»   » 'ನೀಲಾಂಬರಿ'ಗೆ ಮದುವೆಯಾದ ಮೇಲೂ ಡಿಮ್ಯಾಂಡ್

'ನೀಲಾಂಬರಿ'ಗೆ ಮದುವೆಯಾದ ಮೇಲೂ ಡಿಮ್ಯಾಂಡ್

Posted By:
Subscribe to Filmibeat Kannada

ಸಾಮಾನ್ಯವಾಗಿ ನಟಿಯೊಬ್ಬರಿಗೆ ಮದುವೆಯಾಯಿತು ಎಂದರೆ ಅವರ ಮಾರ್ಕೆಟ್ ಬಿದ್ದುಹೋಯಿತೆಂದೇ ಎಲ್ಲರೂ ಭಾವಿಸುತ್ತಾರೆ. ಹಾಗಾಗಿ ಕೆಲವು ತಾರೆಗಳು ಗುಟ್ಟಾಗಿ ಮದುವೆಯಾಗುತ್ತಾರೆ, ಇನ್ನೂ ಕೆಲವರು ಲಿವ್ ಇನ್ ರಿಲೇಷನ್ ಶಿಪ್ ಇಟ್ಟುಕೊಂಡು ತಮ್ಮ ಖಾಸಗಿ ವಿಚಾರಗಳನ್ನು ಗುಟ್ಟಾಗಿ ಮೇಂಟೇನ್ ಮಾಡುತ್ತಿರುತ್ತಾರೆ.

ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ತಾರೆ ರಮ್ಯಾ ಕೃಷ್ಣ ಅಕಾ ರಮ್ಯಾ ಕೃಷ್ಣನ್ ಗೆ ಮದುವೆಯಾದ ಮೇಲೂ ಡಿಮ್ಯಾಂಡ್ ಕುಗ್ಗಿಲ್ಲ. ಅವರ ಮಾರ್ಕೆಟ್ ಮದುವೆಯಾದ ಮೇಲೆ ಇನ್ನೂ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಅವರು ಸಹಿ ಹಾಕಿರುವ ಚಿತ್ರ.

Actress Ramya Krishna1

ಈ ಚಿತ್ರಕ್ಕಾಗಿ ಅವರು ಬರೋಬ್ಬರಿ ರು.90 ಲಕ್ಷ ಎಣಿಸಿದ್ದಾರೆ. ತಮಿಳಿನ ಈ ಚಿತ್ರಕ್ಕಾಗಿ ಅವರು ಕೊಟ್ಟಿರುವುದು ಮೂವತ್ತು ಕಾಲ್ ಶೀಟ್ ಗಳನ್ನು. ಒಂದೊಂದು ಕಾಲ್ ಶೀಟ್ ಗೆ ರು.3 ಲಕ್ಷ ವಸೂಲಿ ಮಾಡಿದ್ದಾರಂತೆ. ಅಲ್ಲಿಗೆ ರು.90 ಲಕ್ಷ ಅವರ ಇಂದಿನ ಮಾರುಕಟ್ಟೆ ಬೆಲೆ ಎಂದಾಯಿತು.

ರಮ್ಯಾ ಕೃಷ್ಣ ಈಗ ಪೋಷಕ ಪಾತ್ರಗಳಲ್ಲಿ ಬಿಜಿಯಾಗಿದ್ದಾರೆ. ಆದರೆ ಅವರ ಸಂಭಾವನೆ ಮಾತ್ರ ಯಾವುದೇ ನಾಯಕ ನಟಿಗಿಂತಲೂ ಕಮ್ಮಿ ಇಲ್ಲ. ರಮ್ಯಾ ಕೃಷ್ಣ ಅವರಿಗೆ ಮದುವೆಯಾಗಿದ್ದರೇನಂತೆ. ತಮ್ಮ ಮೈಮಾಟ, ಅಂದಚೆಂದ ಒನಪು ಒಯ್ಯಾರಗಳನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ ಈ ಚೆಂದುಳ್ಳಿ ಚೆಲುವೆ.

ಹಾಗಾಗಿ ಅತ್ತೆ, ಅಮ್ಮನ ಪಾತ್ರ ಮಾಡಿದರೂ ಕ್ಯೂಟ್ ಆಗಿ ಕಾಣುತ್ತಾರೆ. ಕನ್ನಡದ ಏಕಾಂಗಿ, ನೀಲಾಂಬರಿ, ಯಾರೇ ನೀ ಅಭಿಮಾನಿ, ಗಡಿಬಿಡಿ ಗಂಡ, ಪುಷ್ಪಕವಿಮಾನ, ಮಾಂಗಲ್ಯಂ ತಂತು ನಾನೇನಾ, ಬಾ ಬಾರೋ ರಸಿಕ, ಸ್ವೀಟಿ ನನ್ನ ಜೋಡಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Actress Ramya Krishna has shocked the Kollywood film Industry by taking huge remuneration of Rs.90 lakhs for the forthcoming movie Aambala starring Vishal under the direction of Sunder C.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada