»   » ಚಿರಯೌವನೆ ರೇಖಾ ಈಗ ಚಾಕೋಲೇಟ್ ಬೆಡಗಿ

ಚಿರಯೌವನೆ ರೇಖಾ ಈಗ ಚಾಕೋಲೇಟ್ ಬೆಡಗಿ

Posted By:
Subscribe to Filmibeat Kannada
ಬಾಲಿವುಡ್ ಚಿತ್ರರಂಗದ ಚಿರಯೌವನೆ ರೇಖಾ ಈಗ ಚಾಕೋಲೇಟ್ ಬೆಡಗಿ. ಇದೇನ್ರಿ ಇದು 58ರ ಹರೆಯದ ತಾರೆಗೂ ಚಾಕೋಲೇಟ್ ಗೂ ಏನು ಸಂಬಂಧ ಎಂಬುದು ತಾನೆ ನಿಮ್ಮ ಡೌಟು. ಅಂತಾರಾಷ್ಟ್ರೀಯ ಚಾಕೋಲೇಟ್ ಬ್ರ್ಯಾಂಡ್ ಒಂದರ ಜಾಹೀರಾತಿಗೆ ರೇಖಾ ಸಹಿ ಹಾಕಿದ್ದಾರೆ ಅಷ್ಟೆ.

ಸದ್ಯಕ್ಕೆ ಲೈಮ್ ಲೈಟ್ ನಿಂದ ಹಿಂದೆ ಸರಿದಿರುವ ರೇಖಾ ಅಭಿನಯದ ಈ ಜಾಹೀರಾತು ಶೀಘ್ರದಲ್ಲೇ ಎಲ್ಲಾ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಲಿದೆ. ತಮ್ಮ ಯೌವನಕ್ಕೂ ಚಾಕೋಲೇಟಿಗೂ ಸಂಬಂಧ ಇರುವುದಾಗಿ ರೇಖಾ ಜಾಹೀರಾತಿನಲ್ಲಿ ಹೇಳಲಿದ್ದಾರೆ ಎನ್ನಲಾಗಿದೆ.

ಈ ಕಮರ್ಷಿಯಲ್ ಜಾಹೀರಾತಿಗೆ ಆಕ್ಷನ್ ಕಟ್ ಹೇಳಿರುವವರು ಇಮ್ತಿಯಾಜ್ ಅಲಿ. ಈ ಜಾಹೀರಾತಿನಲ್ಲಿ ರೇಖಾ ಜೊತೆ ಉಳಿದ ತಾರೆಗಳನ್ನು ಬಳಸಿಕೊಳ್ಳಲು ಚಿಂತಿಸಲಾಗಿತ್ತಂತೆ. ಆದರೆ ಅವರು ಯಾರೂ ರೇಖಾ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಒಪ್ಪಲಿಲ್ಲವಂತೆ. ಅವರಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್ ಸಹ ಒಬ್ಬರು.

ಒಂದು ಕಾಲದಲ್ಲಿ ಚಿತ್ರರಸಿಕರ ಹೃದಯ ಕದ್ದಿದ್ದ ರೇಖಾ ಅವರು ಈಗ ಅಮ್ಮ, ಅಜ್ಜಿ ಪಾತ್ರಗಳ ಮೂಲಕ ಮನಗೆಲ್ಲುತ್ತಿದ್ದಾರೆ. ಸಭೆ ಸಮಾರಂಭಗಳಿಂದ ಗಾವುದ ದೂರ ಉಳಿದಿರುವ ರೇಖಾ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ವಿರಳ. ಈಗ ಚಾಕೋಲೇಟ್ ಜಾಹೀರಾತಿನ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. (ಏಜೆನ್ಸೀಸ್)

English summary
Bollywood’s most versatile actress Rekha is now going to be seen in a chocolate commercial brand. Recently, Rekha has agreed to make an appearance in an international chocolate brand.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada