For Quick Alerts
  ALLOW NOTIFICATIONS  
  For Daily Alerts

  ಹಿಂದು ಮತ್ತು ಹಿಂದುತ್ವದ ಬಗ್ಗೆ ನಟಿ ರಮ್ಯಾ ಮಾತು

  |

  ನಟಿ ರಮ್ಯಾ ಸಿನಿಮಾ, ರಾಜಕೀಯದಿಂದ ದೂರಾಗಿದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಯೇ ಇದ್ದಾರೆ.

  ಕಾಂಗ್ರೆಸ್ ಪಕ್ಷದ ವಕ್ತಾರೆಯಾಗಿದ್ದ ನಟಿ ರಮ್ಯಾ, ಬಿಜೆಪಿಯನ್ನು ಅದರ ಧರ್ಮದ ಅಜೆಂಡಾವನ್ನು ಟೀಕಿಸುತ್ತಲೇ ಬಂದಿದ್ದರು. ಇದೀಗ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಿಂದು ಮತ್ತು ಹಿಂದುತ್ವಕ್ಕೂ ಇರುವ ವ್ಯತ್ಯಾಸದ ಬಗ್ಗೆ ಬರೆದುಕೊಂಡಿದ್ದಾರೆ ಮತ್ತು ಧರ್ಮವನ್ನು ರಾಜಕೀಯಕ್ಕೆ ಬಳಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ''ಹಿಂದುಯಿಸಂ ಮತ್ತು ಹಿಂದುತ್ವ ಎರಡೂ ಒಂದೇ ಅಲ್ಲ. ಹಿಂದುಯಿಸಂ ರಾಜಕೀಯ ರಹಿತವಾದುದು ಆದರೆ ಹಿಂದುತ್ವದಲ್ಲಿ ರಾಜಕೀಯ ಇದೆ. ಹಿಂದು ಎಂದರೆ ಎಲ್ಲರನ್ನೂ ಒಳಗೊಳ್ಳುವುದು ಮತ್ತು ಎಲ್ಲರನ್ನೂ ಪ್ರೀತಿಸುವುದು. ಆದರೆ ಹಿಂದುತ್ವ ಇದಕ್ಕೆ ವಿರುದ್ಧವಾದುದು. ನಿಜವಾದ ಹಿಂದುವಾದವನು ಎರಡರ ನಡುವಿನ ಅಂತರವನ್ನು ಗುರುತಿಸುತ್ತಾನೆ'' ಎಂದಿದ್ದಾರೆ.

  ನಟಿ ರಮ್ಯಾ ಹಾಕಿರುವ ಈ ಪೋಸ್ಟ್‌ಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಟಿ ರಮ್ಯಾ ರಾಜಕೀಯಕ್ಕೆ ಪ್ರವೇಶ ಪಡೆದು ಕಾಂಗ್ರೆಸ್‌ನ ಐಟಿ ವಿಂಗ್ ಮುಖ್ಯಸ್ಥೆ ಆದಾಗಿನಿಂದಲೂ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಅವುಗಳ ಸಿದ್ಧಾಂತವನ್ನು ವಿರೋಧಿಸುತ್ತಲೇ ಬಂದಿದ್ದಾರೆ.

  ಧರ್ಮಾಂಧತೆ, ಹಿಂದುತ್ವ ಹೇರಿಕೆ, ಮಹಿಳಾ ಸ್ವಾತಂತ್ರ್ಯ ಇನ್ನೂ ಹಲವು ವಿಷಯಗಳ ಬಗ್ಗೆ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಗ್ಗೆ ನಟಿ ರಮ್ಯಾ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಎನ್‌ಸಿಬಿಯ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ನಂತರ ಆರ್ಯನ್ ಖಾನ್ ಜಾಮೀನಿನ ಮೇಲೆ ಬಿಡುಗಡೆ ಆದಾಗ ಸಂತಸ ವ್ಯಕ್ತಪಡಿಸಿದ್ದರು.

  English summary
  Actress Ramya told difference between Hinduism and Hindutva. She oppose religion used for political gain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X