For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಮದುವೆಯಾಗುವ ಹುಡುಗ ಹೀಗಿರಬೇಕಂತೆ, ನಿಮ್ಮಲ್ಲಿದೆಯೇ ಈ ಗುಣ?

  |

  ನಟಿ ರಮ್ಯಾ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಈಗಾಗಲೇ ತಮ್ಮ ಹೊಸ ಸಿನಿಮಾ ಘೋಷಿಸಿರುವ ರಮ್ಯಾ, ಮತ್ತೆ ಬೆಳ್ಳಿತೆರೆ ಮೇಲೆ ಮಿನುಗಲು ಕಾತರರಾಗಿದ್ದಾರೆ.

  ಕಳೆದ ಕೆಲವು ವರ್ಷಗಳಿಂದ ಮನೊರಂಜನಾ ಕ್ಷೇತ್ರದಿಂದಲೇ ದೂರವಾಗಿಬಿಟ್ಟಿದ್ದ ರಮ್ಯಾ ಇದೀಗ, ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡು ಮಿಂಚು ಹರಿಸಿದರು. ವರ್ಷಗಳ ಬಳಿಕ ಮತ್ತೆ ಸಿನಿಮಾ, ಟಿವಿ ಸಂಬಂಧಿ ವೇದಿಕೆಯೊಂದರ ಮೇಲೆ ರಮ್ಯಾ ಕಾಣಿಸಿಕೊಂಡರು.

  ಅಪ್ಪು ಪರಂಪರೆಯನ್ನು ಯುವ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ: ರಮ್ಯಾ ಮೆಚ್ಚುಗೆಅಪ್ಪು ಪರಂಪರೆಯನ್ನು ಯುವ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ: ರಮ್ಯಾ ಮೆಚ್ಚುಗೆ

  ಈ ಸಮಯದಲ್ಲಿ ತಮ್ಮ ಕಮ್‌ಬ್ಯಾಕ್ ಬಗ್ಗೆ ಮಾತನಾಡಿರುವ ನಟಿ ರಮ್ಯಾ, ತಮ್ಮ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ನಟಿ ರಮ್ಯಾ ಹಲವರ ಕ್ರಶ್ಶು, ಆದರೆ ಮದುವೆಗೆ ಯಾಕೋ ಇನ್ನೂ ಮನಸ್ಸು ಮಾಡಿಲ್ಲ, ಆದರೆ ಅನುಬಂಧ ವೇದಿಕೆ ಮೇಲೆ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ.

  ಕಾರ್ಯಕ್ರಮದ ನಿರೂಪಣೆ ಮಾಡಿದ ಅಕುಲ್ ಬಾಲಾಜಿ, ಎಂದಿನ ತಮ್ಮ ವಾಚಾಳಿ ಧಾಟಿಯಲ್ಲಿ, ರಮ್ಯಾ ಅವರನ್ನು ಅವರ ಪ್ರೀತಿಯ ಹುಡುಗನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಮಾತನಾಡಿರುವ ರಮ್ಯಾ, ಮೊದಲಿಗೆ ತಾವು ಸಿಂಗಲ್ ಆಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

  ''ನಾನು ಸಿಂಗಲ್ ಆಗಿದ್ದೇನೆ, ಆತ ಕೂಡ ಸಿಂಗಲ್ ಆಗಿರಬೇಕು, ಆತನಿಗೆ ಮದುವೆ ಆಗಿರಬಾರದು. ಹುಡುಗನ ಲುಕ್ಸ್ ಬಗ್ಗೆ ನಾನು ಹೆಚ್ಚು ಯೋಚನೆ ಮಾಡುವುದಿಲ್ಲ. ಅವರು ಒಳ್ಳೆಯ ಮನುಷ್ಯರಾಗಿರಬೇಕು. ಅವರಲ್ಲಿ ಕರುಣೆಯ ಗುಣ ಹೆಚ್ಚಿಗೆ ಇರಬೇಕು'' ಎಂದು ಹೇಳಿದ್ದಾರೆ.

  ನಟಿ ರಮ್ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿ ಸಂಸದೆಯಾಗಿ, ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಹುದ್ದೆಯ ಜವಾಬ್ದಾರಿ ನಿರ್ವಹಿಸಿ ಈಗ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜಕೀಯದಿಂದ ಬಹುತೇಕ ದೂರವಾಗಿರುವ ರಮ್ಯಾ, ಇದೀಗ ಮತ್ತೆ ಸಿನಿಮಾ ರಂಗ ಪ್ರವೇಶಿಸುತ್ತಿದ್ದು, ತಮ್ಮ ಹೊಸ ಸಿನಿಮಾವನ್ನು ಕೆಲ ದಿನಗಳ ಹಿಂದಷ್ಟೆ ಘೋಷಿಸಿದ್ದಾರೆ.

  ನಟಿ ರಮ್ಯಾ, 'ಸ್ವಾತಿ ಮುತ್ತಿನ ಮಳೆಹನಿಯೆ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾದ ನಿರ್ದೇಶನವನ್ನು ರಾಜ್ ಬಿ ಶೆಟ್ಟಿ ಮಾಡುತ್ತಿದ್ದಾರೆ. ಅವರೇ ನಾಯಕನಾಗಿ ನಟಿಸುತ್ತಿದ್ದಾರೆ ಸಹ.

  English summary
  Actress Ramya talks about her dream boy and qualities she looks for in a man who will she marry.
  Tuesday, October 11, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X