»   » ಚೊಚ್ಚಲ ಮಗು ನಿರೀಕ್ಷೆಯಲ್ಲಿ 'ನ್ಯೂಸ್' ಚಿತ್ರದ ಬೆಡಗಿ

ಚೊಚ್ಚಲ ಮಗು ನಿರೀಕ್ಷೆಯಲ್ಲಿ 'ನ್ಯೂಸ್' ಚಿತ್ರದ ಬೆಡಗಿ

Posted By:
Subscribe to Filmibeat Kannada
ಕನ್ನಡದ 'ನ್ಯೂಸ್' ಹಾಗೂ 'ಉಪ್ಪಿ ದಾದಾ ಎಂಬಿಬಿಎಸ್' ಚಿತ್ರಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯಿಸಿದ್ದ ಬೆಡಗಿ ರೀಮಾ ಸೇನ್ ಈಗ ಮೂರು ತಿಂಗಳ ಗರ್ಭಿಣಿ. ಮಾರ್ಚ್ 11, 2012ರಂದು ತನ್ನ ಬಹುಕಾಲದ ಗೆಳೆಯ ಶಿವ್ ಕರಣ್ ಸಿಂಗ್ ಕೈಹಿಡಿಯುವ ಮೂಲಕ ರೀಮಾ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದ್ದರು.

ರೀಮಾ ಸೇನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ಕೇವಲ ಅವರ ಆಪ್ತರು ಹಾಗೂ ಬಂಧುಬಳಗಕ್ಕೆ ತಿಳಿಸಲಾಗಿತ್ತಂತೆ. ಆದರೆ ಸುದ್ದಿ ಅದು ಹೇಗೋ ಏನೋ ಎಲ್ಲರ ಕಿವಿಗೂ ಬಿದ್ದಿದೆ.

ಈಗ ಅವರಿಗೆ ಮೂರು ತಿಂಗಳಂತೆ. ಬಹುಶಃ ಮಾರ್ಚ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಬಹುದು ಎನ್ನುತ್ತವೆ ಮೂಲಗಳು. ಇತ್ತೀಚೆಗೆ ರೀಮಾ ಅಭಿನಯದ 'ಗ್ಯಾಂಗ್ಸ್ ಆಫ್ ವಾಸೇಪುರ್-ಪಾರ್ಟ್ 1' ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸುಮಾರು ರು.9.2 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರ ಬಾಕ್ಸಾಫೀಸಲ್ಲಿ ರು. 27.85 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿತ್ತು. ಈ ಸಂತಸ ಒಂದು ಕಡೆಯಾದರೆ ಈಗ ತಾನು ತಾಯಿಯಾಗುತ್ತಿದ್ದೇನೆ ಎಂಬ ಖುಷಿ ಮತ್ತೊಂದು ಕಡೆ. (ಏಜೆನ್ಸೀಸ್)

English summary
Kannada films News and Upii Dada MBBS fame actress Rema Sen is expecting her first child. She got married last March to Shiv Karan Singh. She has completed the first trimester and the baby is due by March second week, next year.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada