Don't Miss!
- Automobiles
ಬಹುನಿರೀಕ್ಷಿತ 'ಹೀರೋ Xoom 110 ಸಿಸಿ' ಟೀಸರ್: ಜ.30ಕ್ಕೆ ಸ್ಕೂಟರ್ ಬಿಡುಗಡೆ.. ಹೋಂಡಾ ಡಿಯೋಗೆ ಪ್ರತಿಸ್ಪರ್ದಿ!
- News
ಬೆಂಗಳೂರಿನ 300 ಕಡೆ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು
- Technology
ಮೆಗಾ ರಿಪಬ್ಲಿಕ್ ಡೇ ಸೇಲ್: ಫೋನ್ಗಳಿಗೆ ಭಾರೀ ಡಿಸ್ಕೌಂಟ್, ಗಮನ ಸೆಳೆದ ಆಫರ್!
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Sports
4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್: ಖಡಕ್ ವಾರ್ನಿಂಗ್ ಕೊಟ್ಟ ರೆಫರಿ
- Finance
ಹೊಸ ಕುಟುಂಬ ಸದಸ್ಯರ ಹೆಸರು ರೇಷನ್ ಕಾರ್ಡ್ಗೆ ಹೀಗೆ ಅಪ್ಡೇಟ್ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಸುದೀಪ್ ಸರ್ ಹಾರ, ಮೊಟ್ಟೆ, ಕಲ್ಲು ಅಂದ್ರು, ರಕ್ತ ಬಂದ್ರೆ ಏನು ಮಾಡೋದು?": ರಶ್ಮಿಕಾ ಪ್ರಶ್ನೆ
ರಶ್ಮಿಕಾ ಮಂದಣ್ಣ ಮಾತುಗಳು ಪದೇ ಪದೇ ವಿವಾದ ಸೃಷ್ಟಿಸುತ್ತಿದೆ. ಇದೇ ಕಾರಣಕ್ಕೆ ಪದೇ ಪದೇ ಟ್ರೋಲ್ ಕೂಡ ಆಗುತ್ತಿದ್ದಾರೆ. ಆಕೆಯ ಸಿನಿಮಾಗಳನ್ನು ಕರ್ನಾಟಕದಿಂದ ಬ್ಯಾನ್ ಮಾಡಬೇಕು ಎನ್ನುವ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದೇ ವಿಚಾರವಾಗಿ ನಟ ಸುದೀಪ್ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಕಿವಿ ಹಿಡಿದ್ದರು. ಸೆಲೆಬ್ರೆಟಿ ಅಂದಮೇಲೆ ಹಾರ, ಮೊಟ್ಟೆ, ಕಲ್ಲು ಎಲ್ಲಾ ಬೀಳುತ್ತದೆ. ಎಚ್ಚರಿಕೆಯಿಂದ ಇರಬೇಕು ಎಂದಿದ್ದರು. ಈ ಬಗ್ಗೆ ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.
ತೆಲುಗು ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್, ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ರೂಮರ್ಸ್, ಸೌತ್ ಸಾಂಗ್ಸ್ ಹಾಗೂ ಬಾಲಿವುಡ್ ಸಾಂಗ್ಸ್ ಬಗ್ಗೆ ತಾವು ಹೇಳಲು ಹೊರಟಿದ್ದು ಏನು? ಕೊನೆಗೆ ಆಗಿದ್ದೇನು? ಎನ್ನುವುದರ ಬಗ್ಗೆಯೂ ಮಾತನಾಡಿದ್ದಾರೆ. ಪದೇ ಪದೇ ಟ್ರೋಲ್ ಆಗುತ್ತಿರುವುದರಿಂದ ನೋವಾಗುತ್ತದೆ. ನಮಗೆ ನೋವಾದರೂ ಪರವಾಗಿಲ್ಲ. ಇದರಿಂದ ನಮ್ಮ ಕುಟುಂಬ ಸದಸ್ಯರಿಗೆ ತೊಂದರೆ ಆಗಬಾರದು ಎಂದಿದ್ದಾರೆ.
