»   » ಊರು ಬಿಟ್ಟು ಹೊರಟ ರಮ್ಯಾ ಎಲ್ಲಿಗೆ? ಯಾಕೆ?

ಊರು ಬಿಟ್ಟು ಹೊರಟ ರಮ್ಯಾ ಎಲ್ಲಿಗೆ? ಯಾಕೆ?

Posted By:
Subscribe to Filmibeat Kannada
ಊರು ಬಿಟ್ಟು ಹೊರಟ ರಮ್ಯಾ ಎಲ್ಲಿಗೆ? ಯಾಕೆ? | Filmibeat Kannada

ಕನ್ನಡ ಸಿನಿಮಾರಂಗದ ಮಾಜಿ ನಟಿ ರಮ್ಯಾ ಊರು ಬಿಟ್ಟಿದ್ದಾರೆ. ಆಗಾಗ ಮಾತ್ರ ಕ್ಯಾಮೆರಾ ಕಣ್ಣಿಗೆ ಬೀಳುವ ರಮ್ಯಾ ದಿವ್ಯ ಸ್ಪಂದನಾ ಬೆಂಗಳೂರು ಬಿಟ್ಟು ಹೋಗಿ ಆಗಿದೆ. ಹಾಗಾದರೆ ರಮ್ಯಾ ಎಲ್ಲಿ ಹೋದರು ಅಂತೀರಾ, ಪಕ್ಕದಲ್ಲೇ ಇರುವ ದೆಹಲಿಯಲ್ಲಿ ರಮ್ಯಾ ಹೊಸ ಮನೆ ಮಾಡಿಕೊಂಡು ವಾಸವಿದ್ದಾರೆ. ಹೀಗಂತ ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ. ಬೆಂಗಳೂರನ್ನು ಆಗಾಗ ಮಿಸ್ ಮಾಡಿಕೊಳ್ಳುವ ರಮ್ಯಾ ಅವರಿಗೆ ದೆಹಲಿ ಕೂಡ ಇಷ್ಟವಾಗಿದೆಯಂತೆ.

ಸಿನಿಮಾರಂಗದ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿರುವ ಮಾಜಿ ಸಂಸದೆ ಮುಖಕ್ಕೆ ಮೇಕಪ್ ಹಚ್ಚುವುದು ಇನ್ನು ಕನಸು ಅಷ್ಟೇ ಎಂದಿದ್ದಾರೆ. ದೆಹಲಿಗೆ ಹೋದ ನಂತರ ಲೈಫ್ ಸ್ಟೈಲ್ ಬದಲಾಗಿದೆಯಂತೆ. ಯಾರೂ ಫೋಟೋ ಕೇಳೊಲ್ಲ, ತನಗಿಷ್ಟ ಬಂದಂತೆ ಬದುಕಬಹುದು ಅದರ ಜೊತೆಯಲ್ಲಿ ಯಾರು ಕೂಡ ನೀವು ರಮ್ಯಾ ಅಂತ ಗುರುತು ಹಿಡಿಯುವುದಿಲ್ಲ ಎಂದಿದ್ದಾರೆ.

actress Ramya stayed in Delhi

ಹಿರಿಯ ನಟಿ ಜಯಂತಿ ಅಸ್ವಸ್ಥ: ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು

ಸಿನಿಮಾರಂಗ ಸಾಕು ಎನ್ನಿಸಿರುವ ರಮ್ಯಾ ಚುನಾವಣೆಯ ಕಣಕ್ಕೂ ಇಳಿಯುವುದು ಅನುಮಾನವಂತೆ. ಸೋಷಿಯಲ್ ಮಿಡಿಯಾದ ಉಸ್ತುವಾರಿ ವಹಿಸಿಕೊಂಡಿದ್ದು ಅದೇ ಕೆಲಸ ಖುಷಿ ಕೊಡುತ್ತಿದೆ ಅಂತಲೂ ತಿಳಿಸಿದ್ದಾರೆ. ರಮ್ಯಾ ಇಷ್ಟು ವರ್ಷವಾದರೂ ಚುನಾವಣಾ ರಾಜಕೀಯ ಮಾಡುವುದನ್ನ ಕಲಿತಿಲ್ಲವಂತೆ ಹಾಗಾಗಿ ಈಗ ಮಾಡುತ್ತಿರುವ ಕೆಲಸದಲ್ಲಿ ಸಂತೃಪ್ತಿ ಇದೆ ಅಂತಾನೂ ತಿಳಿಸಿದ್ದಾರೆ.

ದೆಹಲಿಗೆ ಶಿಫ್ಟ್ ಆದ ನಂತರ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರಂತೆ. ಸ್ವಲ್ಪ ಸಮಯ ಸಿಕ್ಕಾಗ ಮಾತ್ರ ನಿದ್ರೆ ಮಾಡುತ್ತೇನೆ, ಪ್ರೀತಿಯಿಂದ ಸಾಕಿರುವ ನಾಯಿಗಳ ಜೊತೆ ಆಟವಾಡುತ್ತೇನೆ ಎಂದು ರಮ್ಯಾ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

actress Ramya stayed in Delhi

ಅದೇನೆ ಇರಲಿ ಸ್ಯಾಂಡಲ್ ವುಡ್ ಮತ್ತು ಕನ್ನಡ ಸಿನಿಮಾ ಪ್ರೇಕ್ಷಕರು ರಮ್ಯಾ ಅವರನ್ನ ಮಿಸ್ ಮಾಡಿಕೊಳ್ಳುತ್ತಿರುವುದಂತು ನಿಜ. ಪದ್ಮಾವತಿಗೆ ಅದೆಷ್ಟೇ ವಯಸ್ಸಾದರೂ ರಮ್ಯಾ ಸಿನಿಮಾಗಳಲ್ಲಿ ಅಭಿನಯಿಸಬೇಕು ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

ಕಡೆಗೂ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಸಹಾಯ ಹಸ್ತ ಚಾಚಿದ ಸಲ್ಮಾನ್!

English summary
Former Kannada actress Ramya stayed in Delhi. Ramya is no longer in Delhi, Ramya has stated that she does not act in movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X