For Quick Alerts
  ALLOW NOTIFICATIONS  
  For Daily Alerts

  ಮಲೆನಾಡಿನಲ್ಲಿ ಅಡಿಕೆ ಸುಲಿತ ಮಾಡುತ್ತಿರುವ 'ಕನ್ನಡತಿ' ರಂಜನಿ ರಾಘವನ್

  |

  ಸ್ಯಾಂಡಲ್ ವುಡ್ ನ ನಟಿ ರಂಜನಿ ರಾಘವನ್ ಸದ್ಯ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ರಂಜನಿ, ಇದೀಗ ಕನ್ನಡತಿ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದಾರೆ.

  ಅಪ್ಪಟ ಕನ್ನಡ ಮಾತನಾಡುವ ಭುವಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ರಂಜಿನಿ ಸದ್ಯ ಮಲೆನಾಡು ಸೇರಿದ್ದಾರೆ. ಅಷ್ಟೆಯಲ್ಲ ಮಲೆನಾಡಿನಲ್ಲಿ ಅಡಿಕೆ ಸುಲಿತ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಲೆನಾಡಿನಲ್ಲಿ ಸದ್ಯ ಅಡಿಕೆ ಸುಲಿತ ಜೋರಾಗಿ ನಡೆಯುತ್ತಿದೆ. ನವೆಂಬರ್ ಮತ್ತು ಡಿಸೆಂಬರ್ ಬಂತೆಂದ್ರೆ ಸಾಕು ಮಲೆನಾಡಿನ ಜನ ಅಡಿಕೆ ಕೊಯ್ಲು ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಮುಂದೆ ಓದಿ..

  ದಿಗಂತ್-ಐಂದ್ರಿತಾ ದಂಪತಿಗೆ ವಿಶ್ ಮಾಡಿದ ಕಿಚ್ಚ ಸುದೀಪ್ದಿಗಂತ್-ಐಂದ್ರಿತಾ ದಂಪತಿಗೆ ವಿಶ್ ಮಾಡಿದ ಕಿಚ್ಚ ಸುದೀಪ್

  ಅಡಿಕೆ ಸುಲಿಯುತ್ತಿರುವ ರಂಜನಿ

  ಅಡಿಕೆ ಸುಲಿಯುತ್ತಿರುವ ರಂಜನಿ

  ನಟಿ ರಂಜನಿ ಮೊದಲ ಬಾರಿಗೆ ಮಲೆನಾಡಿನ ಅಡಿಕೆ ಕೊಯ್ಲಿನಲ್ಲಿ ಭಾಗಿಯಾಗಿದ್ದಾರೆ. ಅಡಿಕೆ ಸುಲಿಯೋದು ಅಂದರೆ ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭದ ಕೆಲಸವಲ್ಲ. ರಂಜನಿಗೆ ಅಡಿಕೆ ಸುಲಿಯೋಕೆ ಬರದಿದ್ದರು, ಕಷ್ಟಪಟ್ಟು ಸ್ಥಳಿಯರ ಸಹಾಯ ಪಡೆದು ಅಡಿಕೆ ಸುಲಿಯುವುದನ್ನು ಕಲಿಯುತ್ತಿದ್ದಾರೆ.

  ಸಿನಿಮಾಗಾಗಿ ಅಡಿಕೆ ಸುಲಿಯುತ್ತಿರುವ ರಂಜನಿ

  ಸಿನಿಮಾಗಾಗಿ ಅಡಿಕೆ ಸುಲಿಯುತ್ತಿರುವ ರಂಜನಿ

  ಅಷ್ಟಕು ರಂಜನಿ ಧಾರಾವಾಹಿ, ಸಿನಿಮಾ ಬಿಟ್ಟು ಅಡಿಕೆ ಸುಲಿತ ಹಿಡಿದ್ರಾ? ಅಂತ ಯೋಚಿಸಬೇಡಿ, ಪುಟ್ಟಗೌರಿ ಅಡಿಕೆ ಸುಲಿಯುವುದು ಸಿನಿಮಾಗಾಗಿ. ರಂಜನಿ ಸದ್ಯ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೂದ್ ಪೇಡ ದಿಗಂತ್ ನಟಿಸುತ್ತಿರುವ ಈ ಸಿನಿಮಾದಲ್ಲಿ ರಂಜನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಅಡಿಕೆ ಬೆಳೆಗಾರನಾಗಿ ನಟಿಸುತ್ತಿರುವ ದಿಗಂತ್

  ಅಡಿಕೆ ಬೆಳೆಗಾರನಾಗಿ ನಟಿಸುತ್ತಿರುವ ದಿಗಂತ್

  ದಿಗಂತ್ ಈ ಸಿನಿಮಾದಲ್ಲಿ ಅಡಿಕೆ ಬೆಳೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ದಿಗಂತ್ ಇಂಥ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಾಗರದ ಪುಟ್ಟಹಳ್ಳಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

  ಶೂಟಿಂಗ್ ಮುಂಚೆ ಕಾಫಿ ಬ್ರೇಕ್: ದಿಗಂತ್-ಐಂದ್ರಿತಾ ರೊಮ್ಯಾಂಟಿಕ್ ಫೋಟೋ

  ಪ್ಯಾನ್ ಇಂಡಿಯಾ ಸಿನಿಮಾ.. ಕಲೆಗೆ ಗಡಿ ಇಲ್ಲ ಎಂದು ಜಗ್ಗೇಶ್ ಗೆ ಟಾಂಗ್ ಕೊಟ್ರ ಉಪೇಂದ್ರ..? | Filmibeat Kannada
  ನಾಯಕಿಯಾಗಿ ಐಂದ್ರಿತಾ ರೇ

  ನಾಯಕಿಯಾಗಿ ಐಂದ್ರಿತಾ ರೇ

  ಚಿತ್ರದಲ್ಲಿ ನಾಯಕಿಯಾಗಿ ಐಂದ್ರಿತಾ ರೇ ನಟಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದಿಂದ ಐಂದ್ರಿತಾ ಮತ್ತು ದಿಗಂತ್ ಪೋಸ್ಟರ್ ರಿಲೀಸ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟರ್ ನೋಡಿ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೆ 8 ವರ್ಷಗಳ ಬಳಿಕ ಐಂದ್ರಿತಾ ಮತ್ತು ದಿಗಂತ್ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ.

  English summary
  Actress Ranjani Raghavan busy with Arecanut harvesting in Malnad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X