ವಿಜಯ್ ದೇವರಕೊಂಡ ಜೊತೆಗೆ ತಮ್ಮ ಹೆಸರನ್ನು ಲಿಂಕ್ ಮಾಡಿ ಮಾತನಾಡುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೀಳುಮಟ್ಟದ ಭಾಷೆ ಬಳಸಿ ಪದೇ ಪದೇ ಟ್ರೋಲ್ ಮಾಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸುದೀಪ್ ಮಾತಿಗೂ ಪ್ರತಿಕ್ರಿಯಿಸಿದ್ದಾರೆ.

ಅಂದು ಸುದೀಪ್ ಕಿವಿ ಮಾತು
"ಪಬ್ಲಿಕ್ ಫಿಗರ್ ಅಂದಮೇಲೆ ಹಾರ, ಮೊಟ್ಟೆ, ಟೊಮೆಟೋ, ಕಲ್ಲು ಎಲ್ಲಾ ಬೀಳುತ್ತೆ. ಇಂತಹ ಸನ್ನಿವೇಶಗಳನ್ನೆಲ್ಲಾ ನಿಭಾಯಿಸಲು ಕಲಿಬೇಕು, ಸ್ಟ್ರಾಂಗ್ ಆಗ್ಬೇಕು. ಎಚ್ಚರಿಕೆ ವಹಿಸಬೇಕು. ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎನ್ನುವುದು ಗೊತ್ತಾಗಬೇಕು. ನೀವು ಆರಂಭದಿಂದ ಇದನ್ನು ಅಭ್ಯಾಸ ಮಾಡಿಕೊಂಡು ಬಂದ್ರೆ, ಸಮಸ್ಯೆಗೆ ಸಿಲುಕುವುದಿಲ್ಲ. ಮೊಬೈಲ್ ಬೇಕು, ಸೋಶಿಯಲ್ ಮೀಡಿಯಾ ಬೇಕು. ಅದ್ರಲ್ಲಿ ಅಕೌಂಟ್ ಕೂಡ ಬೇಕು. 2 ಮಿಲಿಯನ್, 10 ಮಿಲಿಯನ್ ಫಾಲೋಯಿಂಗ್ ಕೂಡ ಬೇಕು. ಆದರೆ ಈ ನೆಗೆಟಿವಿಟಿ ಮಾತ್ರ ಬೇಡ ಎಂದರೆ ಹೇಗೆ? ಎಂದಿದ್ದರು.

ಕಿಚ್ಚನ ಮಾತಿಗೆ ರಶ್ಮಿಕಾ ಪ್ರತಿಕ್ರಿಯೆ
ರಶ್ಮಿಕಾ ಮಂದಣ್ಣ ಸುದೀಪ್ ಮಾತಿಗೆ ಉತ್ತರಿಸುತ್ತಾ "ಇತ್ತೀಚೆಗೆ ನನ್ನ ನೆಚ್ಚಿನ ನಟನ ಸಂದರ್ಶನ ನೋಡಿದೆ. ನಿಮಗೆ ಹಾರ ಬೀಳುತ್ತದೆ ಎಂದಮೇಲೆ, ಮೊಟ್ಟೆ, ಟೊಮೆಟೋ, ಕಲ್ಲು ಕೂಡ ಬೀಳಬಹುದು. ನೀವು ಎಲ್ಲರಿಗೂ ಸಿದ್ಧರಿರಬೇಕು ಎಂದರು. ನಾನು ಸಂಪೂರ್ಣವಾಗಿ ಅದನ್ನು ಒಪ್ಪುತ್ತೇನೆ. ಯಾಕಂದ್ರೆ ನಾನು ಪಬ್ಲಿಕ್ ಫಿಗರ್, ಆದರೆ ಆ ಕಲ್ಲು ನನಗೆ ಪೆಟ್ಟು ಮಾಡುತ್ತಿದೆ, ಅದರಿಂದ ನೋವಾಗಿ ರಕ್ತ ಸುರಿಯುತ್ತದೆ ಅಂದ್ರೆ, ಅದನ್ನು ಒಪ್ಪಲು ಸಾಧ್ಯವಿಲ್ಲ" ಎಂದು ರಶ್ಮಿಕಾ ಹೇಳಿದ್ದಾರೆ.

