For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ... ವೆಲ್ ಕಮ್ ಟು ಟಿಕ್ ಟಾಕ್

  |

  ಟಿಕ್ ಟಾಕ್... ಇಂದಿನ ಟ್ರೆಂಡ್. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳ ಕಾರುಬಾರು ಜೋರಾಗಿ ನಡೆಯುತ್ತಿದೆ. ಕೆಲವು ಬಾರಿ ಇದು ಮಜಾ ನೀಡಿದರೆ, ಇನ್ನು ಕೆಲವು ಬಾರಿ ಕಿರಿಕಿರಿ ಉಂಟು ಮಾಡುತ್ತದೆ. ಈ ಲೋಕಕ್ಕೆ ಈಗ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ.

  ಟಿಕ್ ಟಾಕ್ ಗೆ ಮನ ಸೋತಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆದಿದ್ದಾರೆ. Iamrashmika ಅವರ ಟಿಕ್ ಟಾಕ್ ಹ್ಯಾಂಡಲ್ ಆಗಿದೆ. ಟಿಕ್ ಟಾಕ್ ಖಾತೆ ಮೂಲಕ ತಮ್ಮ ಮುಂದಿನ ಸಿನಿಮಾ 'ಡಿಯರ್ ಕಾಮ್ರೆಡ್' ಬಗ್ಗೆ ವಿಷಯಗಳನ್ನು ರಶ್ಮಿಕಾ ಹಂಚಿಕೊಳ್ಳಲಿದ್ದಾರೆ.

  ಜುಲೈ 11ಕ್ಕೆ ಬಿಗ್ ಸರ್ಪ್ರೈಸ್ ಕೊಡಲಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ

  ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಸದಾ ಸಕ್ರೀಯವಾಗಿರುವ ನಟಿ. ಇಷ್ಟು ದಿನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದ ಅವರು, ಈಗ ಟಿಕ್ ಟಾಕ್ ಗೆ ಪ್ರವೇಶ ಮಾಡಿದ್ದಾರೆ.

  ತಮ್ಮ 'ಡಿಯರ್ ಕಾಮ್ರೆಡ್' ಸಿನಿಮಾದ ಎಲ್ಲ ಅಪ್ ಡೇಟ್ ಗಾಗಿ ತಮ್ಮ ಟಿಕ್ ಟಾಕ್ ಖಾತೆಯನ್ನ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ರಶ್ಮಿಕಾ ತಿಳಿಸಿದ್ದಾರೆ. ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಕಾಂಬಿನೇಶನ್ ನ 'ಡಿಯರ್ ಕಾಮ್ರೆಡ್' ಚಿತ್ರದ ಜುಲೈ 26 ರಂದು ಬಿಡುಗಡೆಯಾಗಲಿದೆ.

  ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ನಟನೆಯ 'ಪೊಗರು' ಸಿನಿಮಾ ಬಿಡುಗಡೆ ಆಗಬೇಕಿದೆ. ಉಳಿದಂತೆ, ತೆಲುಗು ಹಾಗೂ ತಮಿಳಿನ ಸಿನಿಮಾಗಳಲ್ಲಿ ಕರುನಾಡ ಕ್ರಶ್ ಬ್ಯುಸಿ ಇದ್ದಾರೆ. ಮಹೇಶ್ ಬಾಬು, ನಿತಿನ್ ಜೊತೆಗಿನ ಚಿತ್ರಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actress Rashmika Mandanna enters tiktok world. She will give updateds about her 'Dear Comrade' movie thow tiktok.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X