»   » ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ

ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ

Posted By:
Subscribe to Filmibeat Kannada

ನವೀನ ತಂತ್ರಜ್ಞಾನದ ಮೂಲಕ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರನ್ನು ತೆರೆಯ ಮೇಲೆ ತೋರಿಸುವ ವಿಭಿನ್ನ ಪ್ರಯತ್ನ ಮಾಡಿರುವ 'ನಾಗರಹಾವು' ಚಿತ್ರ ಎಲ್ಲೆಡೆ ಸಾಕಷ್ಟು ಸುದ್ದಿ ಮಾಡುತ್ತಿದೆ.

ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನ ಮಾಡುತ್ತಿರುವ 'ನಾಗರಹಾವು' ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಅವರು ಮಿಂಚುತ್ತಿದ್ದು, ಅಭಿಮಾನಿಗಳಿಗೆ ಫುಲ್ ವಿಶುವಲ್ ಟ್ರೀಟ್ ನೀಡಲಿರುವ ಸಿನಿಮಾ ಇದಾಗಲಿದೆ ಅಂತ ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.['ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!]

ಅಂದಹಾಗೆ ಡಾ.ವಿಷ್ಣುವರ್ಧನ್ ಅವರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ವಿಷ್ಣು ಅವರಿಗೆ ಇದು 201ನೇ ಸಿನಿಮಾ ಆಗಲಿದೆ. ಇನ್ನು ಈ ಸಿನಿಮಾದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೇ ತಿಂಗಳು ಮೇ 30 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ.['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

ಈ ಚಿತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗ್ರಾಫಿಕ್ಸ್ ಗಳನ್ನು ಬಳಸಿಕೊಳ್ಳಲಾಗಿದ್ದು, ಹಲವಾರು ವಿಭಿನ್ನತೆ ಹಾಗೂ ವಿಶೇಷತೆ ಇದೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಏನೇನು ವಿಶೇಷತೆಗಳಿವೆ, ನಟಿ ರಮ್ಯಾ ಮತ್ತು ಡಾ.ವಿ‍ಷ್ಣು ಅವರನ್ನು ಈ ಚಿತ್ರದಲ್ಲಿ ಯಾವ ರೀತಿ ತೋರಿಸಲಾಗಿದೆ, ಅನ್ನೋ ಹಲವಾರು ವಿಚಾರಗಳ ಸಂಪೂರ್ಣ ಡೀಟೈಲ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ರಮ್ಯಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ

ವಿಶೇಷವಾಗಿ ಚಿತ್ರದಲ್ಲಿ ನಟಿ ರಮ್ಯಾ ಅವರು ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 120 ಅಡಿ ಉದ್ದದ ಹಾವಿನ ಅವತಾರದಲ್ಲಿ ಮಿಂಚಲಿದ್ದಾರೆ. ಅಂತೂ ನಟಿ ಸೌಂದರ್ಯ ಅವರ ನಂತರ ಲಕ್ಕಿ ಸ್ಟಾರ್ ರಮ್ಯಾ ಅವರು ಹಾವಿನ ರೂಪ ತಾಳಲಿದ್ದಾರೆ ಎಂದಾಯ್ತು. ಹಲವಾರು ಸಮಯಗಳ ನಂತರ ನಟಿ ರಮ್ಯಾ ಅವರು ಅದೂ ಹಾವಿನ ಅವತಾರದಲ್ಲಿ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.[ನಟ ಜಗ್ಗೇಶ್ ಗೆ ವಿಷ್ಣು ಅಭಿಮಾನಿ ಬರೆದಿರುವ ಬಹಿರಂಗ ಪತ್ರದಲ್ಲಿ ಏನಿದೆ?]

ಡಾ.ವಿಷ್ಣುರವರ ಪಾತ್ರ ಏನು?

ಎಲ್ಲರ ಮೆಚ್ಚಿನ ದಾದಾ ಡಾ.ವಿಷ್ಣು ಅವರನ್ನು ಸುಮಾರು ವರ್ಷಗಳ ನಂತರ ಮತ್ತೆ ತೆರೆ ಮೇಲೆ ನೋಡೋದೇ ಒಂದು ಚೆಂದದ ಸಂಗತಿ. ಅದ್ರಲ್ಲೂ ವಿಷ್ಣು ಅವರು ಹಾವಿನ ರೂಪದಲ್ಲಿ ಕಂಡರೆ ಹೇಗಿರಬಹುದು?. ಹೌದು ಆ ಅವಕಾಶ ಇದೀಗ 'ನಾಗರಹಾವು' ಚಿತ್ರದ ಮೂಲಕ ಅಭಿಮಾನಿಗಳಿಗೆ ಒದಗಿ ಬರಲಿದೆ.[ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ]

ದೈತ್ಯ ಹಾವಾಗಿ ವಿಷ್ಣು ದಾದಾ

ರಮ್ಯಾ ಅವರು 120 ಅಡಿ ಉದ್ದದ ಹಾವಾದರೆ ಡಾ.ವಿಷ್ಣುವರ್ಧನ್ ಅವರು ಅದಕ್ಕಿಂತಲೂ 20 ಅಡಿ ಉದ್ದ ಅಂದರೆ ಬರೋಬ್ಬರಿ 140 ಅಡಿ ಉದ್ದದ ಹಾವಿನ ಅವತಾರದಲ್ಲಿ ತಮ್ಮ ಅಭಿಮಾನಿಗಳಿಗೆ ದರುಶನ ನೀಡಲಿದ್ದಾರೆ.

ಹಾವುಗಳೇ ಹೈಲೈಟ್

ಇಡೀ 'ನಾಗರಹಾವು' ಚಿತ್ರದಲ್ಲಿ ನಟಿ ರಮ್ಯಾ ಮತ್ತು ದಿವಂಗತ ನಟ ವಿಷ್ಣು ಅವರು ದೈತ್ಯ ಹಾವಿನ ಅವತಾರದಲ್ಲಿ ಕಾಣಿಸಿಕೊಳ್ಳುವುದೇ ಇಡೀ ಚಿತ್ರದ ಹೈಲೈಟ್. ಇನ್ನು ವಿಷ್ಣುದಾದಾ ಮತ್ತು ನಟಿ ರಮ್ಯಾ ಅವರಿಗೆ ಗ್ರಾಫಿಕ್ಸ್ ಮೂಲಕ ಈ ದೈತ್ಯ ಹಾವುಗಳ ಅವತಾರ ತರಲು ಸುಮಾರು 25 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

3D ಪೋಸ್ಟರ್ ಗಳ ಕಮಾಲ್

ಚಿತ್ರದಲ್ಲಿ ರಮ್ಯಾ ಮತ್ತು ವಿಷ್ಣುವರ್ಧನ್ ಅವರ 3D ಪೋಸ್ಟರ್ ಗಳನ್ನು ಎಲ್ಲರ ಗಮನ ಸೆಳೆಯುವಂತೆ ಡಿಸೈನ್ ಮಾಡಿರುವ ಕೀರ್ತಿ, ಪೋಸ್ಟರ್ ಡಿಸೈನರ್ ದ್ರುಪ ಅವರಿಗೆ ಸಲ್ಲುತ್ತದೆ. ಜರ್ಮನಿಯ ಡಸೆಲ್ಡೋರ್ಫ್ ನಲ್ಲಿ ನಡೆದ ವಿಶ್ವದ ದೊಡ್ಡ ಮುದ್ರಣ ಉಪಕರಣ ಪ್ರದರ್ಶನದಲ್ಲಿ ಲೆಂಕ್ಟಿಕುಲರ್ ಮುದ್ರಣ ಪ್ರಶಸ್ತಿಗಾಗಿ ದ್ರುಪ ಅವರು ನಾಮನಿರ್ದೇಶನಗೊಂಡಿದ್ದರು.

ಅದ್ದೂರಿ ವೆಚ್ಚದಲ್ಲಿ ವಿಷ್ಣು ಕಟೌಟ್

ಅದ್ದೂರಿ ವೆಚ್ಚದಲ್ಲಿ ತಯಾರು ಮಾಡಿರುವ ವಿಷ್ಣುದಾದಾ ಅವರು ನಿಂತಿರುವ ಭಂಗಿಯ 50 ಅಡಿ ಎತ್ತರ ಇರುವ ಬೃಹತ್ ಕಟೌಟ್ ಈಗಾಗಲೇ ಎಲ್ಲರ ಕುತೂಹಲ ಕೆರಳಿಸಿದೆ.

ಅತ್ಯುನ್ನತ ಗ್ರಾಫಿಕ್ಸ್ ತಂತ್ರಜ್ಞಾನ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಅತ್ಯುನ್ನತ ಮಟ್ಟದ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಈ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು, ಈ ಸಿನಿಮಾ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೇ ಉಳಿದು ಬಿಡಬಹುದು ಅನ್ನೋದು ನಮ್ಮ ಅನಿಸಿಕೆ.

ಪ್ರೊಮೋಷನ್ ಗಾಗಿ ವಿಭಿನ್ನ ಪ್ರಯತ್ನ

ಈಗಾಗಲೇ 'ನಾಗರಹಾವು' ಚಿತ್ರದ ಪ್ರೊಮೋಷನ್ ಗಳು ವಿಭಿನ್ನವಾಗಿ ನಡೆಯುತ್ತಿದ್ದು, ಸೆಲ್ಫಿ ಕ್ಲಿಕ್ಕಿಸಿ ಬಹುಮಾನ ಗೆಲ್ಲಿ ಅನ್ನೋ ವಿಭಿನ್ನ ರೀತಿಯ ಪ್ರೊಮೋಷನ್ ನಡೆಯುತ್ತಿದೆ. ಜೊತೆಗೆ ಇಡೀ ಬೆಂಗಳೂರಿನಾದ್ಯಂತ ವಿಷ್ಣು ದಾದಾ ಅಭಿಮಾನಿಗಳಾದ ಆಟೋ ಡ್ರೈವರ್ ಗಳು ತಮ್ಮ ತಮ್ಮ ಆಟೋ ರಿಕ್ಷಾಗಳಲ್ಲಿ 'ನಾಗರಹಾವು' ಚಿತ್ರದ ಪೋಸ್ಟರ್ ಗಳನ್ನು ಹಾಕಿಕೊಂಡು ಫ್ರೀ ಪ್ರೊಮೋಷನ್ ಕೊಡುತ್ತಿದ್ದಾರೆ.

English summary
Director Kodi Ramakrishna is bringing back Dr. Vishnuvardhan Kannada movie 'Nagarahavu' to life for the late actor’s 201st film. Actor Vishnuvardhan and Actress Ramya will be seen in 140 feet and 120 feet snake avatars, which will be one of the highlights of Nagarahavu movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada