ದು ಸಂಸದೆಯಾಗಿ ಮತ್ತೊಮ್ಮೆ ಸೋತು ರಮ್ಯಾ ದೆಹಲಿ ಸೇರಿಕೊಂಡಿದ್ದರು. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಒಂದಷ್ಟು ದಿನ ರಮ್ಯಾ ಕೆಲಸ ಮಾಡಿದ್ದರು. ಆದರೆ ಕಳೆದ ಲೋಕಸಭೆ ಚುನಾವಣೆ ನಂತರ ತಮ್ಮ ಸ್ಥಾನದಕ್ಕೆ ರಾಜಿನಾಮೆ ನೀಡಿ ಮೋಹಕ ತಾರೆ ವಾಪಸ್ ಬಂದಿದ್ದರು.

  ಪೋಲ್ಯಾಂಡ್, ಥೈಲ್ಯಾಂಡ್ ನಂತರ ದುಬೈ ಫ್ಲೈಟ್ ಏರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!ಪೋಲ್ಯಾಂಡ್, ಥೈಲ್ಯಾಂಡ್ ನಂತರ ದುಬೈ ಫ್ಲೈಟ್ ಏರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

  Actress Ramya hopes to work with Challenging Star Darshan again

  ಮೋಹಕ ತಾರೆ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಆದರೆ ಯಾಕೋ ರಮ್ಯಾ ಅದಕ್ಕೆ ಸಿದ್ಧರಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಜೊತೆ ಮತ್ತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ರಮ್ಯಾ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಬಾರಿ ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ. ಶೀಘ್ರದಲ್ಲೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ದರ್ಶನ್ ಜೊತೆ ನಟಿಸಿದರೂ ಅಚ್ಚರಿ ಪಡಬೇಕಿಲ್ಲ.

  English summary
  Actress Ramya hopes to work with Challenging Star Darshan again. Know More.
  Friday, October 7, 2022, 9:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X