»   » ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು

ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು

By: ಜೀವನರಸಿಕ
Subscribe to Filmibeat Kannada

ಒಂದು ವೇಳೆ ನೀವು 'ಸಿದ್ಲಿಂಗು' ಸಿನಿಮಾ ನೋಡಿದ್ದರೆ ನಿಮಗೆ ನೆನಪಿರಬೇಕು ಅಲ್ಲಿ ಹೀರೋಯಿನ್ ಸ್ಕೂಲ್ ಟೀಚರ್ ಪಾತ್ರಧಾರಿ ರಮ್ಯಾಗೆ ಯೋಗಿ ಅಂದ್ರೆ ಇಷ್ಟ. ಆದರೆ ಮದುವೆ, ಮನಸು ಕೊಡೋದು ಇವೆಲ್ಲ ಕಷ್ಟ. ಈಗ ಥೇಟ್ 'ಸಿದ್ಲಿಂಗು' ಸಿನಿಮಾದ ಹಾಗಾಗಿದೆ ಲಕ್ಕಿ ಗರ್ಲ್ ರಮ್ಯಾ ಮನಸ್ಥಿತಿ.

ಇನ್ನು 'ಸಿದ್ಲಿಂಗು' ಸಿನಿಮಾದ ಲೂಸ್ ಮಾದ ಪಾತ್ರದ ಹಾಗಾಗಿದೆ ನಿರ್ದೇಶಕ ವಿಜಯಪ್ರಸಾದ್ ರ ಪರಿಸ್ಥಿತಿ. 'ನೀರ್ ದೋಸೆ' ಸಿನಿಮಾವನ್ನ ಎರಡು ವಾಕ್ಯಗಳಲ್ಲಿ ಮೇಲಿನಂತೆ ಹೇಳಬಹುದು. ಆದರೆ ಯೋಗಿ ಇದ್ದಿದ್ದನ್ನ ಇದ್ದ ಹಾಗೇ ಹೇಳೋ ಬಾಯಿಬಡುಕ 'ಸಿದ್ಲಿಂಗು'.

ಈ ಸಿಂಪಲ್ ಸಿದ್ಲಿಂಗುಗೆ ಟಿಪಿಕಲ್ ಮೇಡಂ ಮೇಲೆ ಲವ್ವು. ಅವರು ಬೇಡ ಅಂದ್ರೂ ಬಿಟ್ಟಿರಲಾರದ ಪರಿಸ್ಥಿತಿ. ಈಗ ಆಗಿರೋದು ಅದೇ. 'ನೀರ್ ದೋಸೆ' ಸಿನಿಮಾ ವಿಷ್ಯದಲ್ಲಿ ರಮ್ಯಾ ಮತ್ತು ನಿರ್ದೇಶಕ ವಿಜಯ ಪ್ರಸಾದ್ ಗೊಂದಲದ ಗೂಡಾಗಿದ್ದಾರೆ ಅನ್ನಿಸುತ್ತಿದೆ. [ನೆಟ್ಟಗೆ ನಡೆಯಕ್ಕೆ ಬರಲ್ಲ ರಕ್ಷಿತಾಗೇಕೆ ರಾಜಕೀಯ?]

ರಮ್ಯಾ ಈಗಿರುವ ಸ್ಥಿತಿಯಲ್ಲಿ 'ನೀರ್ ದೋಸೆ' ಹುಯ್ಯೋ ಹಾಗಿಲ್ಲ ಬಿಡೋಹಾಗಿಲ್ಲ. ಆದರೆ 'ಆರ್ಯನ್' ಶೂಟಿಂಗ್ ಮಾಡಬಹುದು. 'ದಿಲ್ ಕಾ ರಾಜ' ಮುಗಿಸಬಹುದು. ಮತ್ತೊಂದು ಸಿನಿಮಾ ಕಂಪ್ಲೀಟ್ ಮಾಡ್ಬಹುದು. ಆದರೆ ನಿರ್ ದೋಸೆಗೆ ನಿರಾಸೆ ಮಾತ್ರ. ಯಾಕೆ ಹೀಗೆ ರಮ್ಯಾ? ಏನಂತಾರೆ? ಈ ಕುರಿತ ಒಂದು ಇಂಟರೆಸ್ಟಿಂಗ್ ಡೀಟೆಲ್ಸ್ ನಿಮಗಾಗಿ.

