»   » ಗಳಗಳನೆ ಕಣ್ಣೀರಿಟ್ಟ ಸಿನಿಮಾ ತಾರೆ ರಂಜಿತಾ

ಗಳಗಳನೆ ಕಣ್ಣೀರಿಟ್ಟ ಸಿನಿಮಾ ತಾರೆ ರಂಜಿತಾ

Posted By:
Subscribe to Filmibeat Kannada
ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಗೆ ಒದಗಿರುವ ಪರಿಸ್ಥಿತಿಯನ್ನು ಕಂಡು ಸಿನಿಮಾ ತಾರೆ ರಂಜಿತಾ ಗೋಳೋ ಎಂದು ಕಣ್ಣೀರಿಟ್ಟಿದ್ದಾರೆ. ಸ್ವಾಮೀಜಿಗಳ ತೇಜೋವಧೆ ಮಾಡಲು ವ್ಯವಸ್ಥಿತವಾಗಿ ಸಂಚು ನಡೆಯುತ್ತಿದೆ ಎಂದು ರಂಜಿತಾ ಕಣ್ಣೀರಾಕಿದ್ದಾರೆ.

ಈ ಹಿಂದೆ ಸ್ವಾಮಿ ನಿತ್ಯಾನಂದ ಜೊತೆ ತಾನು ರಾಸಲೀಲೆಯಲ್ಲಿ ಭಾಗಿಯಾಗಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಇವೆಲ್ಲಾ ಕಟ್ಟುಕತೆ. ಇಲ್ಲಸಲ್ಲದನ್ನು ಸೃಷ್ಟಿಸಿ ನನ್ನ ತೇಜೋವಧೆಗೂ ಪ್ರಯತ್ನಿಸಲಾಗಿತ್ತು ಎಂದಿದ್ದಾರೆ.

ಈ ಎಲ್ಲಾ ರಾದ್ಧಾಂತದಿಂದ ಮನಸ್ಸಿಗೆ ತೀವ್ರ ಬೇಸರವಾಗಿದೆ. ನ್ಯಾಯಕ್ಕಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದೇನೆ. ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. ನ್ಯಾಯಾಂಗದ ಬಗ್ಗೆ ಗೌರವ ಇದ್ದು ಸತ್ಯಾಂಶ ಹೊರಬೀಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನನ್ನ ಜೀವನದಲ್ಲಿ ಎದುರಿಸಿದ ಸಂಕಷ್ಟಗಳು, ಘಟನಾವಳಿಗಳಿಗೆ ಅಕ್ಷರ ರೂಪ ನೀಡಿ ಆತ್ಮಕತೆಯಾಗಿಸುತ್ತೇನೆ ಎಂದೂ ರಂಜಿತಾ ಹೇಳಿದ್ದಾರೆ. ಸ್ವಾಮಿ ನಿತ್ಯಾನಂದ ಅವರ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುವುದಾಗಿ ರಂಜಿತಾ ಕೆಲದಿನಗಳ ಹಿಂದೆ ಹೇಳಿದ್ದರು.

ಈ ಸಾಕ್ಷ್ಯಚಿತ್ರದಲ್ಲಿ ಸ್ವಾಮಿ ನಿತ್ಯಾನಂದರ ಹಾಗೂ ಅವರ ಭಕ್ತ ಸಮೂಹದ ಹಲವಾರು ಉತ್ತಮ ಕೆಲಸ ಕಾರ್ಯಗಳನ್ನು ತೋರಿಸಲಾಗುತ್ತದೆ. ಹಿಂದೂ ಧರ್ಮವನ್ನು ಮುನ್ನಡೆಸಲು ಸ್ವಾಮಿ ನಿತ್ಯಾನಂದ ಅವರೇ ಸೂಕ್ತ ವ್ಯಕ್ತಿ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಕೋಟ್ಯಂತರ ಅನುಯಾಯಿಗಳನ್ನು ಸಂಪಾದಿಸಿದರು ಎಂದು ರಂಜಿತಾ ವರ್ಣರಂಜಿತವಾಗಿ ಬಣ್ಣಿಸಿದ್ದಾರೆ.

ಸ್ವಾಮಿ ನಿತ್ಯಾನಂದ ಅವರ ಕೋಟ್ಯಂತರ ಅನುಯಾಯಿಗಳಲ್ಲಿ ನಾನೂ ಒಬ್ಬಳು. ಸ್ವಯಂಸೇವಕಿಯಾಗಿ ಅವರ ಆಶ್ರಮಕ್ಕೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಅವರ ಅನುಯಾಯಿಯಾಗಿಯೇ ಉಳಿಯುತ್ತೇನೆ. ಅವರ ಆಶ್ರಮದಲ್ಲಿ ನನಗೆ ಯಾವುದೇ ವಿಶೇಷ ಸ್ಥಾನಮಾನವಿಲ್ಲ ಎಂದು ರಂಜಿತಾ ಹೇಳಿಕೊಂಡಿದ್ದನ್ನು ಇಲ್ಲಿ ಮೆಲುಕು ಹಾಕಬಹುದು. (ಏಜೆನ್ಸೀಸ್)

English summary
Actress Ranjitha was all in tears over series of incidents happened to Swamy Nithyanada. However Ramanagar JMFC court today (Jun.14) grant conditional bail to Swami Nithyananda, later he was sent to Judicial custody and lodged in Mysore Jail. In the mean while, Ranjitha has said that she will make a documentary film on Swamy Nithyananda.
Please Wait while comments are loading...