For Quick Alerts
  ALLOW NOTIFICATIONS  
  For Daily Alerts

  ಪೋಷಕ ಕಲಾವಿದರ ಸಂಘದಲ್ಲಿ 'ಅಶ್ಲೀಲ' ವಿವಾದ: ಡಿಂಗ್ರಿ ನಾಗರಾಜ್ Vs ನಟಿ ರಾಣಿ

  |

  ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿವಾದ ಆರಂಭ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟ ಡಿಂಗ್ರಿ ನಾಗರಾಜ್ ಹಾಗೂ ಪೋಷಕ ಕಲಾವಿದೆ ರಾಣಿ ನಡುವೆ ಕಿತ್ತಾಟ ಆರಂಭ ಆಗಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ನಟಿಯರಿಗೆ ಅಶ್ಲೀಲ ವಿಡಿಯೋ ಕಳಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

  ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಉಪಾಧ್ಯಕ್ಷರೂ ಆಗಿರುವ ರಾಣಿಯ ಗಂಭೀರ ಆರೋಪ ಈಗ ಚರ್ಚೆ ಗ್ರಾಸವಾಗಿದೆ. ನಟಿಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ. ಸಂಘದ ಹಣವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ ಎಂದೂ ಆರೋಪ ಮಾಡಿದ್ದಾರೆ.

  "ಕರ್ನಾಟಕ ಪೋಷಕ ಕಲಾವಿದರ ಸಂಘ ತುಂಬಾನೇ ಚೆನ್ನಾಗಿದೆ. ಈ ಸಂಘದ ವಿರುದ್ಧ ನಾನು ಯಾವತ್ತೂ ಮಾತಾಡಿಲ್ಲ. ಆದರೆ, ಈಗ ಅಧ್ಯಕ್ಷರು ಡಿಂಗ್ರಿ ನಾಗರಾಜ್‌ ಸರ್ ಇರಬಹುದು ಅಥವಾ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಇರಬಹುದು, ಖಜಾಂಚಿ ಸುರೇಶ್ ಇವರಿಗೆ ಯಾವುದೇ ವಿಷಯವನ್ನು ನೇರವಾಗಿ ಹೇಳಿದರೆ, ಅಲ್ಲಿ ನಂದೇ ತಪ್ಪು ಅಂತ ಹೇಳುತ್ತಾರೆ. ಸೊಂಟದ ಕೆಳಗಿನ ಮಾತು ಆಡುತ್ತಾರೆ." ಎಂದು ಪೋಷಕ ನಟಿ ರಾಣಿ ಆರೋಪ ಮಾಡಿದ್ದಾರೆ.

  "ನಾವು ಯಾವುದೋ ಸ್ಪಾನ್ಸರರ್ ಹತ್ರ ಹೋಗಿದ್ದು, ಅಲ್ಲಿಂದ ಎಷ್ಟು ಹಣ ಬಂತು ಅನ್ನೋದನ್ನು ತಿಳಿಸೋ ಹಾಗಿಲ್ಲ. ಹಾಗೇ ಏನಾದ್ರೂ ಹೇಳಿದ್ರೆ, ಯಾಕೆ ತಿಳಿಸಿದ್ರಿ ಅಂತ ಪ್ರಶ್ನೆ ಮಾಡ್ತಾರೆ. ಇದನ್ನೇ ಜಿದ್ದಾಗಿಟ್ಟುಕೊಂಡು ಅಶ್ಲೀಲ ವಿಡಿಯೋ ಕಳಿಸೋದು, ನಾವು ಬರುತ್ತಿದ್ದೇವೆ ಅಂದ್ರೆ, ನಮ್ಮನ್ನು ನೋಡಿ ಬೇರೆ ತರಹನೇ ಮಾತಾಡೋದು ಮಾಡುತ್ತಾರೆ. ಈಗ ಆನ್‌ಲೈನ್‌ನಲ್ಲಿ ಕ್ಲಾಸ್ ಇರುವುದರಿಂದ ಇಂತಹ ವಿಡಿಯೋ ಬರುತ್ತಿದ್ದಂತೆ ಡಿಲೀಟ್ ಮಾಡುತ್ತಿದ್ದೆವು. ಕಳೆದ ವರ್ಷ ಕೂಡ ಕಾನಿಷ್ಕಾ ಹೋಟೆಲ್‌ನಲ್ಲಿ ಮೀಟಿಂಗ್ ನಡೆದಾಗ, ಇದೇ ವಿಚಾರವಾಗಿ ದೊಡ್ಡ ಗಲಾಟೆಯಾಗಿದೆ. ಅಂದು ಅಲ್ಲಿದ್ದ 300 ಮಂದಿಗೂ ಈ ವಿಷಯ ಗೊತ್ತು." ಎಂದು ಆಶ್ಲೀಲ ವಿಡಿಯೋ ಕಳಿಸುವ ಬಗ್ಗೆ ಕಿಡಿಕಾರಿದ್ದಾರೆ.

  Actress Rani And Karnataka Supporting Artist Association President Dingri Nagaraj Controversy

  ಇತ್ತ ಡಿಂಗ್ರಿ ನಾಗರಾಜ್ ತಮ್ಮ ಸಂಘದ ಉಪಾಧ್ಯಕ್ಷೆಯಾಗಿರುವ ರಾಣಿ ಆರೋಪ ಸುಳ್ಳು ಎನ್ನುತ್ತಿದ್ದಾರೆ. ಕೆಲವು ಸದಸ್ಯರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಅದರ ಹೊಟ್ಟೆ ಉರಿಗೆ ಹೀಗೆ ಆರೋಪ ಮಾಡುತ್ತಿದ್ದಾರೆ ಅನ್ನೋದು ಡಿಂಗ್ರಿ ನಾಗರಾಜ್ ವಾದ. "ಈ ಪೋನ್‌ನಲ್ಲಿ ಅಶ್ಲೀಲವಾದ ವಿಡಿಯೋ ಕಳಿಸೋಕೆ ಆಗುತ್ತಾ? ಬರೀ ಇನ್‌ಕಮಿಂಗ್ ಔಟ್‌ಗೋಯಿಂಗ್ ಅಷ್ಟೇ ಇರೋದು. ಮೊಬೈಲ್ ಬಂದಾಗಿನಿಂದ ನಾನು ಇದೇ ಮೊಬೈಲ್ ಉಪಯೋಗಿಸುತ್ತಿದ್ದೇವೆ. ಆಯಮ್ಮ ಮಾಡಿದ್ದೆಲ್ಲಾ ಸುಳ್ಳು. ಎಲ್ಲಾ ಹೊಟ್ಟೆಕಿಚ್ಚು. ಅವರನ್ನು ಸಂಘದಿಂದ ಕಿತ್ತಾಕಿದ್ದಾರೆ ಅನ್ನೋ ಹೊಟ್ಟೆ ಉರಿಗೆ ಹೀಗೆಲ್ಲಾ ಮಾಡಿದ್ದಾರೆ. ಅವರು ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೂ ಕಿತ್ತಾಕಿದ್ದೇವೆ. ಎನ್ನುತ್ತಿದ್ದಾರೆ ಡಿಂಗ್ರಿ ನಾಗರಾಜ್.

  English summary
  Actress Rani And Karnataka Supporting Artist Association President Dingri Nagaraj Controversy, Know More.
  Thursday, November 17, 2022, 23:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X