ಲಕ್ಕಿ ಸ್ಟಾರ್ ರಮ್ಯಾ ಸಡಿಲಿಸ್ತಾ ಇಲ್ಲ ಪಟ್ಟು

ರಮ್ಯಾ ಒಂಥರಾ ಹಠಮಾರಿ. ಕಿರಿಕ್ ಕ್ವೀನ್ ಅನ್ನೋ ಟಿಪಿಕಲ್ ಕ್ಯಾರೆಕ್ಟರ್ ನಿಂದ ಗುರುತಿಸಿಕೊಂಡಿರೋ ರಮ್ಯಾ ಹಠವಾದಿ. ನೀರ್ ದೋಸೆ ಸಿನಿಮಾ ವಿಷಯದಲ್ಲು ಅದೇ ಹಠ. ವಿವಾದ ಮಾಡಿಕೊಂಡವರು ನಿರ್ದೇಶಕರು ಮತ್ತು ಚಿತ್ರತಂಡದವರು. ಅವರೇ ಅದನ್ನ ಮುಗಿಸ್ಲಿ ಆಮೇಲೆ ನೋಡ್ತಿನಿ ಅಂತಾರೆ.

ಶಿವಣ್ಣಂಗೆ ರಮ್ಯಾ ಜೈ

ಆರ್ಯನ್ ಸಿನಿಮಾವನ್ನ ಒಪ್ಪಿಕೊಂಡಂತೇ ರಮ್ಯಾ ಮುಗಿಸ್ತಿದ್ದಾರೆ. ರಮ್ಯಾ ಎಂಪಿ ಆದಮೇಲೆ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನೇ ರಮ್ಯಾರ ಟೈಮ್ ಗೆ ತಮ್ಮ ಡೇಟ್ಸ್ ಹೊಂದಿಸಿಕೊಂಡಿದ್ದಾರಂತೆ. ಶಿವಣ್ಣ ಸೂಪರ್ ಅಂದಿದ್ದಾರೆ ರಮ್ಯಾ ಮೇಡಂ.

ಸುಮ್ ಸುಮ್ನೆ ರಮ್ಯಾ ಡೇಟ್ಸಿಲ್ಲ ಅಂತ ಬೇಜಾರ್

ಸುಮ್ ಸುಮ್ನೆ ನೀರ್ ದೋಸೆ ನಿರ್ದೇಶಕರು ಮತ್ತು ಚಿತ್ರತಂಡದವರು ರಮ್ಯಾ ಡೇಟ್ಸ್ ಕೊಡ್ತಿಲ್ಲ ಅಂತ ಅವರ ಹೆಸರು ಕೆಡಿಸಿದ್ದಾರೆ ಅನ್ನೋ ಬೇಸರ ರಮ್ಯಾಗಿದೆ. ಜಗ್ಗೇಶ್ ಅಂಕಲ್ ಜೊತೆ ಅವ್ರೇ ಹೇಳಿದ್ರು ಅಂತ ಒಪ್ಕೊಂಡೆ. ಅವ್ರಿಂದಾನೇ ಬೇಜಾರ್ ಆಯ್ತು ಅನ್ನೋದು ರಮ್ಯಾ ಅಳಲು.

ಮಾಧ್ಯಮದ ಮುಂದೆ ತಂದು ಮಾನ ಹರಾಜು ಮಾಡಿದ್ರು

ರಮ್ಯಾ ಮೇಲೆ ಏನೇನೋ ಆರೋಪಗಳನ್ನ ಹೊರಿಸಿ ಮಾಧ್ಯಮದ ಮುಂದೆ ತಂದಿದ್ದು ರಮ್ಯಾಗೆ ಸಿಕ್ಕಾಪಟ್ಟೆ ನೋವುಂಟು ಮಾಡಿದೆ. ಮಾಧ್ಯಮಗಳ ಹತ್ತಿರ ಹೋಗ್ಬೇಡಿ ಹಾಗೇನಾದ್ರೂ ಹೋದ್ರೆ ನಾನು ಸಿನಿಮಾ ಕಂಪ್ಲೀಟೇ ಮಾಡಲ್ಲ ಅಂತ ಕಂಡೀಷನ್ ಹಾಕಿದ್ದಾರೆ.

ನಿರ್ದೇಶಕರಿಗೆ ಇದು ನಿರೀಕ್ಷೆಯ ಸಿನಿಮಾ

ಸಿದ್ಲಿಂಗು ಟೈಂನಲ್ಲೇ ರಮ್ಯಾ ಕೈಯ್ಯಲ್ಲಿ ಟೀಚರ್ ಪಾತ್ರ ಮಾಡಿಸಿದ್ದ ವಿಜಯಪ್ರಸಾದ್ ರಿಗೆ ರಮ್ಯಾ ಕೈಯ್ಯಿಂದ ಮತ್ತೊಂದು ಟಿಪಿಕಲ್ ಪಾತ್ರ ಮಾಡಿಸೋ ಆಸೆ ಇತ್ತು. ಆ ಆಸೆಗೆ ರಮ್ಯಾ ಕೂಡ ಓಕೆ ಅಂದು ಸಿನಿಮಾ ಶುರುವಾಗಿ ಈಗ ಹೀಗಾಗಿದೆ. ಆದರೆ ಹೇಗಾದ್ರೂ ಮಾಡಿ ಸಿನಿಮಾ ಮುಗಿಸಿದ್ರೆ ಇದೊಂದು ಅದ್ಭುತ ಸಿನಿಮಾ ಆಗುತ್ತೆ ಅನ್ನೋದು ನಿರ್ದೇಶಕರ ಮನಸ್ಸು.

ಎಲ್ಲೆಲ್ಲೋ ಜಾರಿದೆ ರಮ್ಯ ಮೇಡಂ ಮನಸು

ಆದ್ರೆ ಸಿದ್ಲಿಂಗು ಸಿನಿಮಾದ ಹಾಡಿನಂತೆ ರಮ್ಯಾ ಮೇಡಂ ಮನಸ್ಸು ಎಲ್ಲೆಲ್ಲೋ ಜಾರಿದೆ. ರಾಜಕೀಯದತ್ತ ಹಾರಿದೆ. ಈಗ ಸಿನಿಮಾ ಮಾಡೋಕೆ ಟೈಮಿಲ್ಲ ಅಂತಾರೆ. ಬೇಗ ಇರೋ ಸಿನಿಮಾಗಳನ್ನ ಮುಗಿಸೋಣ ಅಂತಿದ್ದಾರೆ.

ಸಿನಿಮಾದಲ್ಲಿ ರಾಜಕೀಯ ಮಾಡ್ಬೇಡಿ ಮೇಡಂ

ಎಲ್ಲಾ ಓಕೆ ಒಂದ್ ಸಿನಿಮಾ ಶೂಟಿಂಗ್ ಗೆ ಟೈಂ ಮಾಡ್ಕೊಂಡು ಮತ್ತೊಂದಕ್ಕೆ ಟೈಮಿಲ್ಲ ಅಂದ್ರೆ ಹೇಗೆ? ಕೋರ್ಟ್ನಲ್ಲಿ ಇದ್ರೇನು ಶೂಟಿಂಗ್ ಮುಗಿಸಿಕೊಡಿ ನೀವೊಂಥರಾ ಹಠಮಾರಿ ಸರಿ, ರಾಜಕೀಯದಲ್ಲಿದ್ದೀರಿ ಸರಿ, ಆದರೆ ಸಿನಿಮಾದಲ್ಲಿ ರಾಜಕೀಯ ಬೇಡ ಅಂತಿದ್ದಾರೆ ಗಾಂಧಿನಗರದ ಬುದ್ಧಿ ಜೀವಿಗಳು.

English summary
Kannada actress Ramya (31), who is also a Member of Parliament, is on the horns of a dilemma. Word has it that her upcoming film titled "Aryan" will be her last film, at the same time Ramya is not interesting to act in 'Neer Dose' with Jaggesh, as politics is keeping her away from the industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada