For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಚುಂಬಿಸಿದ ಸೇಬು ಹತ್ತು ಸಾವಿರಕ್ಕೆ ಹರಾಜು!

  By Rajendra
  |

  ಗೋಲ್ಡನ್ ಗರ್ಲ್ ರಮ್ಯಾ ಚುಂಬಿಸಿದ ಸೇಬಿನ ಹಣ್ಣೊಂದು ಭರ್ಜರಿ ಬೆಲೆಗೆ ಹರಾಜಾಗಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ನೂತನ ದಾಖಲೆ ಎನ್ನಬಹುದು. ಅದೆಲ್ಲಾ ಸರಿ ರಮ್ಯಾ ಮುತ್ತಿಕ್ಕಿದ ಆಫಲ್ ಹರಾಜಾದ ಬೆಲೆ ಎಷ್ಟು ಅಂತೀರಾ? ರು.5೦೦ಕ್ಕೆ ಆರಂಭವಾದ ಹರಾಜು ಪ್ರಕ್ರಿಯೆ ಕಡೆಗೆ ರು.10,000ಕ್ಕೆ ದಾಖಲೆ ಬೆಲೆಗೆ ಹರಾಜಾಗಿದೆ. ರಮ್ಯಾರ ಅಭಿಮಾನಿಯೊಬ್ಬಈ ಪಾಟಿ ಹಣಕೊಟ್ಟು ಸೇಬನ್ನು ಹರಾಜಿನಲ್ಲಿ ಖರೀದಿಸಿರುವುದು ವಿಶೇಷ.

  ಪಬ್ಲಿಕ್ ಟಿವಿ ಸೋಮವಾರ ಸಂಜೆ ಪ್ರಸಾರ ಮಾಡಿದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ವಿಶೇಷ ಕಾರ್ಯಕ್ರಮದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಿತು. ಚಿತ್ರದಲ್ಲಿ ಉಪೇಂದ್ರ ಹಾಗೂ ರಮ್ಯಾ ಸೇಬಿನ ಹಣ್ಣನ್ನು ಕಚ್ಚಿಕೊಳ್ಳುವ ಸನ್ನಿವೇಶವಿದೆ. ಇದೇ ಸನ್ನಿವೇಶವನ್ನು ರಮ್ಯಾ ಕಾರ್ಯಕ್ರಮದಲ್ಲಿ ಮಾಡಿತೋರಿಸಿದರು.

  ಬಳಿಕ ಮುನಿರತ್ನ ಇದೇ ಸೇಬಿನ ಹಣ್ಣನ್ನು ಹರಾಜಿಗೆ ಇಟ್ಟರು. ವಿಶಾಲ್ ಎಂಬ ರಮ್ಯಾರ ಅಭಿಮಾನಿಯೊಬ್ಬ ಈ ಸೇಬಿನ ಹಣ್ಣನ್ನು ರು.10 ಸಾವಿರಕ್ಕೆ ಖರೀದಿಸಿದ. ತುಂಬಾ ಲೈವ್ಲಿಯಾಗಿ ಪ್ರಸಾರವಾದ ಈ ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ.

  ಹರೀಶ್ ನಾಗರಾಜ್ ನಡೆಸಿಕೊಟ್ಟ ಈ ಕಾರ್ಯಕ್ರಮ ಸತತ 2 ಗಂಟೆಗಳಿಗೂ ಅಧಿಕ ಸಮಯ ನೇರ ಪ್ರಸಾರವಾಯಿತು. ಉಪೇಂದ್ರ ಅವರು ತಮ್ಮ ಬಾಲ್ಯ, ಕಾಲೇಜು ದಿನಗಳನ್ನು ಇಲ್ಲಿ ನೆನಪಿಸಿಕೊಂಡರು. ಅವರ ತಂದೆತಾಯಿ, ಮಡದಿ ಮಕ್ಕಳೊಂದಿಗೆ ನೇರ ಪ್ರಸಾರವೂ ವೀಕ್ಷಕರಿಗೆ ಮುದ ನೀಡಿತು.

  ಚಿತ್ರದ ನಿರ್ಮಾಪಕ ಮುನಿರತ್ನ ಅವರು ಮಾತನಾಡುತ್ತಾ, ತಮ್ಮ 'ಕಠಾರಿವೀರ' ಚಿತ್ರವನ್ನು ಯಾವುದೇ ಚಿತ್ರದಿಂದ ಕದ್ದಿಲ್ಲ. ಇದೊಂದು ಒರಿಜಿನಲ್ ಸ್ಟೋರಿ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. 'ಕಠಾರಿವೀರ' ಚಿತ್ರದಲ್ಲಿನ "ಅಂಬಿಕಾ ಚಳಿ ತಾಳೆನು ಅಂಬಿಕಾ..ನೀನು ಭಲೆ ಡೇಂಜರ್ ಕಣೋ..." ಎಂಬ ಹಾಡಿನಲ್ಲಿ ರಮ್ಯಾ ಈ ರಸವತ್ತಾ ಸೇಬಿನ ಸೀನ್ ಬರುತ್ತದೆ. ಏನೇ ಆಗಲಿ ಗಿಳಿ ಕಚ್ಚಿದ ಮಾವಿನಕಾಯಿಯಂತೆ ರಮ್ಯಾ ಮುತ್ತಿಕ್ಕಿದ ಸೇಬಿಗೂ ಒಂದು ಭರ್ಜರಿ ಬೆಲೆ ಸಿಕ್ಕಿದೆ. (ಒನ್‌ಇಂಡಿಯಾ ಕನ್ನಡ)

  English summary
  Upendra starrer Kannada movie Katari Veera Surasundarangi special program on Public TV. Actress Ramya kisses an apple on the show which was auctioned for Rs 10,000. A fan of Ramya ran away with the prized Apple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X