ಸೌತ್ ಸಾಂಗ್ಸ್ ಹೇಳಿಕೆಗೆ ಸ್ಪಷ್ಟನೆ
ಅದೇ ಸಂದರ್ಶನದಲ್ಲಿ ನಟಿ ರಶ್ಮಿಕಾ, ಸೌತ್ ಸಾಂಗ್ಸ್, ಬಾಲಿವುಡ್ ಸಾಂಗ್ಸ್ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಮಿಷನ್ ಮಜ್ನು ಸಾಂಗ್ ರಿಲೀಸ್ ಈವೆಂಟ್‌ನಲ್ಲಿ ರಶ್ಮಿಕಾ ನೀಡಿದ್ದ ಅದೊಂದು ಹೇಳಿಕೆ ದೊಡ್ಡ ಚರ್ಚೆ ಹುಟ್ಟಾಕ್ಕಿತ್ತು. ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ಸ್ ಸಾಂಗ್ಸ್ ಇದೆ. ಸೌತ್‌ನಲ್ಲಿ ಬರೀ ಮಾಸ್, ಮಸಾಲಾ ಸಾಂಗ್ಸ್ ಮಾತ್ರ ಬಂದಿವೆ ಎಂದು ರಶ್ಮಿಕಾ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಡಗಿನ ಬೆಡಗಿ "ನಾನು ಏನೋ ಹೇಳಲು ಹೋದೆ. ಅಷ್ಟರಲ್ಲಿ ಕೆಲವರು ನಡುವೆ ಬಾಯಿ ಹಾಕಿ ತಡೆದರು ಅದು ಮತ್ತೇನೋ ಆಯಿತು"

ನಾನು ಹೇಳಿದ್ದು ಬೇರೆ ಸ್ವರೂಪ ಪಡೀತು
"ನಾನು ಮಾತನಾಡುತ್ತಿದ್ದಾಗ ಮಧ್ಯೆ ಬಾಯಿ ಹಾಕಿ ತಡೆದಿದ್ದು ನೋಡಿ, ನಾನು ಅಂದುಕೊಂಡೆ, ಸಮಯ ಇಲ್ಲ. ಅದಕ್ಕೆ ತಡೆಯುತ್ತಿದ್ದಾರೆ. ಎಂದುಕೊಂಡೆ. ಅಸಲಿಗೆ ನಾನು ಹೇಳಲು ಬಯಸಿದ್ದು ಬೇರೆ. ನಮ್ಮ ಸೌತ್‌ನಲ್ಲಿ ಮಾಸಿ ಸಾಂಗ್ಸ್, ಐಟಂ ಸಾಂಗ್ಸ್, ಮಾಸ್ ಮಸಾಲಾ ಸಾಂಗ್ಸ್ ಎಲ್ಲಾ ಇದೆ. ಆದ್ರೆ ನನ್ನ ಕರಿಯರ್‌ನಲ್ಲಿ ಸಾಕಷ್ಟು ರೊಮ್ಯಾಂಟಿಕ್ ಸಾಂಗ್ಸ್ ಸಿಕ್ಕಿದೆ. 'ಬೆಳಗೆದ್ದು ಯಾರ ಮುಖವಾ', 'ಚೂಸಿ ಚೂಡಂಗಾನೆ', 'ಕಡಲಲ್ಲೇ', 'ಇಂಕೇಮ್ ಕಾವಾಲೆ', 'ಶ್ರೀವಲ್ಲಿ' ಎಲ್ಲವೂ ನನ್ನ ಸಾಂಗ್ಸ್. ಅದಕ್ಕೆ ಬಹಳ ಹೆಮ್ಮೆ ಇದೆ. ಆದರೂ ಬಾಲಿವುಡ್‌ನ 70, 80 ದಶಕದ ಹಾಡುಗಳು ಮನೆಯಲ್ಲಿ ಕೇಳುತ್ತಿದ್ದೆವು, ಎಂದು ಹೇಳಲು ಮುಂದಾಗಿದ್ದೆ. ಅಷ್ಟರಲ್ಲಿ ಇಷ್ಟೆಲ್ಲಾ ಆಯಿತು. ಅದು ಮತ್ತೇನೋ ಸ್ವರೂಪ ಪಡೆದುಕೊಂಡು ಇನ್ನೇನೋ ಆಯಿತು." ಎಂದು ವಿವರಿಸಿದ್ದಾರೆ.